ಎನ್‌ಟಿ ರಸ್ತೆಯಲ್ಲಿ ಗಮನ ಸೆಳೆದ ಗಣಪತಿ ಅಲಂಕಾರ: ಗರುಡನ ಮೇಲೆ ವಿರಾಜಮಾನನಾದ ವಿಷ್ಣು-Ganapati decoration attracts attention on NT Road: Vishnu enthroned on Garuda

 SUDDILIVE || SHIVAMOGGA

ಎನ್‌ಟಿ ರಸ್ತೆಯಲ್ಲಿ ಗಮನ ಸೆಳೆದ ಗಣಪತಿ ಅಲಂಕಾರ: ಗರುಡನ ಮೇಲೆ ವಿರಾಜಮಾನನಾದ ವಿಷ್ಣು-Ganapati decoration attracts attention on NT Road: Vishnu enthroned on Garuda   
Ganapathi, newmandli


ಶಿವಮೊಗ್ಗ: ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ಎನ್‌ಟಿ ರಸ್ತೆಯಲ್ಲಿ ಈ ಬಾರಿ ನಿರ್ಮಿಸಲಾಗಿರುವ ಗಣಪತಿ ಅಲಂಕಾರ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ನ್ಯೂಮಂಡ್ಲಿಯ ಗಣಪತಿಗೆ ಕಮಾನು ನಿರ್ಮಿಸಿ ಅದರ ಮೇಲೆ ಗರುಡನ ಮೇಲೆ ವಿಷ್ಣು ದೇವರು ವಿರಾಜಮಾನರಾಗಿರುವ ಆಕರ್ಷಕ ಕಲಾಕೃತಿಯನ್ನು ಅಳವಡಿಸಲಾಗಿದೆ.

ಕಳೆದ ಬಾರಿ ಇದೇ ಭಾಗದಲ್ಲಿ ವರಾಹ ರೂಪದ ಕಲಾಕೃತಿಯನ್ನು ನಿರ್ಮಿಸಿ ಗಮನ ಸೆಳೆಯಲಾಗಿತ್ತು. ಈ ಬಾರಿ ಅದಕ್ಕಿಂತ ವಿಭಿನ್ನವಾಗಿ ಗರುಡನ ಮೇಲೆ ವಿಷ್ಣು ದೇವರು ನಿಂತಿರುವ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಬೆಳಗಿನ ಜಾವ ಕಮಾನು ಮೇಲೆ ಈ ಅಲಂಕಾರವನ್ನು ಅಳವಡಿಸಲಾಗಿದೆ.

ನ್ಯೂ ಮಂಡ್ಲಿ ಗಣಪತಿ ಅಲಂಕಾರವು ವರ್ಷದಿಂದ ವರ್ಷಕ್ಕೆ ಹೊಸತನದೊಂದಿಗೆ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗುತ್ತಿದೆ. ಈ ಹಿಂದೆ 2024ರಲ್ಲಿ ಕಮಾನು ನಿರ್ಮಿಸಿ ವೀರಾಂಜನೇಯನ ಕಲಾಕೃತಿಯನ್ನು ಅಳವಡಿಸಲಾಗಿತ್ತು. ರಾಮ ಮತ್ತು ಲಕ್ಷ್ಮಣರನ್ನು ಹೊತ್ತು ಆಂಜನೇಯ ಸ್ವಾಮಿ ಲಂಕೆಯತ್ತ ಹಾರುವ ದೃಶ್ಯವನ್ನು ಕಲಾವಿದ ಜೀವನ್ ನಿರ್ಮಿಸಿದ್ದರು.

ಈ ಬಾರಿಯ ಅಲಂಕಾರ ಯಾವ ರೀತಿಯಲ್ಲಿರಲಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಕುತೂಹಲ ಮೂಡಿಸಲಾಗಿತ್ತು. ಇದೀಗ ಕಮಾನು ಮೇಲೆ ಗರುಡನೊಂದಿಗೆ ವಿಷ್ಣುವಿನ ಕಲಾಕೃತಿ ಅನಾವರಣಗೊಂಡಿದ್ದು, ಎನ್‌ಟಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಗಣೇಶೋತ್ಸವಕ್ಕೆ ಆಗಮಿಸುವವರ ಗಮನ ಸೆಳೆಯುತ್ತಿದೆ.

ವರ್ಷದಿಂದ ವರ್ಷಕ್ಕೆ ನ್ಯೂ ಮಂಡ್ಲಿ ಗಣಪತಿಯ ಅಲಂಕಾರದಲ್ಲಿ ವಿಭಿನ್ನ ಪರಿಕಲ್ಪನೆಗಳನ್ನು ಅಳವಡಿಸಲಾಗುತ್ತಿದ್ದು, ಈ ಬಾರಿಯ ಗರುಡ–ವಿಷ್ಣು ಕಲಾಕೃತಿ ಕೂಡ ಗಣೇಶೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

Ganapati decoration attracts attention on NT Road: Vishnu enthroned on Garuda   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close