SUDDILIVE || SHIVAMOGGA
ನಮ್ಮ ಅಪ್ಪ ಮುಖ್ಯಮಂತ್ರಿ ಆಗಿದ್ದರೆ ಮಾತ್ರ ಅವಕಾಶ ಸಿಗುತ್ತಿತ್ತೇ?' – ಸಚಿವ ಸ್ಥಾನ ಕೈತಪ್ಪಿದ ಬಳಿಕ ಗೋಪಾಲಕೃಷ್ಣ ಬೇಳೂರು ಬೇಸರ-'Would we have gotten the opportunity only if our father was the Chief Minister?' – Gopalakrishna Belur is upset after losing the ministerial post
ಬೆಂಗಳೂರು/ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರು ಕೈತಪ್ಪಿದ ಹಿನ್ನೆಲೆಯಲ್ಲಿ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೆಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಕೊನೆಯ ಕ್ಷಣದವರೆಗೂ ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿದ್ದರೂ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
"ನಿನ್ನೆ ರಾತ್ರಿ ತನಕ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ ಬೆಳಗ್ಗೆಯೊಳಗೆ ಎಲ್ಲವೂ ಬದಲಾಗಿದೆ. ಯಾವ ಕಾರಣಕ್ಕೆ ಹೀಗಾಯಿತು ಎಂಬುದು ನನಗೆ ಗೊತ್ತಿಲ್ಲ. ಎಲ್ಲ ನಾಯಕರನ್ನೂ ಭೇಟಿ ಮಾಡಿ ಮನವಿ ಮಾಡಿದ್ದೆ. ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಕೊನೆ ಕ್ಷಣದಲ್ಲಿ ನಿರಾಸೆಯಾಯಿತು" ಎಂದು ಹೇಳಿದರು.
ತಮ್ಮ ಕ್ಷೇತ್ರದ ಜನರು ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಕಾರಣ ಇದೀಗ ಅವರಿಗೆ ಉತ್ತರ ನೀಡುವುದು ಕಷ್ಟವಾಗಿದೆ ಎಂದು ಭಾವುಕರಾದ ಗೋಪಾಲಕೃಷ್ಣ, "ನಮ್ಮ ಕ್ಷೇತ್ರದ ಜನರು ಕಣ್ಣೀರು ಹಾಕುತ್ತಿದ್ದಾರೆ. ನನಗೆ ಯಾಕೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಯಾರಾದರೂ ಹೋಗಿ ಅವರಿಗೆ ಉತ್ತರ ಕೊಡಲಿ. ನಾನು ಏನು ಹೇಳಲಿ?" ಎಂದು ಪ್ರಶ್ನಿಸಿದರು.
ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಅಥವಾ ಇತರ ನಾಯಕರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, "ಪಟ್ಟಿ ಈಗಾಗಲೇ ಪ್ರಕಟವಾಗಿದೆ. ಕೆಲವೇ ಕ್ಷಣಗಳಲ್ಲಿ ಪ್ರಮಾಣವಚನವೂ ನಡೆಯಲಿದೆ. ಈಗ ಯಾರ ಜೊತೆ ಏನು ಮಾತನಾಡುವುದು? ನೋವಾಗಿದೆ, ಬೇಜಾರಾಗಿದೆ. ರಾಜಕಾರಣದಲ್ಲಿ ಇಂಥದ್ದೆಲ್ಲಾ ನಡೆಯುತ್ತದೆ" ಎಂದರು.
ಈ ವೇಳೆ ಮಧು ಬಂಗಾರಪ್ಪ ಅವರಿಗೆ ಅವಕಾಶ ದೊರಕಲು ಬಿ.ಕೆ. ಹರಿಪ್ರಸಾದ್ ಒತ್ತಡ ಕಾರಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಹಾಗೇನಿಲ್ಲ. ನಾನೂ ಅದೇ ಸಮುದಾಯದವನೇ" ಎಂದು ಉತ್ತರಿಸಿದರು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಅವಕಾಶ ನೀಡುವಂತೆ ಮನವಿ ಮಾಡಿದ್ದರೂ ಅದು ಫಲ ನೀಡಲಿಲ್ಲ ಎಂದರು.
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ, "ಇದು ಒತ್ತಡ ತಂತ್ರ ಅಲ್ಲ. ನಾಳೆ ಬೆಳಿಗ್ಗೆ 10 ಗಂಟೆಗೆ ಖಂಡಿತ ರಾಜೀನಾಮೆ ಕೊಡ್ತೇನೆ" ಎಂದು ಗೋಪಾಲಕೃಷ್ಣ ಘೋಷಿಸಿದರು. ತಮ್ಮೊಂದಿಗೆ ಹಲವು ನಾಯಕರು ಮತ್ತು ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಇನ್ನೂ ಹಲವರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದೂ ತಿಳಿಸಿದರು.
