SUDDILIVE || SHIVAMOGGA
ಆಗುಂಬೆ ಬಳಿ KSRTC ಬಸ್ ನಿಂದ ಕಳಚಿಕೊಂಡ ಚಕ್ರ- Wheel removed from KSRTC bus near Agumbe
ಆಗುಂಬೆ: ಉಡುಪಿ ಕಡೆಯಿಂದ ಶಿವಮೊಗ್ಗದತ್ತ ಸಂಚರಿಸುತ್ತಿದ್ದ KSRTC ಬಸ್‌ವೊಂದು ಆಗುಂಬೆಯ ಗ್ರಾಮಪಂಚಾಯಿತಿಯ ಬಳಿ ಬೆಳಗಿನ ವೇಳೆ ಏಕಾಏಕಿ ನಿಧಾನಗೊಳಿಸುವ ಸಂದರ್ಭದಲ್ಲಿ ಒಂದು ಬದಿಯ ಚಕ್ರ ಉರುಳಿ ಬಿದ್ದ ಘಟನೆ ನಡೆದಿದೆ.
ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಪಂಚಾಯಿತಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಸ್ ಉಡುಪಿಯಿಂದ ಶಿವಮೊಗ್ಗದತ್ತ ಬಸ್ ತೆರಳುತ್ತಿತ್ತು.
ಮಾಹಿತಿಯ ಪ್ರಕಾರ, ಬಸ್ ನಿಧಾನಗತಿಯಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಮತ್ತಷ್ಟು ನಿಧಾನಗೊಳಿಸುವ ಸಂದರ್ಭದಲ್ಲಿ ಬಸ್ ನ ಚಕ್ರ ಕಳಚಿಕೊಂಡಿದೆ. ಬಸ್ ನಿಧಾನವಾಗಿದ್ದರಿಂದ ಬಸ್ ನಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗಿಲ್ಲವೆಂದು ಎಂದು ಹೇಳಲಾಗಿದೆ. ಬಸ್ ನಿಧಾನಗತಿಯಲ್ಲಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ. ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ಬಸ್ ನ ಚಕ್ರ ಕಳಚಲು ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಸಂಬಂಧಿಸಿದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
