ಅ.25ರಂದು ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಪೂರ್ವಭಾವಿಯಾಗಿ ಬ್ಯಾಂಡ್‌ಸೆಟ್ ತಂಡದ ಮೆರವಣಿಗೆ-RSS procession in Shivamogga on October 25: Bandset team to march in advance

SUDDILIVE || SHIVAMOGGA

ಅ.25ರಂದು ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಪೂರ್ವಭಾವಿಯಾಗಿ ಬ್ಯಾಂಡ್‌ಸೆಟ್ ತಂಡದ ಮೆರವಣಿಗೆ-RSS procession in Shivamogga on October 25: Bandset team to march in advance    

Bandset, rss

Rss, bandset

ಶಿವಮೊಗ್ಗ: ವಿಜಯದಶಮಿ ಅಂಗವಾಗಿ ಅಕ್ಟೋಬರ್ 25ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನ ನಡೆಯಲಿದ್ದು, ಇದರ ಅಂಗವಾಗಿ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಅಕ್ಕಮಹಾದೇವಿ ಫ್ರೀಡಂ ಪಾರ್ಕ್‌ವರೆಗೆ ಬ್ಯಾಂಡ್‌ಸೆಟ್ ತಂಡದ ಪೂರ್ವಭಾವಿ ಪಥಸಂಚಲನ ನಡೆಯಿತು.

ಆರ್‌ಎಸ್‌ಎಸ್‌ನ ಪಥಸಂಚಲನದಲ್ಲಿ ಮುಂಭಾಗದಲ್ಲಿ ಸಾಗುವ ಬ್ಯಾಂಡ್‌ಸೆಟ್ ತಂಡವು ಪೂರ್ವಭಾವಿ ಮೆರವಣಿಗೆಯಲ್ಲಿ ಪಾಲ್ಗೊಂಡಿತು. ಬ್ಯಾಂಡ್‌ಸೆಟ್‌ಗಳಿಗೆ ಲೈಟ್‌ಗಳ ಅಲಂಕಾರ ಮಾಡಲಾಗಿದ್ದು, ಭಾರತ ಮಾತೆಯ ವಿಗ್ರಹವನ್ನು ತೆರೆದ ಜೀಪಿನಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು.

ಅಕ್ಟೋಬರ್ 25ರ ವಿಜಯದಶಮಿ ದಿನದಂದು ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಈ ಪೂರ್ವಭಾವಿ ಮೆರವಣಿಗೆ ಆಯೋಜಿಸಲಾಗಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆ ಅಕ್ಕಮಹಾದೇವಿ ಫ್ರೀಡಂ ಪಾರ್ಕ್‌ವರೆಗೆ ಸಾಗಿತು.

RSS procession in Shivamogga on October 25: Bandset team to march in advance  


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close