ಶಿವಮೊಗ್ಗ ದುರ್ಗಿಗುಡಿ ಎಂಟ್ರೆನ್ಸ್‌ನಲ್ಲಿ ತಳ್ಳುವ ಗಾಡಿ ವ್ಯಾಪಾರಿಗಳ ನಡುವೆ ಗಲಾಟೆ: ತೂಕದ ಕಲ್ಲಿನಿಂದ ಹಲ್ಲೆ, ವ್ಯಾಪಾರಿಗೆ ಗಾಯ-Clashes between push cart traders at Durgigudi entrance in Shivamogga: Trader injured after being attacked with a heavy stone

 SUDDILIVE || SHIVAMOGGA

ಶಿವಮೊಗ್ಗ ದುರ್ಗಿಗುಡಿ ಎಂಟ್ರೆನ್ಸ್‌ನಲ್ಲಿ ತಳ್ಳುವ ಗಾಡಿ ವ್ಯಾಪಾರಿಗಳ ನಡುವೆ ಗಲಾಟೆ: ತೂಕದ ಕಲ್ಲಿನಿಂದ ಹಲ್ಲೆ, ವ್ಯಾಪಾರಿಗೆ ಗಾಯ-Clashes between push cart traders at Durgigudi entrance in Shivamogga: Trader injured after being attacked with a heavy stone   
Shivamogga, durgigudi



ಶಿವಮೊಗ್ಗ: ನಗರದ ದುರ್ಗಿಗುಡಿ ಎಂಟ್ರೆನ್ಸ್‌ನಲ್ಲಿರುವ ಐಸಿಐಸಿಐ ಬ್ಯಾಂಕ್ ಇರುವ ಕಾಂಪ್ಲೆಕ್ಸ್ ಎದುರು ಫುಟ್‌ಪಾತ್ ಮೇಲೆ ತಳ್ಳುವ ಗಾಡಿ ಇಟ್ಟುಕೊಂಡು ಹಣ್ಣು ಮಾರಾಟ ಮಾಡುವ ವ್ಯಾಪಾರಸ್ಥರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಓರ್ವ ವ್ಯಾಪಾರಿ ಗಾಯಗೊಂಡಿದ್ದಾರೆ.

ಫುಟ್‌ಪಾತ್ ಮೇಲೆ ತಳ್ಳುವ ಗಾಡಿ ನಿಲ್ಲಿಸಿಕೊಂಡು ಹಣ್ಣು ವ್ಯಾಪಾರ ಮಾಡುವ ವಿಚಾರವಾಗಿ ಇಬ್ಬರು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಓರ್ವ ವ್ಯಾಪಾರಿ ಹಣ್ಣು ತೂಕ ಮಾಡಲು ಬಳಸುವ ತೂಕದ ಕಲ್ಲಿನಿಂದ ಮತ್ತೊಬ್ಬ ವ್ಯಾಪಾರಿಗೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಾಯಗೊಂಡ ವ್ಯಾಪಾರಿಯ ಹಣೆಯ ಭಾಗಕ್ಕೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ.

ಗಾಯಗೊಂಡ ವ್ಯಾಪಾರಿಯನ್ನು ಶಂಸುದ್ದೀನ್ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಅವರನ್ನು ಸ್ಥಳದಲ್ಲಿದ್ದವರು ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹಲ್ಲೆ ನಡೆಸಿದ ಎನ್ನಲಾದ ಮತ್ತೊಬ್ಬ ವ್ಯಾಪಾರಿಯ ಹೆಸರು ಇನ್ನೂ ತಿಳಿದುಬಂದಿಲ್ಲ.

ಸಾರ್ವಜನಿಕರ ಎದುರೇ ಗಲಾಟೆ

ನಗರದ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ದುರ್ಗಿಗುಡಿ ಎಂಟ್ರೆನ್ಸ್‌ನಲ್ಲಿ ಸಾರ್ವಜನಿಕರ ಎದುರೇ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿರುವುದು ಸ್ಥಳೀಯರ ಗಮನ ಸೆಳೆದಿದೆ. ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಬೇಕಾದವರು ಫುಟ್‌ಪಾತ್‌ನಲ್ಲಿ ಗಾಡಿ ಇಟ್ಟುಕೊಳ್ಳುವ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಫುಟ್‌ಪಾತ್‌ಗಳಲ್ಲಿ ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವ ವಿಚಾರದಲ್ಲಿ ವ್ಯಾಪಾರಿಗಳ ನಡುವೆ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಬದಲು ಹಲ್ಲೆ ನಡೆಸುವ ಹಂತಕ್ಕೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ. ಸಾರ್ವಜನಿಕರೆ ವ್ಯಾಪಾರಸ್ಥರಿಗೆ ಬುದ್ದಿ ಹೇಳಿ ಕಳುಹಿಸಿದ್ದು ನಡೆದಿದೆ. 

ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ವ್ಯಕ್ತಿಯ ಪೂರ್ಣ ವಿವರ ಹಾಗೂ ಮುಂದಿನ ಪೊಲೀಸ್ ಕ್ರಮಗಳ ಕುರಿತು ಮಾಹಿತಿ ಲಭ್ಯವಾಗಬೇಕಿದೆ. ಘಟನೆಗೆ ಸಂಬಂಧಿಸಿದ ಇತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

Clashes between push cart traders at Durgigudi entrance in Shivamogga: Trader injured after being attacked with a heavy stone   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close