SUDDILIVE || SHIVAMOGGA
ಇಡೀ ಸರ್ಕಾರವನ್ನೇ ಮುಸ್ಲೀಂ ಸಮಾಜಕ್ಕೆ ಅಡವಿಟ್ಟೀದ್ದೀರಿ, ದಾಖಲಾತಿ ಹರಿದು ಶಾಸಕ ಚೆನ್ನಿ ಆಕ್ರೋಶ-You have given the entire government to the Muslim community, MLA Chenni is outraged after the registration was leaked
ರಾಜ್ಯ ಸರ್ಕಾರವನ್ನೇ ಇಡೀ ಮುಸ್ಲೀಂ ಸಮಾಜಕ್ಕೆ ಅಡವಿಟ್ಟಿದ್ದೀರಿ ಎಂದು ಆಕ್ರಶ ವ್ಯಕ್ತಪಡಿಸಿದ ಶಾಸಕ ಚೆನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ದಾಖಲಾತಿಯನ್ನ ಹರಿದು ರಾಜ್ಯ ಸರ್ಕಾರದ ಆದೇಶಕ್ಕೆ ಹರಿದು ಹಾಕಬೇಕಷ್ಟೆ ಎಂದಿದ್ದಾರೆ.
ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಿದ ವಿಚಾರಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕಾಗಿದ್ದರೂ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಲಾಗಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ವಂದೇ ಮಾತರಂ ಗೀತೆಗೆ 125 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸತ್ ಹಾಗೂ ರಾಜ್ಯಸಭೆಯಲ್ಲಿ ಚರ್ಚೆ ನಡೆಸಿ, ಸರ್ಕಾರಿ ಕಾರ್ಯಕ್ರಮಗಳ ಆರಂಭಕ್ಕೂ ಮುನ್ನ ಗೀತೆಯನ್ನು ಹಾಡುವಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರಪತಿಗಳೂ ಇದಕ್ಕೆ ಅಂಕಿತ ಹಾಕಿದ್ದಾರೆ ಎಂದು ಚನ್ನಬಸಪ್ಪ ಹೇಳಿದರು.
ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದ ನಿರ್ಧಾರದ ಮೂಲಕ ಕೇಂದ್ರದ ಆದೇಶವನ್ನು ಬದಿಗೊತ್ತುವ ರೀತಿಯಲ್ಲಿ ನಡೆದುಕೊಂಡಿದೆ ಎಂದು ಆರೋಪಿಸಿದ ಅವರು, “ಕೇಂದ್ರ ಸರ್ಕಾರದ ಕಾನೂನು ಒಂದು, ರಾಜ್ಯ ಸರ್ಕಾರದ ಕಾನೂನು ಮತ್ತೊಂದು ಎಂಬ ವ್ಯವಸ್ಥೆ ಸಾಧ್ಯವೇ?” ಎಂದು ಪ್ರಶ್ನಿಸಿದರು.
ನ್ಯಾಯಾಧೀಶರ ಸಮ್ಮುಖದಲ್ಲೇ ಕಾನೂನು ಉಲ್ಲಂಘನೆ ಆರೋಪ
ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಸೇರಿದಂತೆ ನ್ಯಾಯಾಂಗದ ಅಧಿಕಾರಿಗಳು ಉಪಸ್ಥಿತರಿದ್ದರು. ಅಂತಹ ಕಾರ್ಯಕ್ರಮದಲ್ಲೇ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ಬೇಸರದ ಸಂಗತಿ ಎಂದು ಚನ್ನಬಸಪ್ಪ ಹೇಳಿದರು.
“ಕಾನೂನನ್ನು ಯಾರು ಕಾಪಾಡಬೇಕು? ನ್ಯಾಯಾಧೀಶರ ಸಮ್ಮುಖದಲ್ಲೇ ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ನಡೆದುಕೊಂಡರೆ ಇದು ಯಾರಿಗೆ ಅಪಮಾನ?” ಎಂದು ಅವರು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಆದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಹೇಳಲಾಗಿದೆ. “ಹಾಗಾದರೆ ಗಣ್ಯರು ಇದ್ದಾಗ ಒಂದು ಕಾನೂನು, ಸಾಮಾನ್ಯ ನಾಗರಿಕರ ಮುಂದೆ ಮತ್ತೊಂದು ಕಾನೂನುವೇ?” ಎಂದು ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
‘ಹೋರಾಟಕ್ಕೆ ಚಾಲನೆ’
ಈ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಅಗತ್ಯವಿದ್ದರೆ ಹೋರಾಟವನ್ನು ರೂಪಿಸಲಾಗುವುದು ಎಂದು ಶಾಸಕ ಚನ್ನಬಸಪ್ಪ ಘೋಷಿಸಿದರು.
“ಇವತ್ತಿನಿಂದಲೇ ನಮ್ಮ ಹೋರಾಟ ಆರಂಭವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನ ಭವನದಲ್ಲೇ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹ ಘಟನೆ ನಡೆದಿದೆ. ಸಂವಿಧಾನಕ್ಕೆ ಕಟಿಬದ್ಧರಾಗಿರುವುದರಿಂದ ಬಿಜೆಪಿ ಇದನ್ನು ಸುಮ್ಮನೆ ಬಿಡುವುದಿಲ್ಲ,” ಎಂದು ಅವರು ಹೇಳಿದರು.
ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದ ಗೀತೆಯಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕರೂ ಅದಕ್ಕೆ ಗೌರವ ನೀಡಬೇಕು. ರಾಷ್ಟ್ರಗೀತೆಗೆ ಹೇಗೆ ಗೌರವ ನೀಡುತ್ತೇವೆಯೋ ಅದೇ ರೀತಿ ದೇಶದ ಕಾನೂನು ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಗೌರವಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಧವಳೆ ಹಾಗೂ ದೀನ್ ದಯಾಳ್, ಉಪಮಹಾಪೌರ ಸುರೇಖಾ ಮುರುಳೀಧರ್, ಮಾಜಿ ಪಾಲಿಕೆ ಸದಸ್ಯ ಪ್ರಭಾಕರ್ ಸೇರಿದಂತೆ ಪಕ್ಷದ ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಡಕ್ಕಿ ತಿನ್ನುತ್ತಿರಲ್ಲ
ರಾಷ್ಟ್ರಪತಿ, ದೇಶಕ್ಕೆ ಗೌರವಕೊಡದ ಕಾಂಗ್ರೆಸ್ ಸರ್ಕಾರ ತಗೊಂಡು ಏನಾಗಬೇಕಿದೆ ಎಂದ ಶಾಸಕ ಚೆನ್ನಿ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ವಂದೇಮಾತರಂ ಹಾಡದಿದ್ದಕ್ಕೆ ಜೈಲಿಗೆ ಹಾಕಲಿ ಎಂದಿದ್ದು ಅದಕ್ಕೆ ನಾವು ಮಂಡಕ್ಕಿ ತಿನ್ನುತ್ತಿರಲಿಲ್ಲ ಎಂದಿದ್ದಾರೆ.
ವಂದೇ ಮಾತರಂ ವಿಚಾರವಾಗಿ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಬಿಜೆಪಿ ಮುಖಂಡರು, ಈ ವಿಚಾರದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆದೇಶ ಈಗಾಗಲೇ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆಯೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಕಾನೂನಿನ ಉಲ್ಲಂಘನೆ ನಡೆದಿದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರ ನ್ಯಾಯಾಂಗಕ್ಕೆ ಸೇರಿದ್ದು, ಈ ಕುರಿತು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು.
“ನಾನು ರಾಜಕಾರಣ ಮಾಡುತ್ತಿಲ್ಲ. ಅಗತ್ಯವಿದ್ದರೆ ಜೈಲಿಗೆ ಹಾಕಲಿ. ಆದರೆ ಕಾನೂನನ್ನು ಗೌರವಿಸುವ ಕೆಲಸ ಆಗಬೇಕು” ಎಂದು ಅವರು ಹೇಳಿದರು.
ವಂದೇ ಮಾತರಂ ಹಾಡಬಾರದು ಎಂಬ ನಿಲುವು ಯಾರಾದರೂ ತೆಗೆದುಕೊಂಡರೆ, ಅಂತಹವರನ್ನು ಜನರು ಪ್ರಶ್ನಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ದೇಶದ ರಾಷ್ಟ್ರಭಾವನೆ ಹಾಗೂ ರಾಷ್ಟ್ರಗೀತೆಗೆ ಗೌರವ ನೀಡುವ ವಿಚಾರದಲ್ಲಿ ಸ್ಪಷ್ಟ ನಿಲುವು ಅಗತ್ಯ ಎಂದರು.
ಮಹಾತ್ಮ ಗಾಂಧೀಜಿ ಅವರ ಕಾಲದಲ್ಲಿ ವಂದೇ ಮಾತರಂ ಕುರಿತು ವ್ಯಕ್ತವಾಗಿದ್ದ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಅವರು, “ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಬೇಕಿತ್ತು. ಸ್ವಾತಂತ್ರ್ಯ ಬಂದ ನಂತರ ಅದು ಬೇಡವೇ?” ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಆದೇಶ ಸಂವಿಧಾನಾತ್ಮಕವಾಗಿದೆಯೇ ಎಂಬುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, “ಇವತ್ತಿನಿಂದ ಸಂವಿಧಾನದ ಬಿಕ್ಕಟ್ಟು ಪ್ರಾರಂಭವಾಗಿದೆ” ಎಂದು ಆರೋಪಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಇಂತಹ ಬಿಕ್ಕಟ್ಟು ಸೃಷ್ಟಿಸುವ ಬೆಳವಣಿಗೆಗಳು ನಡೆಯುತ್ತಿವೆ ಎಂದು ದೂರಿದರು.
ಕೇಂದ್ರ ಸರ್ಕಾರದ ಕಾನೂನು ಮತ್ತು ರಾಜ್ಯ ಸರ್ಕಾರದ ಕಾನೂನುಗಳು ಪರಸ್ಪರ ವಿರುದ್ಧವಾಗಿರಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ದೇಶಾದ್ಯಂತ ಅನ್ವಯಿಸುವ ಕಾನೂನುಗಳ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ವಿಭಿನ್ನ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಕುರಿತು ತಮ್ಮ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಅಗತ್ಯಬಿದ್ದರೆ ವ್ಯಕ್ತಿಯಾಗಿ, ಪಕ್ಷವಾಗಿ, ಸಮುದಾಯವಾಗಿ ಹಾಗೂ ಸಮಾಜದ ಪರವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.
You have mortgaged the entire government to the Muslim community - MLA Chenni outraged
