ಶಿವಮೊಗ್ಗ ದಸರಾ ಅವಾಂತರ: ಭಗ್ನಗೊಂಡ ಚಾಮುಂಡೇಶ್ವರಿ ವಿಗ್ರಹ ವೀಕ್ಷಿಸಿದ ಸಚಿವ ಮಧು ಬಂಗಾರಪ್ಪ-Shivamogga Dasara riots: Minister Madhu Bangarappa views the damaged Chamundeshwari idol

 SUDDILIVE || SHIVAMOGGA

ಶಿವಮೊಗ್ಗ ದಸರಾ ಅವಾಂತರ: ಭಗ್ನಗೊಂಡ ಚಾಮುಂಡೇಶ್ವರಿ ವಿಗ್ರಹ ವೀಕ್ಷಿಸಿದ ಸಚಿವ ಮಧು ಬಂಗಾರಪ್ಪ-Shivamogga Dasara riots: Minister Madhu Bangarappa views the damaged Chamundeshwari idol
Madhu, visit



ಶಿವಮೊಗ್ಗ: ಅ.21ರಂದು ಶಿವಮೊಗ್ಗ ದಸರಾ ಜಂಬೂಸವಾರಿಯ ವೇಳೆ ಸೋಮಣ್ಣ ಆನೆ ದಿಗಿಲುಗೊಂಡು ಸೃಷ್ಟಿಸಿದ ಅವಾಂತರದಲ್ಲಿ ಭಗ್ನಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹಾಗೂ ಮಂಟಪವನ್ನು ಸಚಿವ ಮಧು ಬಂಗಾರಪ್ಪ ಅವರು ಶನಿವಾರ ಬೆಳಿಗ್ಗೆ ವೀಕ್ಷಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಶ್ವಾಸ್ ಅವರ ಸಮ್ಮುಖದಲ್ಲಿ ಸಚಿವರು ಭಗ್ನಗೊಂಡಿರುವ ಚಾಮುಂಡೇಶ್ವರಿ ವಿಗ್ರಹ ಹಾಗೂ ಮಂಟಪವನ್ನು ಪರಿಶೀಲಿಸಿದರು. ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಘಟನೆಯ ಕುರಿತು ಸಚಿವರಿಗೆ ವಿವರ ನೀಡಿದರು.

ವಿಗ್ರಹದ ಮುಂದಿನ ಕ್ರಮದ ಬಗ್ಗೆ ಚರ್ಚೆ

ಚಾಮುಂಡೇಶ್ವರಿ ಉತ್ಸವ ಮೂರ್ತಿ ಭಗ್ನಗೊಂಡಿರುವ ಹಿನ್ನೆಲೆಯಲ್ಲಿ, ವಿಗ್ರಹದ ಕುರಿತು ಮುಂದೇನು ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಅಧಿಕಾರಿಗಳನ್ನು ಉದ್ದೇಶಿಸಿ ವಿಗ್ರಹದ ಮುಂದಿನ ನಿರ್ವಹಣೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಾಯಣ್ಣಗೌಡ ಅವರು, ಈ ವಿಚಾರವನ್ನು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಭಗ್ನಗೊಂಡಿರುವ ವಿಗ್ರಹ ಮತ್ತು ಮಂಟಪದ ಕುರಿತು ಮುಂದಿನ ನಿರ್ಧಾರವನ್ನು ಅಧಿಕಾರಿಗಳ ಸಭೆಯ ಬಳಿಕ ಕೈಗೊಳ್ಳುವ ನಿರೀಕ್ಷೆಯಿದೆ.

ಜಂಬೂಸವಾರಿಯಲ್ಲಿ ಸೋಮಣ್ಣ ಆನೆಯಿಂದ ಅವಾಂತರ

ಅಕ್ಟೋಬರ್ 21ರಂದು ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂಸವಾರಿಯ ವೇಳೆ ಸೋಮಣ್ಣ ಆನೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ದಿಗಿಲುಗೊಂಡ ಆನೆ ನಿಯಂತ್ರಣ ತಪ್ಪಿದಂತೆ ವರ್ತಿಸಿ ಅವಾಂತರ ಸೃಷ್ಟಿಸಿತ್ತು. ಘಟನೆಯ ವೇಳೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹಾಗೂ ಮಂಟಪ ಭಗ್ನಗೊಂಡಿದ್ದವು.

