ತೀರ್ಥಹಳ್ಳಿ ಡಿವೈಎಸ್ಪಿಯಾಗಿ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ನೇಮಕ-IPS officer Bhanuprakash J. appointed as DySP of Thirthahalli

 SUDDILIVE || THIRTHAHALLI

ತೀರ್ಥಹಳ್ಳಿ ಡಿವೈಎಸ್ಪಿಯಾಗಿ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ನೇಮಕ-IPS officer Bhanuprakash J. appointed as DySP of Thirthahalli   
Thirthahalli, dysp


ತೀರ್ಥಹಳ್ಳಿ:
ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಕೇಡರ್‌ಗೆ ಸೇರಿದ 2023 ಮತ್ತು 2024ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಭಾನುಪ್ರಕಾಶ್ ಜೆ. ಅವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಅವರನ್ನು ತೀರ್ಥಹಳ್ಳಿಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (Assistant Superintendent of Police) ನಿಯೋಜಿಸಲಾಗಿದ್ದು, ಇದೀಗ ಡಿವೈಎಸ್ಪಿ ಹುದ್ದೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆ.

ತೀರ್ಥಹಳ್ಳಿ ಡಿವೈಎಸ್ಪಿಯಾಗಿದ್ದ ಅರವಿಂದ ಕಲಗುಜ್ಜಿ ಅವರು ನಿವೃತ್ತರಾದ ಬಳಿಕ ಉಪವಿಭಾಗದ ಡಿವೈಎಸ್ಪಿ ಹುದ್ದೆ ಖಾಲಿಯಾಗಿತ್ತು. ಇದೀಗ ಸರ್ಕಾರ ಯುವ ಐಪಿಎಸ್ ಅಧಿಕಾರಿಯನ್ನು ಈ ಹುದ್ದೆಗೆ ನಿಯೋಜಿಸುವ ಮೂಲಕ ಖಾಲಿ ಸ್ಥಾನವನ್ನು ಭರ್ತಿ ಮಾಡಿದೆ.

ಭಾನುಪ್ರಕಾಶ್ ಜೆ. ಅವರು ತೀರ್ಥಹಳ್ಳಿ ಉಪವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಯುವ ಐಪಿಎಸ್ ಅಧಿಕಾರಿಯ ನೇಮಕದಿಂದ ಉಪವಿಭಾಗದಲ್ಲಿ ಪೊಲೀಸ್ ಆಡಳಿತಕ್ಕೆ ಮತ್ತಷ್ಟು ಚುರುಕು ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

IPS officer Bhanuprakash J. appointed as DySP of Thirthahalli   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close