SUDDILIVE || SHIVAMOGGA
ಹಬ್ಬದ ಹಿನ್ನಲೆಯಲ್ಲಿ ರೂಟ್ ಮಾರ್ಚ್-Root March in the backdrop of the festival
ಶಿವಮೊಗ್ಗ: ನಾಳೆ ಗಣೇಶ ಹಬ್ಬದ ಹಿನ್ನಲೆಯಲ್ಲಿ ಇಂದು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆದಿದೆ.
ಲಭ್ಯವಾಗಿರುವ ಮಾಹಿತಿಯಂತೆ, ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ರೂಟ್ ಮಾರ್ಚ್ ಆರಂಭವಾಗಲಿದೆ. ಅಲ್ಲಿಂದ ಲಷ್ಕರ್ ಮೊಹಲ್ಲಾ, ಕೆ.ಆರ್. ಪುರಂ ರಸ್ತೆ, ಎಂ.ಕೆ.ಕೆ. ರಸ್ತೆ, ಓ.ಟಿ. ರಸ್ತೆ, ಎ.ಎ.ಎಸ್. ಸರ್ಕಲ್ ಹಾಗೂ ಗಾಂಧಿ ಬಜಾರ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳ ಮೂಲಕ ರೂಟ್ ಮಾರ್ಚ್ ಸಾಗಿದೆ.
ರೂಟ್ ಮಾರ್ಚ್‌ನ ಅಂತಿಮ ಸ್ಥಳದ ಬಗ್ಗೆ ಸ್ಪಷ್ಟಪಡಿಸಲಾಗಿದ್ದು, ಮಾರ್ಚ್ ಮತ್ತೆ ರಾಮಣ್ಣ ಶೆಟ್ಟಿ ಪಾರ್ಕ್‌ಗೆ ವಾಪಸ್ ಬಂದು ಅಲ್ಲಿಯೇ ಅಂತ್ಯಗೊಳ್ಳಲಿದೆ.
ಹೀಗಾಗಿ ರಾಮಣ್ಣ ಶೆಟ್ಟಿ ಪಾರ್ಕ್ ಆರಂಭ ಮತ್ತು ಅಂತ್ಯದ ಸ್ಥಳವಾಗಿದ್ದು, ನಗರದ ಲಷ್ಕರ್ ಮೊಹಲ್ಲಾ, ಕೆ.ಆರ್. ಪುರಂ ರಸ್ತೆ, ಎಂ.ಕೆ.ಕೆ. ರಸ್ತೆ, ಓ.ಟಿ. ರಸ್ತೆ, ಎ.ಎ.ಎಸ್. ಸರ್ಕಲ್ ಹಾಗೂ ಗಾಂಧಿ ಬಜಾರ್ ಪಕ್ಕದ ರಸ್ತೆ ಅಶೋಕ ರಸ್ತೆ, ನಾಗಪ್ಪ ರಸ್ತೆಯ ಮೂಲಕ ಬಜಾರ್ ಮೂಲಕ ರೂಟ್ ಮಾರ್ಚ್ ಸಾಗಿದೆ.
ಆರ್ ಎಎಫ್, ಕೆಎಸ್ ಆರ್ ಪಿ, ಆರ್ ಎಎಫ್ ಕೋಟೆ ಪೊಲೀಸ್ ರು ಭಾಗಿಯಾಗಿದ್ದಾರೆ. ಎಸ್ಪಿ ನಿಖಿಲ್ ಸಹ ಭಾಗಿಯಾಗಿದ್ದರು.
