ಶಿವಮೊಗ್ಗದಲ್ಲಿ ಮೋದಿಗೆ ‘ನಿರುದ್ಯೋಗಿಗಳ ದಿನ’ದ ಶುಭಾಶಯ: ಕಪ್ಪು ಧಿರಿಸಿನಲ್ಲಿ ಯುವಕಾಂಗ್ರೆಸ್ ಪ್ರತಿಭಟನೆ- Youth congres protests in black to wish Modi on 'Unemployed Day' in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಮೋದಿಗೆ ‘ನಿರುದ್ಯೋಗಿಗಳ ದಿನ’ದ ಶುಭಾಶಯ: ಕಪ್ಪು ಧಿರಿಸಿನಲ್ಲಿ ಯುವಕಾಂಗ್ರೆಸ್ ಪ್ರತಿಭಟನೆ- Youth congres protests in black to wish Modi on 'Unemployed Day' in Shivamogga   
Nsui, protest

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ‘ನಿರುದ್ಯೋಗಿಗಳ ದಿನ’ವನ್ನಾಗಿ ಆಚರಿಸಿದ Youth congress ಕಾರ್ಯಕರ್ತರು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಎದುರು ಕಪ್ಪು ಧಿರಿಸು ಧರಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ವಿಚಾರಗಳಲ್ಲಿ ಟೀಕೆ ವ್ಯಕ್ತಪಡಿಸಿದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕುರಿತು ನೀಡಲಾಗಿದ್ದ ಭರವಸೆಗಳನ್ನು ಉಲ್ಲೇಖಿಸಿದ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಲಾಗಿತ್ತು. ಆದರೆ ನಿರುದ್ಯೋಗ ಸಮಸ್ಯೆ ಮುಂದುವರಿದಿದೆ ಎಂದು ಆರೋಪಿಸಿದರು.

ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಜನರು ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬಳಿಕ ಯುವಕರು ಉದ್ಯೋಗದ ಬಗ್ಗೆ ಪ್ರಶ್ನಿಸಿದಾಗ ‘ಬ್ರೀಥ್ ಇನ್, ಬ್ರೀಥ್ ಔಟ್’ ಎಂದು ಯೋಗ ಮಾಡುವಂತೆ ಹೇಳಲಾಯಿತು ಎಂದು ಯೋಗೇಶ್ ವ್ಯಂಗ್ಯವಾಡಿದರು. ಅಂತಿಮವಾಗಿ ಉದ್ಯೋಗದ ಬದಲಿಗೆ ಪಕೋಡಾ ಮಾರಾಟದ ಕುರಿತು ಮಾತನಾಡಲಾಯಿತು ಎಂದು ಟೀಕಿಸಿದರು.

‘ಡಿಗ್ರಿ ಪಡೆದರೂ ಉದ್ಯೋಗ ಎಲ್ಲಿದೆ?’

ದೇಶದ ಯುವಕರು ಪದವಿ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಮಾಡಿರುವ ಖರ್ಚು ಸಾರ್ಥಕವಾಗಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಪದವಿ ಪಡೆದ ನಂತರವೂ ಉದ್ಯೋಗ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಚ್.ಸಿ. ಯೋಗೇಶ್ ಹೇಳಿದರು.

ಯುವಕರನ್ನು ಧರ್ಮ, ಜಾತಿ ಹಾಗೂ ರಾಜ್ಯಗಳ ಹೆಸರಿನಲ್ಲಿ ವಿಭಜಿಸುವ ಬದಲು ಉದ್ಯೋಗ ಸೃಷ್ಟಿ, ರೈತರ ಸಮಸ್ಯೆ ಹಾಗೂ ಮಹಿಳೆಯರ ಸುರಕ್ಷತೆ ಸೇರಿದಂತೆ ಮೂಲಭೂತ ವಿಚಾರಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

‘ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷಣೆ ನೀಡಲಾಗಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

‘ಉದ್ಯೋಗ ಸೃಷ್ಟಿಯಾಗಿದ್ದರೆ ಮಾತ್ರ ದೀಪ ಹಚ್ಚಿ’

ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಯೋಗೇಶ್, ಮನೆ, ಮಕ್ಕಳ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ಉದ್ಯೋಗ ಮತ್ತು ಆರ್ಥಿಕ ಪ್ರಗತಿ ದೊರೆತಿದ್ದರೆ ಮಾತ್ರ ಸಂಭ್ರಮಾಚರಣೆ ಮಾಡಿ ಎಂದು ಹೇಳಿದರು.

ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಬದಲು ಯುವಕರಿಗೆ ವಾಸ್ತವವಾಗಿ ಉದ್ಯೋಗ ಒದಗಿಸುವ ಕೆಲಸವಾಗಬೇಕು ಎಂದು ಅವರು ಒತ್ತಾಯಿಸಿದರು.

ಭಾಷಣದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವ್ಯಂಗ್ಯವಾಗಿ ಶುಭಾಶಯ ಕೋರಿದ ಯೋಗೇಶ್, “ಹ್ಯಾಪಿ ಬರ್ತ್ ಡೇ ಟು ಯೂ... ವೇರ್ ಈಸ್ ಮೈ ಜಾಬ್? ವೇರ್ ಈಸ್ ಮೈ ಎಜುಕೇಶನ್? ವೇರ್ ಈಸ್ ಮೈ ಸೇಫ್ಟಿ? ವೇರ್ ಈಸ್ ಮೈ ಜಾಬ್?” ಎಂದು ಪ್ರಶ್ನಿಸಿದರು.

NSUI ಕಾರ್ಯಕರ್ತರು ಪ್ರತಿಭಟನೆಯಲ್ಲಿ ಕಪ್ಪು ಧಿರಿಸು ಧರಿಸಿ ಭಾಗವಹಿಸಿ, ‘ನಿರುದ್ಯೋಗಿಗಳ ದಿನ’ ಎಂದು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಹರ್ಷಿತ್ ಗೌಡ, ಮಧು, ದೇವೇಂದ್ರಪ್ಪ, ಉತ್ತರ ಬ್ಲಾಕ್ ನ ಶಿವುಕುಮಾರ್, ದಕ್ಷಿಣ ಬ್ಲಾಕ್ ನ ಅಧ್ಯಕ್ಷ ಕಲೀಂ ಪಾಷ, ಎನ್ ರಮೇಶ್, ಬಾಲಾಜಿ ಮೊದಲಾದವರು ಉಪಸ್ಥಿತರಿದ್ದರು

Youth congress protests in black to wish Modi on 'Unemployed Day' in Shivamogga   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close