ಕಾನೂನು ರಕ್ಷಣೆಗೂ ಜೈ ಇಡ್ಲಿ ಹೊಡೆಯಕ್ಕೂ ಸೈ-Traffic police participatein idly abd banana eating competation

 SUDDILIVE || SHIVAMOGGA

ಕಾನೂನು ರಕ್ಷಣೆಗೂ ಜೈ ಇಡ್ಲಿ ಹೊಡೆಯಕ್ಕೂ ಸೈ-Traffic police participatein idly abd banana eating competation

Idly, competation

ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ನಗರದ ಶಿವಪ್ಪ ನಾಯಕನ ಪ್ರತಿಮೆ ಬಳಿ ಇಡ್ಲಿ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಅತಿ ಹೆಚ್ಚು ಇಡ್ಲಿ ಹಾಗೂ ಬಾಳೆಹಣ್ಣು ತಿಂದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಟ್ರಾಫಿಕ್ ಪೊಲೀಸರಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಸಲಾಗಿದ್ದು, ಸಾರ್ವಜನಿಕರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಆಹಾರ ತಿನ್ನುವ ಸ್ಪರ್ಧೆಯಲ್ಲಿ ವಿಜೇತರ ವಿವರ

ಇಡ್ಲಿ ತಿನ್ನುವ ಸ್ಪರ್ಧೆ – ಸಂಚಾರಿ ಪೊಲೀಸರಿಗೆ ಪುರುಷರ ವಿಭಾಗದಲ್ಲಿ ಪ್ರವೀಣ್ ಪಾಟೀಲ್ 12 ಇಡ್ಲಿ ತಿಂದು ಪ್ರಥಮ ಸ್ಥಾನ ಪಡೆದರು. ರಮೇಶ್ 10 ಇಡ್ಲಿ ತಿಂದು ದ್ವಿತೀಯ ಸ್ಥಾನ ಹಾಗೂ ಸಂತೋಷ್ 9 ಇಡ್ಲಿ ತಿಂದು ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ದಿವ್ಯಾ ಟಿ.ಡಿ. 7½ ಇಡ್ಲಿ ತಿಂದು ಪ್ರಥಮ ಸ್ಥಾನ ಪಡೆದರು. ರಾಧಾ 7 ಇಡ್ಲಿ ತಿಂದು ದ್ವಿತೀಯ ಸ್ಥಾನ ಹಾಗೂ ಸರಳಾ 5 ಇಡ್ಲಿ ತಿಂದು ತೃತೀಯ ಸ್ಥಾನ ಪಡೆದರು.

Idly, dasara

ಸಾರ್ವಜನಿಕರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ

ಪುರುಷರ ವಿಭಾಗದಲ್ಲಿ ಮಿಥುನ್ 11½ ಇಡ್ಲಿ ತಿಂದು ಪ್ರಥಮ ಸ್ಥಾನ ಪಡೆದರು. ಮಣಿಕಂಠ 11 ಇಡ್ಲಿ ತಿಂದು ದ್ವಿತೀಯ ಸ್ಥಾನ ಹಾಗೂ ಪ್ರವೀಣ್ 10 ಇಡ್ಲಿ ತಿಂದು ತೃತೀಯ ಸ್ಥಾನ ಪಡೆದರು.

ಬಾಳೆಹಣ್ಣು ತಿನ್ನುವ ಸ್ಪರ್ಧೆ – ಮಹಿಳೆಯರು


ಧನಲಕ್ಷ್ಮಿ 13 ಬಾಳೆಹಣ್ಣು ತಿಂದು ಪ್ರಥಮ ಸ್ಥಾನ ಪಡೆದರು. ಗೀತಾ 9 ಬಾಳೆಹಣ್ಣು ತಿಂದು ದ್ವಿತೀಯ ಸ್ಥಾನ ಹಾಗೂ ನೀಲಾ ಕುಮಾರಿ 8 ಬಾಳೆಹಣ್ಣು ತಿಂದು ತೃತೀಯ ಸ್ಥಾನ ಪಡೆದರು.

ಶಿವಮೊಗ್ಗ ದಸರಾ ಮಹೋತ್ಸವದ ಅಂಗವಾಗಿ ನಡೆದ ಈ ಸ್ಪರ್ಧೆಗಳು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದವು. ದಸರಾ ಉತ್ಸವದ ವಿವಿಧ ಕಾರ್ಯಕ್ರಮಗಳ ನಡುವೆ ಇಡ್ಲಿ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು.

Traffic police participatein idly abd banana eating competation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close