ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರ ಪ್ರದರ್ಶನ: ಶಿವಮೊಗ್ಗದಲ್ಲಿ ಪ್ರಕರಣ ದಾಖಲು-Display of lethal weapons on social media: Case registered in Shivamogga

SUDDILIVE || SHIVAMOGGA

ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರ ಪ್ರದರ್ಶನ: ಶಿವಮೊಗ್ಗದಲ್ಲಿ ಪ್ರಕರಣ ದಾಖಲು-Display of lethal weapons on social media: Case registered in Shivamogga   

Social, media

ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾ ಮೀನು ಮಾರುಕಟ್ಟೆ ಸಮೀಪ ಸಾಮಾಜಿಕ ಜಾಲತಾಣದಲ್ಲಿ ಉದ್ದನೆಯ ಹರಿತವಾದ ಆಯುಧಗಳನ್ನು ಪ್ರದರ್ಶಿಸಿದ ಆರೋಪದ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನಲೆಯಲ್ಲಿ ದಾಖಲಾದ ಸುಮೋಟೊ ದೂರಿನ ಆಧಾರದ ಮೇಲೆ, ‘Moseen Qureshin’ ಎಂಬ ಹೆಸರಿನ ಪ್ರೊಫೈಲ್‌ನಿಂದ ಆಯುಧ ಪ್ರದರ್ಶಿಸುವ ವಿಡಿಯೋ ಮತ್ತು ಫೋಟೋಗಳು ಹಂಚಿಕೆಯಾಗಿರುವುದು ಗಮನಕ್ಕೆ ಬಂದಿದೆ  ವಿಡಿಯೋದಲ್ಲಿ ಕೆಲವರು ನಡೆದುಕೊಂಡು ಹೋಗುತ್ತಿರುವುದು ಹಾಗೂ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಹರಿತವಾದ ಆಯುಧಗಳನ್ನು ಹಿಡಿದುಕೊಂಡಿರುವ ದೃಶ್ಯಗಳಿವೆ ಎನ್ನಲಾಗಿದೆ.

ಈ ಸಂಬಂಧ ಲಷ್ಕರ್ ಮೊಹಲ್ಲಾದ ಮೊಸೀನ್ ಖುರೇಷಿನ್ ಎಂಬಾತನನ್ನು ಆರೋಪಿತನಾಗಿ ದಾಖಲಿಸಲಾಗಿದೆ. ಪ್ರಕರಣವನ್ನು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, 1959ರ ಕಲಂ 25(1)(ಎ) ಅಡಿ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Display of lethal weapons on social media: Case registered in Shivamogga   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close