ಕೆರೆಗೆ ನುಗ್ಗಿದ ಕಂಟೇನರ್ ಲಾರಿ; ಚಾಲಕ ಪ್ರಾಣಾಪಾಯದಿಂದ ಪಾರು!Container truck plunges into lake; driver escapes unhurt!

SUDDILIVE || SHIVAMOGGA

ಕೆರೆಗೆ ನುಗ್ಗಿದ ಕಂಟೇನರ್ ಲಾರಿ; ಚಾಲಕ ಪ್ರಾಣಾಪಾಯದಿಂದ ಪಾರು!Container truck plunges into lake; driver escapes unhurt! 

Container, lake

  


ಸಾಗರ: ಮದ್ಯದ ಅಮಲಿನಲ್ಲಿ ಅಜಾಗರೂಕತೆಯಿಂದ ಕಂಟೇನರ್ ಲಾರಿ ಚಲಾಯಿಸಿದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಕೆರೆಗೆ ನುಗ್ಗಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮದಲ್ಲಿ ನಡೆದಿದೆ.

ಉಳ್ಳೂರು ಮಾರ್ಗದ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಚಾಲಕನ ನಿಯಂತ್ರಣ ಕಳೆದುಕೊಂಡ ಕಂಟೇನರ್ ಲಾರಿ ಏಕಾಏಕಿ ರಸ್ತೆ ಬದಿಯ ಕೆರೆಗೆ ನುಗ್ಗಿದೆ. ಲಾರಿ ನೀರಿನಲ್ಲಿ ಮುಳುಗುತ್ತಿದ್ದಂತೆ ಚಾಲಕ ಅಪಾಯಕ್ಕೆ ಸಿಲುಕಿದ್ದ.

ಸ್ಥಳೀಯ ಗ್ರಾಮಸ್ಥರು ತಕ್ಷಣ ಕಾರ್ಯಪ್ರವೃತ್ತರಾಗಿ ಸಾಹಸದಿಂದ ಕ್ಯಾಬಿನ್‌ನಲ್ಲಿದ್ದ ಚಾಲಕನನ್ನು ಹೊರತೆಗೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಗ್ರಾಮಸ್ಥರು ನೆರವಿಗೆ ಧಾವಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಘಟನೆಯ ಮಾಹಿತಿ ತಿಳಿದು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ವಾಹನ ಚಾಲನೆ ಮಾಡಿದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಂತರ ಕ್ರೇನ್‌ ಸಹಾಯದಿಂದ ಕೆರೆಗೆ ಬಿದ್ದಿದ್ದ ಕಂಟೇನರ್ ಲಾರಿಯನ್ನು ಮೇಲಕ್ಕೆತ್ತಲಾಗಿದೆ.

Container truck plunges into lake; driver escapes unhurt!    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close