ಶಿಕ್ಷಕರ ದಿನಾಚರಣೆಯಂದು ಸೆ.5ಕ್ಕೆ ರಕ್ತದಾನ ಶಿಬಿರ- Blood donation camp on September 5, Teachers' Day

 SUDDILIVE || SHIVAMOGGA

ಶಿಕ್ಷಕರ ದಿನಾಚರಣೆಯಂದು ಸೆ.5ಕ್ಕೆ ರಕ್ತದಾನ ಶಿಬಿರ-  Blood donation camp on September 5, Teachers' Day 
Blood, donation


ಶಿವಮೊಗ್ಗ:
ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 5ರಂದು ಶಿವಮೊಗ್ಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಕನ್ನಡಪ್ರಭ ದಿನಪತ್ರಿಕೆ ಹಾಗೂ ವಿ-ಫೈವ್ ಹೋಂ ಅಪ್ಲೈಯನ್ಸಸ್ ಜಂಟಿಯಾಗಿ ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಈ ರಕ್ತದಾನ ಶಿಬಿರವನ್ನು ಆಯೋಜಿಸಿವೆ. ಸೆ.5ರಂದು ಗೋಪಾಲಗೌಡ ಬಡಾವಣೆಯ ಜಿ.ಆರ್. ಎಂಟರ್‌ಪ್ರೈಸಸ್ ಆವರಣದಲ್ಲಿ ಬೆಳಗ್ಗೆ ರಕ್ತದಾನ ಶಿಬಿರ ನಡೆಯಲಿದೆ.

ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವ ಉದ್ದೇಶದಿಂದ ಆಯೋಜಿಸಿರುವ ಈ ಶಿಬಿರದಲ್ಲಿ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಶಿಕ್ಷಕರು ಹಾಗೂ ರಕ್ತದಾನ ಮಾಡಲು ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಶಿಬಿರದ ಸ್ಥಳ:
ಜಿ.ಆರ್. ಎಂಟರ್‌ಪ್ರೈಸಸ್, ಆರೈಕೆ ಆಸ್ಪತ್ರೆ ಎದುರು, ಬಿಎಸ್‌ಎನ್‌ಎಲ್ ಹೆಡ್ ಆಫೀಸ್ ಸಮೀಪ, ಸಾಗರ ರಸ್ತೆ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ.

ರಕ್ತದಾನ ಮಾಡಲು ಆಸಕ್ತರು ಹಾಗೂ ಹೆಚ್ಚಿನ ಮಾಹಿತಿಗಾಗಿ 9108825454 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಶಿಕ್ಷಕರ ದಿನಾಚರಣೆಯನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಆಯೋಜಿಸಿರುವ ಈ ಶಿಬಿರಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

Blood donation camp on September 5, Teachers' Day

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close