ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಶಾಂತವೀರ ನಾಯ್ಕಗೆ ಭರ್ಜರಿ ಸ್ವಾಗತ- KPCC Labor Department Working President Shantaveera Nayak receives a grand welcome

SUDDILIVE || SHIVAMOGGA

ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಶಾಂತವೀರ ನಾಯ್ಕಗೆ ಭರ್ಜರಿ ಸ್ವಾಗತ- KPCC Labor Department Working President Shantaveera Nayak receives a grand welcome   

Kpcc, labor


ಶಿವಮೊಗ್ಗ: ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ ಶಾಂತವೀರ ನಾಯ್ಕ ಅವರಿಗೆ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಂತವೀರ ನಾಯ್ಕ ಅವರು, ಪಕ್ಷ ನೀಡಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವೆ, ನನಗೆ ಈ ಜವಾಬ್ದಾರಿ ನೀಡಿದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಕೃತಜ್ಞತೆ ಸಲ್ಲಿಸುವೆ, ಪಕ್ಷದ ಸಂಘಟನೆ ಮಾಡುತ್ತೇನೆ ಮತ್ತು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಲ್ಕೀಶ್ ಬಾನು, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಆರ್.ಎಂ.ಮAಜುನಾಥ ಗೌಡ, ಎಂ.ಶ್ರೀಕಾAತ್, ಇಸ್ಮಾಯಿಲ್ ಖಾನ್, ಚೇತನ್ ಗೌಡ, ಡಾ.ಶ್ರೀನಿವಾಸ್ ಕರಿಯಣ್ಣ, ಶ್ವೇತಾ ಬಂಢಿ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಶರತ್ ಮರಿಯಪ್ಪ ಮುಂತಾದರವರು ಮಾತನಾಡಿ, ಶಾಂತವೀರ ನಾಯ್ಕ ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಲಿ, ಹೆಚ್ಚಿನ ಕಾರ್ಮಿಕರನ್ನು ಪಕ್ಷಕ್ಕೆ ಕರೆ ತರಲಿ, ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ.ಡಿ. ಮಂಜುನಾಥ್, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ದಕ್ಷಿಣ ಮತ್ತು ಉತ್ತರ ಬ್ಲಾಕ್‌ನ ಅಧ್ಯಕ್ಷರುಗಳಾದ ಕಲೀಂ ಪಾಷ, ಶಿವಕುಮಾರ್, ಪ್ರಮುಖರಾದ ಹೆಚ್.ಪಿ.ಗಿರೀಶ್, ನೇತ್ರಾವತಿ ಗೌಡ, ಪಾಲಾಕ್ಷಿ, ನಾಗರಾಜ್ ಕಂಕಾರಿ, ಷಡಾಕ್ಷರಿ, ವಿಜಯಲಕ್ಷಿö್ಮ ಪಾಟೀಲ್, ಮಧುಸಸೂದದನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

KPCC Labor Department Working President Shantaveera Nayak receives a grand welcome   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close