ಬಿಳಲುಕೊಪ್ಪದ ಬಳಿ ಪ್ರವಾಸಿ ಬಸ್–ಮೀನಿನ ಗೂಡ್ಸ್ ವಾಹನ ನಡುವೆ ಅಪಘಾತ-Accident between tourist bus and fish goods vehicle near Bilalukoppa

 SUDDILIVE || THIRTHAHALLI

ಬಿಳಲುಕೊಪ್ಪದ ಬಳಿ ಪ್ರವಾಸಿ ಬಸ್–ಮೀನಿನ ಗೂಡ್ಸ್ ವಾಹನ ನಡುವೆ ಅಪಘಾತ-Accident between tourist bus and fish goods vehicle near Bilalukoppa    
Bilalukoppa, accident


ತೀರ್ಥಹಳ್ಳಿ:
ತೀರ್ಥಹಳ್ಳಿ–ಮೇಗರವಳ್ಳಿ ಮಾರ್ಗದ ರಂಜದಕಟ್ಟೆ ಸಮೀಪದ ಬಿಳಲುಕೊಪ್ಪ ಬಳಿ ಪ್ರವಾಸಿ ಬಸ್ ಹಾಗೂ ಮೀನಿನ ಸಾಗಾಟದ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸದೇ ಪ್ರಯಾಣಿಕರು ಹಾಗೂ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿಯಂತೆ, ತಿರುಪತಿಗೆ ತೆರಳುತ್ತಿದ್ದ ಪ್ರವಾಸಿ ಬಸ್‌ವೊಂದು ಬಿಳಲುಕೊಪ್ಪದ ಟೀ ಕ್ಯಾಂಟೀನ್‌ವೊಂದರ ಬಳಿ ಚಹಾ ಕುಡಿಯಲು ರಸ್ತೆಬದಿ ನಿಲ್ಲಿಸಲಾಗಿತ್ತು. ಇದೇ ವೇಳೆ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಮೀನಿನ ಸಾಗಾಟದ ಗೂಡ್ಸ್ ವಾಹನವು ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಹಾನಿಯಾಗಿರುವುದು ತಿಳಿದುಬಂದಿದೆ. ಅಪಘಾತದ ವೇಳೆ ಬಸ್‌ನಲ್ಲಿ ಪ್ರಯಾಣಿಕರು ಇದ್ದರೇ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಘಟನೆಯಲ್ಲಿ ಯಾವುದೇ ಸಾವು ಅಥವಾ ಗಂಭೀರ ಗಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಘಟನೆಯ ನಿಖರ ಕಾರಣ ಹಾಗೂ ಎರಡೂ ವಾಹನಗಳ ಹಾನಿಯ ಪ್ರಮಾಣದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Accident between tourist bus and fish goods vehicle near Bilalukoppa   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close