ಶಿವಮೊಗ್ಗ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂಸವಾರಿಯ ಸಂದರ್ಭದಲ್ಲಿ ನಡೆದ ಈ ಘಟನೆ ಸಾರ್ವಜನಿಕರ ಗಮನ ಸೆಳೆದಿತ್ತು. ಇದೀಗ ಸಚಿವ ಮಧು ಬಂಗಾರಪ್ಪ ಅವರು ಭಗ್ನಗೊಂಡಿರುವ ವಿಗ್ರಹವನ್ನು ಖುದ್ದಾಗಿ ವೀಕ್ಷಿಸಿದ್ದು, ಅದರ ಮುಂದಿನ ನಿರ್ವಹಣೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ.

ವಿಗ್ರಹದ ಕುರಿತು ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಮಾತನಾಡಿದ ಮಧು ಬಂಗಾರಪ್ಪ ಮೊನ್ನೆ ದಸರದಲ್ಲಿ ನಡೆದ ಘಟನೆ ಅವಾಂತರ ಸೃಷ್ಠಿಯಾಗದಿದ್ದರೂ ಇದೊಂದು ಎಚ್ಚರಿಕೆಯಾಗಿದೆ. ರಾಜ್ಯಸರ್ಕಾರದಿಂದಲೂ ಕೇಳಿದ್ದಾರೆ. ವಿವರಣೆ ನೀಡಲಾಗಿದೆ. ಆನೆ ಮೇಲೆ ಅಂಬಾರಿ ಸಂಪ್ರದಾಯ ಆರಂಭಿಸಿದ ನಂತರ ಅರಣ್ಯ ಇಲಾಖೆ ಆನೆಯನ್ನ ತರಬೇತಿ ನೀಡಿದ್ದಾರೆ. ಅಂಬಾರಿ ಶಿವಮೊಗ್ಗದಲ್ಲಿ ಇರಲಿಲ್ಲ. ಸೋಮಣ್ಣ ಅಂಬಾರಿ ಹೋರುವುದನ್ನ ತಂಡ ನಿರ್ಧರಿಸಿತ್ತು. ಗಾಬರಿಯಾಗಿ ಈ ಘಟನೆ ನಡೆದಿದೆ. ಆನೆ ಜವಬ್ದಾರಿ ಮೆರೆದಿದೆ. ಗಾಬರಿಯಾಗಿ ಆನೆ ತಿರುಗಿದೆ. ಜನರನ್ನ‌ನೋಡಿ ದಿಗಿಲುಗೊಂಡಿದೆ. ಓಡಿದೆ ಎಂದರು. 

ಕೊನೆ ಕ್ಷಣದಲ್ಲಿ ಸೋಮಣ್ಣ ನ ಆಯ್ಕೆಯಾಗಿರಲಿಲ್ಲ. ತಂಡ ನಿರ್ಧರಿಸಿತ್ತು. ಮೂರು ಆನೆಗಳಿಗೆ ತರಬೇತಿ ನಿರಂತರವಾಗಿತ್ತು. ಕಳೆದ ವರ್ಷ ಅಂಬಾರಿ ಹೋರುವ ಆನೆಯೇ ಮುಂದಿತ್ತು. ತರಬೇತಿಯಲ್ಲಿ ಸೋಮಣ್ಣ ಫಿಟ್ ಇತ್ತು. ಇದರ ನಿರ್ಣಯದಲ್ಲಿ ಗಲಿಬಿಲಿಯಾಗಿರಲಿಲ್ಲ. ಸೋಮಣ್ಣ ಕುಮ್ಕಿ ಮಾತ್ರವಲ್ಲ ಎಲ್ಲಾ ವಿಭಾಗದಲ್ಲಿ ತರಬೇತಿ ನೀಡಲಾಗಿತ್ತು. ಮಹುತರ ಮಾಹಿತಿ ಇಲ್ಲದೆ ಅಂಬಾರಿ ಹೋರಿಸುವ ನಿರ್ಣಯ ಹೊರಗೆ ಬೀಳಲ್ಲ ಎಂದರು. 

