SUDDILIVE || SHIVAMOGGA
ಆಯನೂರು ಗೇಟ್ ಬಳಿ ಅಡ್ಡಾದಿಡ್ಡಿ ಆಟೋ ಚಾಲನೆ: ಚಾಲಕನ ವಿರುದ್ಧ ಪ್ರಕರಣ-Auto driver charged for reckless driving near Ayanur Gate
ಶಿವಮೊಗ್ಗ, ಸೆ.13: ಸಾರ್ವಜನಿಕ ರಸ್ತೆಯಲ್ಲಿ ಪ್ಯಾಸೆಂಜರ್ ಆಟೋವನ್ನು ಅಡ್ಡಾದಿಡ್ಡಿಯಾಗಿ ಹಾಗೂ ಅಪಾಯಕಾರಿಯಾಗಿ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಚಾಲಕನ ವಿರುದ್ಧ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 12ರಂದು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ NH-69ರ ಆಯನೂರು ಗೇಟ್ ಸರ್ಕಲ್ ಸಮೀಪ, KA-14-B-7*** ನೋಂದಣಿ ಸಂಖ್ಯೆಯ ಪ್ಯಾಸೆಂಜರ್ ಆಟೋವನ್ನು ಚಾಲಕ ಅಪಾಯಕಾರಿಯಾಗಿ ಚಾಲನೆ ಮಾಡುತ್ತಿದ್ದಾನೆ ಎಂದು ಸಾರ್ವಜನಿಕರಿಂದ ಪೊಲೀಸ್ ಕಂಟ್ರೋಲ್ ರೂಮ್‌ಗೆ ದೂರು ಬಂದಿತ್ತು.
ದೂರಿನ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ತೆರಳಿ ಸಂಬಂಧಪಟ್ಟ ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಚಾಲಕನ ವಿರುದ್ಧ Cr.No.100/2026ರಲ್ಲಿ BNS ಕಲಂ 281 ಹಾಗೂ IMV Act ಕಲಂ 184, 185ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹಾಗೂ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವುದು ಚಾಲಕನಷ್ಟೇ ಅಲ್ಲದೆ, ಇತರ ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೂ ಅಪಾಯವನ್ನುಂಟುಮಾಡಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಶಿವಮೊಗ್ಗ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
