ಶಿವಮೊಗ್ಗದಲ್ಲಿ ಶುರುವಾಯ್ತು ‘ಟಾಕ್ಸಿಕ್’ ಜೋಶ್: ಯಶ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ- 'Toxic' fever grips Shivamogga: Yash fans' excitement reaches new heights

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಶುರುವಾಯ್ತು ‘ಟಾಕ್ಸಿಕ್’ ಜೋಶ್: ಯಶ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ-  'Toxic' fever grips Shivamogga: Yash fans' excitement reaches new heights 

Toxic, movie



ಶಿವಮೊಗ್ಗ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ರಾಜ್ಯಾದ್ಯಂತ ತೆರೆಕಾಣಲು ಕ್ಷಣಗಣನೆ ಆರಂಭವಾಗಿದ್ದು, ಶಿವಮೊಗ್ಗದಲ್ಲಿ ಯಶ್ ಅಭಿಮಾನಿಗಳ ಸಂಭ್ರಮ ಈಗಾಗಲೇ ಮುಗಿಲುಮುಟ್ಟಿದೆ. ಬೆಳಗಾಗುವುದನ್ನೇ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು ಚಿತ್ರಮಂದಿರಗಳ ಮುಂಭಾಗ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

ನಗರದ ಮಲ್ಲಿಕಾರ್ಜುನ ಚಲನಚಿತ್ರಮಂದಿರದಲ್ಲಿ ಯಶ್ ಅಭಿಮಾನಿಗಳ ಸಂಭ್ರಮ ಜೋರಾಗಿದ್ದು, ಚಿತ್ರಮಂದಿರದ ಮುಂಭಾಗ ಬೃಹತ್ ಕಟೌಟ್‌ಗಳು ಹಾಗೂ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಯಶ್ ಅವರ ಕಟೌಟ್‌ಗೆ ಜೆಸಿಬಿ ಮೂಲಕ ಬೃಹತ್ ಹೂವಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದು, ಡೊಳ್ಳು ಕುಣಿತದ ಮೂಲಕ ತಮ್ಮ ನೆಚ್ಚಿನ ನಟನಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಅಭಿಮಾನಿ ಬಳಗಗಳ ವತಿಯಿಂದ ಚಿತ್ರಮಂದಿರದ ಸುತ್ತಮುತ್ತ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಇಡೀ ಪ್ರದೇಶವೇ ಯಶ್‌ಮಯವಾಗಿದೆ. ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಾ, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

Toxic, movie

ನಾಳೆ ಬೆಳಗಿನ ಅಭಿಮಾನಿಗಳ ವಿಶೇಷ ಪ್ರದರ್ಶನವನ್ನು ಮತ್ತಷ್ಟು ಅದ್ದೂರಿಯಾಗಿಸಲು ಸಿದ್ಧತೆಗಳು ನಡೆಯುತ್ತಿವೆ.ವಯಶ್ ನ ಹಾಡಿಗೆ ಅದರಲ್ಲೂ ಕೆಜಿಎಫ್ ಹಾಡುಗಳಿಗೆ ಲೇಜರ್ ಲೈಟ್ ಪ್ರದರ್ಶನ ನಡೆಸಲಾಗುತ್ತಿದೆ. ಇದೂ ಸೇರಿದಂತೆ ವಿವಿಧ ರೀತಿಯ ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಬೆಳಗಿನ ಜಾವವೇ ಚಿತ್ರಮಂದಿರದ ಎದುರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುವ ನಿರೀಕ್ಷೆಯಿದೆ.


ಇತ್ತ ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರ ಹಾಗೂ ಮಾಲ್‌ನ ಭಾರತ್ ಶೋಗಳಲ್ಲಿ ಈಗಾಗಲೇ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಉಂಟಾಗಿದ್ದು, ಬಹುತೇಕ ಪ್ರದರ್ಶನಗಳ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ. ಮುಂಗಡ ಟಿಕೆಟ್‌ಗಳಿಗಾಗಿ ಅಭಿಮಾನಿಗಳಲ್ಲಿ ಭಾರಿ ಪೈಪೋಟಿ ಕಂಡುಬಂದಿದೆ. ಮಲ್ಲಿಕಾರ್ಜುನ ಚಲನಚಿತ್ರ ಮಂದಿರದಲ್ಲಿ ಆನ್ ಲೈನ್ Book my show ಗೆ ಕೊಡಲಾಗಿದೆ ಎಂದು ನೋಟೀಸ್ ಬೋರ್ಡ್ ನಲ್ಲಿ ದೊಡ್ಡದಾಗಿ ಬರೆಯಲಾಗಿದೆ. ಆನ್ ಲೈನ್ ನಲ್ಲಿ ಮುಂದಿನ ಎರಡು ಮೂರು ದಿನ ಬುಕ್ ಆಗಿದೆ. 

ಯಶ್ ಅವರ ಹಿಂದಿನ ಚಿತ್ರಗಳಂತೆ ‘ಟಾಕ್ಸಿಕ್’ ಚಿತ್ರವೂ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಚಿತ್ರ ಬಿಡುಗಡೆಯ ದಿನವನ್ನು ಹಬ್ಬದಂತೆ ಆಚರಿಸಲು ಅಭಿಮಾನಿ ಸಂಘಟನೆಗಳು ಸಜ್ಜಾಗಿವೆ.


ಒಟ್ಟಿನಲ್ಲಿ, ‘ಟಾಕ್ಸಿಕ್’ ಬಿಡುಗಡೆಗೂ ಮುನ್ನವೇ ಶಿವಮೊಗ್ಗದಲ್ಲಿ ಯಶ್ ಮೇನಿಯಾ ಶುರುವಾಗಿದೆ. ಬೆಳಗಾಗುತ್ತಿದ್ದಂತೆ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಯಶ್ ಅಭಿಮಾನಿಗಳ ಪಾಲಿಗೆ ನಾಳೆ ವಿಶೇಷ ದಿನವಾಗಲಿದೆ.

Toxic' fever grips Shivamogga: Yash fans' excitement reaches new heights 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close