ಮಾನಹಾನಿಗೆ ಆಕ್ಷೇಪ

ದಸರದಲ್ಲಿ ನಡೆದ ಮಾನವ ಹಾನಿ ಎನ್ನುವ ಬದಲು ಸಚಿವ ಮಧು ಬಂಗಾರಪ್ಪ ಮಾನಹಾನಿ ಎಂದಾಗ ಪತ್ರಕರ್ತರು ಮಾನವ ಹಾನಿ ಅಥವಾ ಪ್ರಾಣ ಹಾನಿಯಾಗಿಲ್ಲ ಎಂದಾಗ ಸಚಿವರು ಮುಜುಗರಕ್ಕೊಳಗಾದರು. ನಂತರ ಸರಿದೂಗಿಸಿಕೊಂಡು ಹೋದರು. 

ಶಾಸಕರ ನಿರ್ಣಯದಿಂದ‌ ಅನಾಹುತ

ಶಾಸಕ ಚೆನ್ನಬಸಪ್ಪನವರ ನಿರ್ಣಯದಿಂದ ಸೋಮಣ್ಣನನ್ನ ಮುಂದೆ ತರಲಾಗಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವರು ಏನು ಆಡಿಯೋ ಇರುವುದು ಕಳುಹಿಸಿ ಎಂದಿದ್ದಾರೆ. ಕಳೆದ ಮೂರು ವರ್ಷದಿಂದ‌ಅನಾಹುತವಾಗುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರ ಕ್ರಮ ಜರುಗಿಸಲಿದೆ ಎಂದು ನುಣಚಿಕೊಂಡರು. 

ಶಿವಮೊಗ್ಗದ ಅರಣ್ಯ ಇಲಾಖೆ ಕುರಿತು ಸಮಗ್ರ ಚರ್ಚೆಯನ್ನ ಅ.27 ರಂದು ನಡೆಸಲಾಗುವುದು ಎಂದರು. ಭಾವನಾತ್ಮಕವಾಗಿ ನಿರ್ಣಯಿಸಲ್ಲ. ವೈಜ್ಞಾನಿಕವಾಗಿ ಮುಂದಿನ‌ದಿನಗಳಲ್ಲಿ ಆನೆ ಬಳಕೆಯ ಬಗ್ಗೆ ಕ್ರಮ ಜರುಗಿಸಲಾಗುವುದು. ಕಾವಡಿ ಮತ್ತು ಮಾಹುತರ ಬಗ್ಗೆ ಕ್ರಮ ಜರುಗಿಸಬಾರದು ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದಾಗ ಆ ಬಗ್ಗೆ ರಾಜ್ಯ ಸರ್ಕಾರ ಕ್ರಮ‌ಜರುಗಿಸಲಿದೆ ಎಂದರು. 

Dasara, madhu

ವಿಭಾಗೀಯ ಮೇಜಿಸ್ಟ್ರೇಟ್ ನಿಂದ ತನಿಖೆ ಮಾಡಿ. ಸಿಸಿಎಫ್ ಹನುಮಂತಪ್ಪನವರೆ ಈ ಘಟನೆಯ ಬಗ್ಗೆ ವರದಿ ಕೇಳಲಾಗಿದೆ ಇದು ಸರಿನಾ ಎಂದಾಗ ಇದನ್ನ ಸಿಎಂ ನಿರ್ಣಯಿಸುತ್ತಾರೆ. ಇದನ್ನ ಮುಖ್ಯಮಂತ್ರಿಗಳಿಗೆ ವಿವರಿಸಲಾಗುವುದು ಎಂದರು. ಭಗ್ನಗೊಂಡ ವಿಗ್ರಹದ ಬಗ್ಗೆ ಚರ್ಚಿಸಿ ನಿರ್ಣಯಿಸಲಾಗುವುದು. ಯಾವುದೇ ಆಭರಣ ಕಳುವಾಗಿಲ್ಲ. ಎಲ್ಲವೂ ಸಂರಕ್ಷಿಸಲಾಗಿದೆ. ಅವುಕ್ಕೆ ಇನ್ಸುರೆನ್ಸ್ ಇದೆ. ಅದನ್ನ ಪುನರ್ಮಿಸಲಾಗುವುದು ಎಂದರು. 

Shivamogga Dasara riots: Minister Madhu Bangarappa views the damaged Chamundeshwari idol

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close