ಮಹಿಳೆಯ ರಕ್ಷಣೆ: ERSS-112 ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆ-Women's Safety: Appreciation for the prompt response of ERSS-112 personnel

SUDDILIVE || SHIVAMOGGA

ಮಹಿಳೆಯ ರಕ್ಷಣೆ: ERSS-112 ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆ-Women's Safety: Appreciation for the prompt response of ERSS-112 personnel    

Kudli, tungabhadra

ಶಿವಮೊಗ್ಗ: ಚಿತ್ರದುರ್ಗದಿಂದ ERSS-112 ತುರ್ತು ಸಹಾಯವಾಣಿಗೆ ಬಂದ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಶಿವಮೊಗ್ಗ ಜಿಲ್ಲಾ ಪೊಲೀಸ್‌ ERSS ಸಿಬ್ಬಂದಿ, ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗದ ವ್ಯಕ್ತಿಯೊಬ್ಬರು ERSS-112 ಗೆ ಕರೆ ಮಾಡಿ, ತಮ್ಮ ಪತ್ನಿ ಹೊಳೆಹೊನ್ನೂರಿನ ಕೂಡ್ಲಿ ಬಳಿ ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ERSS ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಆ ಸಮಯದಲ್ಲಿ ERV ಕರ್ತವ್ಯದಲ್ಲಿದ್ದ ಸಿಪಿಸಿ ಅಶೋಕ್ ಕುಮಾರ್ ಹಾಗೂ ಚಾಲಕರಾದ ಎಪಿಸಿ ಅಮರೇಶ್ ನಾಯ್ಕ್ ಅವರು ಯಾವುದೇ ವಿಳಂಬ ಮಾಡದೆ ಸೂಚಿಸಿದ ಸ್ಥಳದತ್ತ ಧಾವಿಸಿದ್ದಾರೆ. ಕೂಡ್ಲಿ ಸಮೀಪದ ತುಂಗಭದ್ರ ನದಿಯ ಬಳಿ ತಲುಪಿದ ಅವರು, ನದಿಯ ಸಮೀಪ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ಗುರುತಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿ, ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ ಸಿಬ್ಬಂದಿಯ ಕ್ರಮದಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ.

ERSS-112 ಗೆ ಬಂದ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ, ಕ್ಷಿಪ್ರವಾಗಿ ಸ್ಥಳಕ್ಕೆ ತೆರಳಿ ಮಹಿಳೆಯ ಜೀವ ಉಳಿಸಿದ ಸಿಪಿಸಿ ಅಶೋಕ್ ಕುಮಾರ್ ಮತ್ತು ಎಪಿಸಿ ಅಮರೇಶ್ ನಾಯ್ಕ್ ಅವರ ಕರ್ತವ್ಯನಿಷ್ಠೆ ಹಾಗೂ ಸಮಯಪ್ರಜ್ಞೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಂದ ಬರುವ ಮಾಹಿತಿಗೆ ತಕ್ಷಣ ಸ್ಪಂದಿಸಿ, ಜೀವ ರಕ್ಷಣೆಗೆ ಆದ್ಯತೆ ನೀಡುವ ಮೂಲಕ ERSS-112 ಸಿಬ್ಬಂದಿ ಮತ್ತೊಮ್ಮೆ ತಮ್ಮ ಕರ್ತವ್ಯ ಬದ್ಧತೆಯನ್ನು ಮೆರೆದಿದ್ದಾರೆ.

Women's Safety: Appreciation for the prompt response of ERSS-112 personnel  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close