ಗಾಂಜಾ ಮಾರಾಟ, ಇಬ್ಬರ ಬಂಧನ- Two arrested for selling marijuana

SUDDILIVE || SHIVAMOGGA

ಗಾಂಜಾ ಮಾರಾಟ, ಇಬ್ಬರ ಬಂಧನ- Two arrested for selling marijuana   

Ganja, sale


ಶಿವಮೊಗ್ಗ (ಸೆ.14):
ನಗರದ ಅಣ್ಣಾನಗರ ಎಡಭಾಗದ ಚಾನಲ್ ರಸ್ತೆಯಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗ ನಗರದ ಟಿಪ್ಪುನಗರ ಎಡಭಾಗದ ನಿವಾಸಿ ತೌಫೀಕ್ ಅಹಮದ್ (33) ಹಾಗೂ ಭದ್ರಾವತಿಯ ಅಮೀರ್ ಜಾನ್ ಕಾಲೋನಿ, ಅನ್ವರ್ ಕಾಲೋನಿ ನಿವಾಸಿ ಸೈಯ್ಯದ್ ಅಪ್ಸರ್ (26) ಎಂದು ಗುರುತಿಸಲಾಗಿದೆ.

ಇಬ್ಬರು ಆರೋಪಿಗಳು ಬಿಳಿ ಬಣ್ಣದ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತ ಹಿನ್ನೆಲೆಯಲ್ಲಿ ಪಿಎಸ್ಐ ಮಂಜುನಾಥ್ ಎನ್.ಕೆ. ನೇತೃತ್ವದಲ್ಲಿ ದೊಡ್ಡಪೇಟೆ ಠಾಣೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಸುಮಾರು ₹70,000 ಮೌಲ್ಯದ 1 ಕೆಜಿ 420 ಗ್ರಾಂ ಗಾಂಜಾ, ಗಾಂಜಾ ಸಾಗಾಟಕ್ಕೆ ಬಳಸಿದ್ದ ಹೊಂಡಾ ಜಾಜ್ ಕಾರು ಹಾಗೂ ₹300 ನಗದು ಹಣವನ್ನು ಅಮಾನತುಪಡಿಸಿಕೊಂಡಿದ್ದಾರೆ.

ದೊಡ್ಡಪೇಟೆ ಠಾಣೆಯ ಎಎಸ್ಐ ಚೂಡಾಮಣಿ, ಸಿಬ್ಬಂದಿಗಳಾದ ಸಂದೀಪ್, ಗಣೇಶ್, ಮನೋಹರ ಹಾಗೂ ಗುರುನಾಯ್ಕ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 320/2026 ಅಡಿಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(II)B ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Two arrested for selling marijuana   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close