SUDDILIVE || SHIVAMOGGA
ಶಿವಮೊಗ್ಗದಲ್ಲಿ ಸೆ.5ರಂದು ಬೃಹತ್ ರಕ್ತದಾನ ಶಿಬಿರ-Massive blood donation camp in Shivamogga on September 5
ಶಿವಮೊಗ್ಗ: ಕನ್ನಡಪ್ರಭ ದಿನಪತ್ರಿಕೆ ಹಾಗೂ V-Five Home Appliances ಸಂಸ್ಥೆಯ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಸೆಪ್ಟೆಂಬರ್ 5, 2026ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ನಗರದ G.R. Enterprises, ಆರ್‌ಟಿಓ ಹಾಸ್ಟೆಲ್ ಎದುರು, ಗೋವಾಳಗೊಂಡ ಬಡಾವಣೆ, ಶಿವಮೊಗ್ಗದಲ್ಲಿ ಜಾಗದಲ್ಲಿ ನಡೆಯಲಿದೆ.
Rotary Blood Bank ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.
“ಒಂದು ರಕ್ತದಾನ... ಅನೇಕ ಜೀವದಾನ” ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಈ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಅವಕಾಶ ಕಲ್ಪಿಸಲಾಗಿದೆ.
ರಕ್ತದಾನವು ಸುರಕ್ಷಿತವಾಗಿದ್ದು, ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸಲು ಸಹಾಯ ಮಾಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ರಕ್ತದಾನ ಮಾಡಿ – ಜೀವದ ಉಳಿಸಿ.
