ಶಿವಮೊಗ್ಗ: ನೆಹರೂ ರಸ್ತೆಯಲ್ಲಿ ಬ್ಯಾಗ್ ವ್ಯಾಪಾರಿ ಮಹಿಳೆ ಮೇಲಿನ ಹಲ್ಲೆ, ಮಾನಭಂಗ ಯತ್ನ — ಇಬ್ಬರ ವಿರುದ್ಧ ಕೋಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲು-Shivamogga: Attack on bag vendor woman on Nehru Road, attempted rape — FIR registered against two at Kote police station

SUDDILIVE || SHIVAMOGGA

ಶಿವಮೊಗ್ಗ: ನೆಹರೂ ರಸ್ತೆಯಲ್ಲಿ ಬ್ಯಾಗ್ ವ್ಯಾಪಾರಿ ಮಹಿಳೆ ಮೇಲಿನ ಹಲ್ಲೆ, ಮಾನಭಂಗ ಯತ್ನ — ಇಬ್ಬರ ವಿರುದ್ಧ ಕೋಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲು-Shivamogga: Attack on bag vendor woman on Nehru Road, attempted rape — FIR registered against two at Kote police station    

Bag, shop




ಶಿವಮೊಗ್ಗ:
ನಗರದ ನೆಹರೂ ರಸ್ತೆಯ ಸುಜಾತಾ ಬಿಲ್ಡಿಂಗ್‌ ಬಳಿ ಗ್ರಾಹಕರನ್ನು ಸೆಳೆಯುವ ವಿಚಾರದಲ್ಲಿ ಉಂಟಾದ ಗಲಾಟೆ ಸಂಬಂಧ, ಬ್ಯಾಗ್ ವ್ಯಾಪಾರಿ ಮಹಿಳೆ ಹಾಗೂ ಅವರ ಮಗನ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆಯೊಡ್ಡಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಮನೆ ಬಡಾವಣೆಯ ನಿವಾಸಿ ಹಾಗೂ ‘ಶಾರದ ಬ್ಯಾಗ್ಸ್’ ಅಂಗಡಿಯ ಮಾಲೀಕರಾದ ಶಾರದಾ ಪಿ.ಇ. (45) ನೀಡಿದ ದೂರಿನನ್ವಯ, ಪಕ್ಕದ ಮೊಬೈಲ್ ಹಾಗೂ ಬ್ಯಾಗ್ ಅಂಗಡಿಯ ಆರೋಪಿ ಪುರಂದರ ನಾಯ್ಕ್ (A1) ಮತ್ತು ಪ್ರಚೋದನೆ ನೀಡಿದ ಕಿರಣ್ ಸಿಂಗ್ (A2) ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಘಟನೆಯ ವಿವರ:

ಸೆಪ್ಟೆಂಬರ್ 8, 2026ರಂದು ಸಂಜೆ ಸುಮಾರು 6:10ರ ವೇಳೆಗೆ, ಶಾರದಾ ಅವರ ಅಂಗಡಿಗೆ ಬಂದಿದ್ದ ಗ್ರಾಹಕರನ್ನು 1ನೇ ಆರೋಪಿ ಪುರಂದರ ನಾಯ್ಕ್ ತನ್ನ ಅಂಗಡಿಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಇದನ್ನು ಶಾರದಾ ಅವರು ಪ್ರಶ್ನಿಸಿದಾಗ, ಆಕ್ರೋಶಗೊಂಡ ಆರೋಪಿಯು ಅವರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ, "ನಿನ್ನ ಮೇಲೆ ಜಾತಿ ನಿಂದನೆ ಕೇಸು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ.

ಅಷ್ಟಕ್ಕೇ ನಿಲ್ಲದೆ, ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯ ಬಟ್ಟೆ ಎಳೆದಾಡಿ, ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಹಾಗೂ ನೆಲಕ್ಕೆ ತಳ್ಳಿ ಕುತ್ತಿಗೆ ಹಿಸುಕಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ 2ನೇ ಆರೋಪಿ ಕಿರಣ್ ಸಿಂಗ್, "ಅವಳನ್ನು ಹೊಡೆದು ಸಾಯಿಸು, ಮುಂದೆ ಏನಾದರೂ ನಾವು ನೋಡಿಕೊಳ್ಳುತ್ತೇವೆ" ಎಂದು ಪ್ರಚೋದನೆ ನೀಡಿದ್ದಾನೆ.

ತಾಯಿಯ ರಕ್ಷಣೆಗೆ ಬಂದ ಶಾರದಾ ಅವರ 20 ವರ್ಷದ ಮಗ ಸಮರ್ಥ್‌ನ ಮೇಲೆಯೂ ಆರೋಪಿ ಮುಷ್ಟಿಯಿಂದ ಮುಖ ಹಾಗೂ ಮರ್ಮಾಂಗಕ್ಕೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕುಟುಂಬವನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಒಡ್ಡಿದ್ದಾನೆ.

ದೂರು ನೀಡಲು ವಿಳಂಬಕ್ಕೆ ಕಾರಣ:

ಘಟನೆಯ ನಂತರ ವರ್ತಕರ ಸಂಘದ ಮುಖಂಡರು ಆರೋಪಿಗಳನ್ನು ಕರೆಸಿ ರಾಜಿ ಸಂಧಾನ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ, ಆರೋಪಿಗಳು ರಾಜಿ ಸಂಧಾನಕ್ಕೆ ಸ್ಪಂದಿಸದ ಕಾರಣ, ದೂರು ನೀಡಲು ತಡವಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 1, 2026ರಂದು ಸ್ವೀಕೃತವಾದ ದೂರಿನ ಆಧಾರದ ಮೇಲೆ, ಕೋಟೆ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ (ಪ್ರಕರಣ ಸಂಖ್ಯೆ: 187/2026) ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Shivamogga: Attack on bag vendor woman on Nehru Road, attempted rape — FIR registered against two at Kote police station    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close