ರಾಜ್ಯ ಅಥವಾ ಹೈಕಮಾಂಡ್ ನಾಯಕರು ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ ಅವರು, "ನಾನು ಕೂಡ ಯಾರೊಂದಿಗೂ ಮಾತನಾಡಿಲ್ಲ. ಈಗ ಮಾತನಾಡಿ ಏನೂ ಪ್ರಯೋಜನವಿಲ್ಲ" ಎಂದು ಸ್ಪಷ್ಟಪಡಿಸಿದರು.
ಬೆಳೂರು ಗೋಪಾಲಕೃಷ್ಣ ಅವರ ಈ ಹೇಳಿಕೆ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮತ್ತಷ್ಟು ತೀವ್ರಗೊಂಡಿರುವುದನ್ನು ಬಿಂಬಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಬೆಳವಣಿಗೆಗಳು ಯಾವ ತಿರುವು ಪಡೆಯಲಿವೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
'ನಮ್ಮ ಅಪ್ಪ ಮುಖ್ಯಮಂತ್ರಿ ಆಗಿದ್ದರೆ ಮಾತ್ರ ಅವಕಾಶ ಸಿಗುತ್ತಿತ್ತೇ?' – ಸಚಿವ ಸ್ಥಾನ ಕೈತಪ್ಪಿದ ಬಳಿಕ ಗೋಪಾಲಕೃಷ್ಣ ಬೇಳೂರು ಬೇಸರ
"ನಮ್ಮ ಅಪ್ಪ ಯಾಕೆ ಮಿನಿಸ್ಟರ್ ಆಗಿಲ್ಲ, ನಮ್ಮ ಅಪ್ಪ ಯಾಕೆ ಮುಖ್ಯಮಂತ್ರಿ ಆಗಿಲ್ಲ ಅನ್ನೋದು ಈಗ ಅನಿಸುತ್ತದೆ. ನಮ್ಮ ಅಪ್ಪ ಮುಖ್ಯಮಂತ್ರಿ ಆಗಿದ್ದರೆ ಅಂತವರ ಮಕ್ಕಳೇ ಬರಬೇಕು. ಇಲ್ಲಾಂದ್ರೆ ಸಾಮಾನ್ಯ ಜನರು ಮುಂದೆ ಬರೋಕೆ ಆಗಲ್ಲ. ಏನು ಪ್ರಯೋಜನ ಆಗಲ್ಲ," ಎಂದು ಅವರು ಭಾವನಾತ್ಮಕವಾಗಿಯೂ ಹಾಗೂ ಕ್ಷೇತ್ರದ ಮತ್ತೋರ್ವ ಶಾಸಕರಿಗೆ ಟಾಂಗ್ ನೀಡುದ್ರಾ ಎಂದು ಅವರ ಹೇಳಿಕೆಯಿಂದ ತಿಳಿದು ಬರುತ್ತಿದೆ.
ಇದೇ ವೇಳೆ, ಸಚಿವ ಸ್ಥಾನಕ್ಕಾಗಿ ತಾವು ದೆಹಲಿ ಮಟ್ಟದಲ್ಲಿಯೂ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದಾಗಿ ತಿಳಿಸಿದ ಅವರು, "ಎಲ್ಲರನ್ನೂ ಭೇಟಿ ಮಾಡಿ ಮಾತನಾಡಿ ಬಂದಿದ್ದೇನೆ. ನಿನ್ನೆ ರಾತ್ರಿ ತನಕ ನನ್ನ ಹೆಸರು ಪಟ್ಟಿಯಲ್ಲಿ ಇತ್ತು. ನಂತರ ಅದನ್ನು ತೆಗೆದುಹಾಕಿದ್ದಾರೆ," ಎಂದು ಹೇಳಿದರು.
ಸಚಿವರ ಪಟ್ಟಿಯ ಕುರಿತು ಪ್ರತಿಕ್ರಿಯಿಸಿದ ಗೋಪಾಲಕೃಷ್ಣ ಬೇಳೂರು, "ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಬೆಂಬಲದವರ ಹೆಸರುಗಳೇ ಹೆಚ್ಚಾಗಿವೆ," ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇಂಡಿ ಶಾಸಕ ಯಶವಂತರಾಯ್ ಗೌಡ ಪಾಟೀಲ್, ಅಪ್ಪಾಜಿ ನಾಡಗೌಡ ಅವರು ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜೀನಾಮೆಗೆ ನಿರ್ಧರಿಸಿದ್ದಾರೆ.
