SUDDILIVE || SHIVAMOGGA
ಸಚಿವ ಮಧು ಬಂಗಾರಪ್ಪ ಸನ್ಮಾನ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ-madhu bangarappa felicitation program mobile theft shivamogga
ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರ ಸನ್ಮಾನ ಕಾರ್ಯಕ್ರಮ ನಡೆದ ಕಾಂಗ್ರೆಸ್ ಕಚೇರಿಯಲ್ಲಿಯೇ ಕಳ್ಳರು ಕೈಚಳಕ ತೋರಿದ್ದಾರೆ. ಮೊಬೈಲ್ ಹಾಗೂ ಹಣ ಕಳವು ಆರೋಪ ಕೇಳಿಬಂದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದವರಲ್ಲಿ ಆತಂಕ ಮೂಡಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಚಿವ ಮಧು ಬಂಗಾರಪ್ಪ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಚಿವರು ತಮ್ಮ ಮಾತು ಮುಗಿಸಿ ಸನ್ಮಾನ ಕಾರ್ಯಕ್ರಮ ಆರಂಭವಾಗುತ್ತಿದ್ದ ಸಂದರ್ಭದಲ್ಲಿ ಸಭಾಂಗಣದಲ್ಲಿ ಕೆಲವರ ಮೊಬೈಲ್‌ಗಳು ಕಳುವಾಗಿರುವುದು ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಮೂವರಿಂದ ₹1.30 ಲಕ್ಷ ಕಳುವು ಆರೋಪ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲವರ ಮೊಬೈಲ್‌ಗಳು ಕಳವಾಗಿದ್ದು, ಮೊಬೈಲ್‌ಗಳ ಜೊತೆ ಹಣ ಸೇರಿದಂತೆ ಒಟ್ಟು ಸುಮಾರು ₹1.30 ಲಕ್ಷ ರೂ. ಹಣವೂ ಕಳುವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಕಳೆದುಕೊಂಡವರಲ್ಲಿ ಎಸ್.ಕೆ. ಮರಿಯಪ್ಪ ನವರ 20 ಸಾವಿರ ರೂ. ಹೊಳೆಹೊನ್ನೂರು ಹನುಮಂತು 60 ಸಾವಿರ ಉಮೇಶ್ ಅವರದ್ದು 50. ಸಾವಿರ ಸೇರಿದೆ
ಕಾರ್ಯಕ್ರಮದ ಗದ್ದಲ, ಸನ್ಮಾನ ನಡೆಯುತ್ತಿದ್ದ ವೇಳೆ ಉಂಟಾದ ಜನದಟ್ಟಣೆ ಹಾಗೂ ಓಡಾಟದ ನಡುವೆ ಹಣ ಕಳವಾಗಿರುವುದು ಬೆಳಕಿಗೆ ಬಙದಿದೆ.
ಸನ್ಮಾನ ಕಾರ್ಯಕ್ರಮದ ವೇಳೆ ಕೈಚಳಕ?
ಸಚಿವರು ಭಾಷಣ ಮುಗಿಸಿದ ಬಳಿಕ ಸನ್ಮಾನ ಕಾರ್ಯಕ್ರಮ ಆರಂಭವಾಗಿತ್ತು. ಈ ವೇಳೆ ಸಚಿವರಿಗೆ ಹೂವಿನ ಹಾರ, ತುರಾಯಿ ಹಾಗೂ ಹೂಗುಚ್ಛಗಳನ್ನು ಹಾಕಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಭಾಂಗಣದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು ಎನ್ನಲಾಗಿದೆ.
ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದ ಕೆಲವರ ಮೊಬೈಲ್‌ಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ನಂತರ ಕಳವು ಆರೋಪ ಬೆಳಕಿಗೆ ಬಂದಿದೆ. ಚಂದ್ರಶೇಖರ್, ಕಿರಣ್ ಫೆರ್ನಾಂಡಿಸ್, ಎಗ್ ಫ್ರೈಡ್ ರೈಸ್ ನಾಗೇಶ್ ಸೇರಿದಂತೆ ಐವರ ಮೊಬೈಲ್ ಕಳುವಾಗಿದೆ.
ಸನ್ಮಾನದ ಬಳಿಕ ಕಸದ ತೊಟ್ಟಿಯಾದ ಸಭಾಂಗಣ
ಇನ್ನು ಸಚಿವ ಮಧು ಬಂಗಾರಪ್ಪ ಅವರ ಸನ್ಮಾನ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂವಿನ ಹಾರ ಹಾಗೂ ಹೂಗುಚ್ಛಗಳನ್ನು ಬಳಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಭಾಂಗಣದಾದ್ಯಂತ ಹೂವಿನ ಹಾರ, ಹೂಗುಚ್ಛ ಹಾಗೂ ಇತರ ತ್ಯಾಜ್ಯಗಳು ಬಿದ್ದಿದ್ದರಿಂದ ಸಭಾಂಗಣದ ಸ್ವಚ್ಛತೆಯ ಬಗ್ಗೆಯೂ ಚರ್ಚೆ ನಡೆದಿದೆ.
ಸಚಿವರು ಬರ ನಿರ್ವಹಣೆ ಕುರಿತು ಸಭೆ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿದ್ದರು ಎನ್ನಲಾಗಿದೆ.
ಪಕ್ಷದ ಸೂಚನೆಯ ನಡುವೆಯೂ ಸನ್ಮಾನ?
ಸಚಿವ ಮಧು ಬಂಗಾರಪ್ಪ ಅವರು ಸಚಿವರಾಗಿ ಈ ಹಿಂದೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು ಎನ್ನಲಾಗಿದೆ.
ಆದರೆ ಸಚಿವರು ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲೇ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಪಕ್ಷದ ವತಿಯಿಂದ ಸೂಚನೆ ನೀಡಲಾಗಿತ್ತು ಎನ್ನುವ ಮಾಹಿತಿ ಕೂಡ ಕೇಳಿಬಂದಿದೆ. ಈ ಸೂಚನೆಯ ನಡುವೆಯೂ ಕಾರ್ಯಕರ್ತರ ಒತ್ತಡದಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಗಿದೆ ಎಂಬ ಚರ್ಚೆ ಇದೀಗ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.
ಒಂದೆಡೆ ಸಚಿವರ ಸನ್ಮಾನ ಕಾರ್ಯಕ್ರಮ ಸಂಭ್ರಮದಿಂದ ನಡೆದರೆ, ಮತ್ತೊಂದೆಡೆ ಕಾರ್ಯಕ್ರಮದ ವೇಳೆ ಮೊಬೈಲ್ ಮತ್ತು ಹಣ ಕಳವು ಆರೋಪ ಕೇಳಿಬಂದಿರುವುದು ಕಾರ್ಯಕ್ರಮದ ಆಯೋಜಕರಿಗೆ ಮುಜುಗರ ತಂದಿದೆ.
madhu bangarappa felicitation program mobile theft shivamogga

