ಶಿವಮೊಗ್ಗದಲ್ಲಿ ಕೆಎಸ್‌ಡಿಎಲ್ ಸಾಬೂನು ಮೇಳ: ಸೆ.11ರಿಂದ 18ರವರೆಗೆ ಶೇ.35ರವರೆಗೆ ರಿಯಾಯಿತಿ-KSDL Soap Fair in Shivamogga: Up to 35% discount from September 11 to 18

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಕೆಎಸ್‌ಡಿಎಲ್ ಸಾಬೂನು ಮೇಳ: ಸೆ.11ರಿಂದ 18ರವರೆಗೆ ಶೇ.35ರವರೆಗೆ ರಿಯಾಯಿತಿ-KSDL Soap Fair in Shivamogga: Up to 35% discount from September 11 to 18 

Soap, mela

Soap, mela

Ksdl, mela


ಶಿವಮೊಗ್ಗ:
ಕರ್ನಾಟಕ ರಾಜ್ಯ ಡಿಟರ್ಜೆಂಟ್ ನಿಗಮ (ಕೆಎಸ್‌ಡಿಎಲ್) ವತಿಯಿಂದ ಶಿವಮೊಗ್ಗದಲ್ಲಿ ಸೆಪ್ಟೆಂಬರ್ 11ರಿಂದ 18ರವರೆಗೆ ಸಾಬೂನು ಮೇಳ ಆಯೋಜಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ಗಂಗಾಧರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಡಿಎಲ್‌ನ ವಿವಿಧ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಉತ್ಪನ್ನಗಳಲ್ಲಿ 80% TFM (Total Fatty Matter) ಹೊಂದಿರುವ ಸಾಬೂನುಗಳಿದ್ದು, ಉತ್ತಮ ತೇವಾಂಶ ಹಾಗೂ ಸುಗಂಧ ಹೊಂದಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದರು.

ಕೆಎಸ್‌ಡಿಎಲ್ ವತಿಯಿಂದ ಒಟ್ಟು 83 ಬಗೆಯ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಸುಮಾರು 70 ಉತ್ಪನ್ನಗಳು ಪ್ರಸ್ತುತ ಲಭ್ಯವಿದ್ದು, ಇನ್ನೂ 10 ಉತ್ಪನ್ನಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಗಂಗಾಧರ ತಿಳಿಸಿದರು.

ಪೊಲೀಸ್ ಭವನದಲ್ಲಿ ಸಾಬೂನು ಮೇಳ

ಶಿವಮೊಗ್ಗ ನಗರದ ದೊಡ್ಡಪೇಟೆ, ಸಾಗರ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಸೆಪ್ಟೆಂಬರ್ 11ರಿಂದ 18ರವರೆಗೆ ಸಾಬೂನು ಮೇಳ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.30ರಿಂದ ರಾತ್ರಿ 9ರವರೆಗೆ ಮೇಳ ತೆರೆದಿರಲಿದೆ.

ಮೇಳದಲ್ಲಿ ವಿವಿಧ ಕೆಎಸ್‌ಡಿಎಲ್ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ನಗರದ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಗಂಗಾಧರ ಮನವಿ ಮಾಡಿದರು.

ವಿವಿಧ ಉತ್ಪನ್ನಗಳಿಗೆ ರಿಯಾಯಿತಿ

ಮೇಳದಲ್ಲಿ ಉತ್ಪನ್ನಗಳ ವರ್ಗಕ್ಕೆ ಅನುಗುಣವಾಗಿ ರಿಯಾಯಿತಿ ನೀಡಲಾಗಿದೆ.

  • ಅಗರಬತ್ತಿ ಮತ್ತು ಧೂಪಗಳಿಗೆ ಶೇ.35 ರಿಯಾಯಿತಿ
  • ಪ್ರೀಮಿಯಂ ಸೋಪುಗಳು, ಮೈಸೂರು ಸ್ಯಾಂಡಲ್ ಸೋಪ್‌ಗಳಿಗೆ ಶೇ.10 ರಿಯಾಯಿತಿ
  • ಜಾಸ್ಮಿನ್, ರೋಸ್, ಆಲ್ಮಂಡ್ ಸೇರಿದಂತೆ ಜನಪ್ರಿಯ ಸೋಪುಗಳಿಗೆ ಶೇ.30 ರಿಯಾಯಿತಿ
  • ಡಿಟರ್ಜೆಂಟ್ಸ್ ಹಾಗೂ ಕಾಸ್ಮೆಟಿಕ್ಸ್‌ಗಳಿಗೆ ಶೇ.22 ರಿಯಾಯಿತಿ

ಜಿಲ್ಲೆಯ ಸಾರ್ವಜನಿಕರು ಹಾಗೂ ಗ್ರಾಹಕರು ಮೇಳಕ್ಕೆ ಭೇಟಿ ನೀಡಿ ರಿಯಾಯಿತಿ ದರದಲ್ಲಿ ಕೆಎಸ್‌ಡಿಎಲ್ ಉತ್ಪನ್ನಗಳನ್ನು ಖರೀದಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಂಗಾಧರ ಮಾಧ್ಯಮಗಳ ಮೂಲಕ ಮನವಿ ಮಾಡಿದರು.

KSDL Soap Fair in Shivamogga: Up to 35% discount from September 11 to 18 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close