ಖಾಸಗಿ ಶಾಲಾ ಮಕ್ಕಳ ಸಾಗಾಟಕ್ಕೆ ವೈಟ್‌ಬೋರ್ಡ್ ವಾಹನ ಬಳಕೆ? ನಿಯಮ ಉಲ್ಲಂಘನೆಗೆ ಅಧಿಕಾರಿಗಳ ಹೊಣೆ ಯಾರು? Use of whiteboard vehicles to transport private school children? Who is responsible for the violation of the rules by the authorities?

 SUDDILIVE || SHIVAMOGGA

ಖಾಸಗಿ ಶಾಲಾ ಮಕ್ಕಳ ಸಾಗಾಟಕ್ಕೆ ವೈಟ್‌ಬೋರ್ಡ್ ವಾಹನ ಬಳಕೆ? ನಿಯಮ ಉಲ್ಲಂಘನೆಗೆ ಅಧಿಕಾರಿಗಳ ಹೊಣೆ ಯಾರು? Use of whiteboard vehicles to transport private school children? Who is responsible for the violation of the rules by the authorities? 
White, board

 


ಶಿವಮೊಗ್ಗ:
ಖಾಸಗಿ ಶಾಲೆಗಳ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹಾಗೂ ಮನೆಗೆ ವಾಪಸ್‌ ಕರೆತರಲು ಬಳಸಲಾಗುತ್ತಿರುವ ಕೆಲವು ವೈಟ್‌ಬೋರ್ಡ್ ವಾಹನಗಳ ಬಳಕೆ ಕುರಿತು ಇದೀಗ ಪ್ರಶ್ನೆಗಳು ಎದ್ದಿವೆ. ಮಕ್ಕಳ ಸಾಗಾಟಕ್ಕೆ ಖಾಸಗಿ ವಾಹನಗಳನ್ನು ಬಳಸುವ ಸಂದರ್ಭದಲ್ಲಿ ನಿಯಮಾನುಸಾರ ವಾಣಿಜ್ಯ ನೋಂದಣಿ, ಪರವಾನಗಿ ಹಾಗೂ ವಿಮೆ ಸೇರಿದಂತೆ ಅಗತ್ಯ ದಾಖಲೆಗಳು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳ ಪಿಕಪ್‌ ಮತ್ತು ಡ್ರಾಪ್‌ಗಾಗಿ ಕೆಲವು ಓಮ್ನಿ ಸೇರಿದಂತೆ ವೈಟ್‌ಬೋರ್ಡ್ ವಾಹನಗಳನ್ನು ಬಳಸಲಾಗುತ್ತಿದೆ ಎನ್ನಲಾಗಿದ್ದು, ಇಂತಹ ವಾಹನಗಳು ಮಕ್ಕಳ ಸಾಗಾಟಕ್ಕೆ ನಿಯಮಬದ್ಧವಾಗಿವೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ವೈಟ್‌ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಂದರ್ಭದಲ್ಲಿ ನಿಯಮಾನುಸಾರ ಅನುಮತಿ ಮತ್ತು ವಿಮೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ನಿಯಮಬಾಹಿರವಾಗಿ ಮಕ್ಕಳನ್ನು ಸಾಗಿಸುವ ವಾಹನಗಳು ಅಪಘಾತಕ್ಕೀಡಾದರೆ ವಿಮೆ ಪರಿಹಾರ ದೊರೆಯುವ ವಿಚಾರದಲ್ಲೂ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಆರ್ ಟಿ ಒ ಅಧಿಕಾರಿಗಳು ಮೈಕೊಡವಿ ನಿಲ್ಲಬೇಕಿದೆ. 

ಅಪಘಾತವಾದ ಬಳಿಕ ಎಚ್ಚೆತ್ತುಕೊಳ್ಳುವುದೇ?

ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಯಾವುದೇ ಅವಘಡ ಸಂಭವಿಸುವವರೆಗೆ ಕಾಯದೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ‘ಅಪಘಾತ ಸಂಭವಿಸಿದ ಬಳಿಕ ಆರ್ ಟಿಒ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ನಿಯಮ ಉಲ್ಲಂಘನೆ ಪತ್ತೆಹಚ್ಚಿ ತಡೆಯುವುದು ಸೂಕ್ತ’ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇತ್ತೀಚೆಗೆ ರಾಜ್ಯದ ವಿವಿಧೆಡೆ ಶಾಲಾ ವಾಹನಗಳಿಗೆ ಸಂಬಂಧಿಸಿದ ಘಟನೆಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದೊಯ್ಯುವ ಪ್ರತಿಯೊಂದು ವಾಹನದ ಸ್ಥಿತಿಗತಿ, ನೋಂದಣಿ, ಪರವಾನಗಿ, ವಿಮೆ ಹಾಗೂ ಚಾಲಕರ ಅರ್ಹತೆಗಳನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಬೇಕಾಗಿದೆ.

2018 ರಲ್ಲಿ ಭದ್ರಾವತಿಯಿಂದ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಅಫಘಾತಕ್ಕೀಡಾಗಿ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಎನ್‌ಆರ್ ಪುರದಲ್ಲಿ ನಡೆದಿತ್ತು. ಏರ್ ಪೋರ್ಟ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಿವೆ. ವೈಟ್ ಬೋರ್ಡ್ ನ ವಾಹನಗಳು ಹೆಚ್ಚಾಗಿವೆ. ಇವುಗಳು ಅಪಘಾತ ನಡೆದ ಮೇಲೆಯೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಾ ಎಂಬ ಅನುಮಾನ ಕಾಡಲಾರಂಭಿಸಿವೆ. 

ಡಿಡಿಪಿಐ ಅಥವಾ ಆರ್‌ಟಿಒ ಹೊಣೆ?

ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮತ್ತು ಸಾರಿಗೆ ಇಲಾಖೆಯ ಪಾತ್ರವೇನು ಎಂಬ ಪ್ರಶ್ನೆಯೂ ಎದುರಾಗಿದೆ. ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಸಾಗಾಟಕ್ಕೆ ಬಳಸುವ ವಾಹನಗಳ ಕುರಿತು ಸೂಕ್ತ ದಾಖಲೆಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕೇ? ಇಂತಹ ವಾಹನಗಳ ಪರಿಶೀಲನೆ ಹಾಗೂ ನಿಯಮ ಪಾಲನೆಗೆ ಆರ್‌ಟಿಒ ಇಲಾಖೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ವಾಹನಗಳ ಪರಿಶೀಲನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ವೈಟ್‌ಬೋರ್ಡ್ ವಾಹನಗಳ ಬಗ್ಗೆಯೂ ವಿಶೇಷ ತಪಾಸಣೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಯಾವುದೇ ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ‘ಅವಘಡ ಸಂಭವಿಸುವ ಮುನ್ನವೇ ನಿಯಮ ಜಾರಿಗೊಳಿಸುವುದು’ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ನಿಯಮಬಾಹಿರವಾಗಿ ಮಕ್ಕಳ ಸಾಗಾಟ ಮಾಡುತ್ತಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

Use of whiteboard vehicles to transport private school children? Who is responsible for the violation of the rules by the authorities?   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close