SUDDILIVE || SHIVAMOGGA
ಗಣೇಶೋತ್ಸವಕ್ಕೆ ಏಕಗವಾಕ್ಷಿ ವ್ಯವಸ್ಥೆಯಲ್ಲಿ ವಿದ್ಯುತ್ ಮಂಜೂರಾತಿ: ಮೆಸ್ಕಾಂ- Electricity sanction for Ganeshotsava via single-window system: MESCOM
ಶಿವಮೊಗ್ಗ: ಸೆಪ್ಟೆಂಬರ್ 14ರಂದು ಸಾರ್ವತ್ರಿಕ ಗಣೇಶೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ, ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಹಾಗೂ ಮಂಜೂರಾತಿಯನ್ನು ಸುಲಭವಾಗಿ ಪಡೆಯಲು ಮೆಸ್ಕಾಂ ವತಿಯಿಂದ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿವಮೊಗ್ಗ ನಗರ ಉಪ ವಿಭಾಗ-3, ಮೆಸ್ಕಾಂ ವ್ಯಾಪ್ತಿಯ ಗ್ರಾಹಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 9ರಿಂದ 14ರವರೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ವಿದ್ಯುತ್ ಮಂಜೂರಾತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಈ ವ್ಯವಸ್ಥೆಯು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿದೆ. ವಿದ್ಯುತ್ ಮಂಜೂರಾತಿಗೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಒಂದೇ ಸ್ಥಳದಲ್ಲಿ ಪೂರ್ಣಗೊಳಿಸಲು ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.
ಏಕಗವಾಕ್ಷಿ ವ್ಯವಸ್ಥೆಯನ್ನು ನಗರ ಉಪ ವಿಭಾಗ-3, ಮೆಸ್ಕಾಂ, ಗುಡ್‌ಲಕ್ ವೃತ್ತದ ಹತ್ತಿರ, ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಇಲ್ಲಿ ತೆರೆಯಲಾಗಿದೆ.
ಗಣೇಶೋತ್ಸವ ಆಯೋಜಕರು ಹಾಗೂ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಯಮಾನುಸಾರ ಅಗತ್ಯ ವಿದ್ಯುತ್ ಮಂಜೂರಾತಿಯನ್ನು ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.
Electricity sanction for Ganeshotsava via single-window system: MESCOM
