ಸುದ್ದಿಲೈವ್/ಶಿವಮೊಗ್ಗ
ಕಾಚಿನಕಟ್ಟೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದು ಆತನ ಮೃತ ದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಯಲ್ಲಿರಿಸಲಾಗಿದೆ.
ಕಾಚಿನಕಟ್ಟೆಯಲ್ಲಿ ಗೋವಿಂದ ರಾಜು ಎಂಬ 45 ವರ್ಷದ ವ್ಯಕ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಆತ್ಮಹತ್ಯೆಯ ಬಗ್ಗೆ ಹಲವು ಗುಮಾನಿಗಳು ಹರಡಿದೆ.
ಗೋವಿಂದ್ ರಾಜುಗೆ ಮದುವೆಯಾಗಿ 20 ವರ್ಷ ಕಳೆ್ಇದೆ. ಮಕ್ಕಳಾಗಿರಲಿಲ್ಲ. ಭದ್ರಾವತಿಯ ಜನ್ನಾಪುರದ ಈತನಿಗೆ ಹಂಡತಿ ಮನೆಯಿಂದ ಕಾಚನಕಟ್ಟೆಯಲ್ಲಿ ಒಂದು ಎಕರೆ ಜಮೀನು ದೊರೆತಿತ್ತು. ಅಲ್ಲಿ ಮನೆಕಟ್ಟಿಕೊಂಡಿದ್ದ ಗೋವಿಂದ ರಾಜು ಇಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ
ಭದ್ರಾವತಿ ಕನೆಕ್ಷನ್ ಇರುವುದರಿಂದ ಗೋವಿಂದರಾಜುಗೆ ಕಾನೂನು ಬಾಹಿರ ಚಟುವಟಿಕೆಯ ಕನೆಕ್ಷನ್ ಇತ್ತ ಎಂಬ ಗುಮಾನಿ ಕೇಳಿ ಬರುತ್ತಿದೆ. ಆದರೆ ಆತನ ಕುಟುಂಬ ಕಾನೂನು ಬಾಹಿರ ಕನೆಕ್ಷನ್ ಇಲ್ಲ ಎಂದು ಹೇಳುತ್ತಿದೆ. ಈ ಪ್ರಕರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಒಂದು ವೇಳೆ ಈ ಘಟನೆ ಸತ್ಯವಾಗಿದ್ದರೆ, 15 ದಿನಗಳಲ್ಲಿ ನಾಲ್ಕು ಸಾವು ಕಾನೂನು ಬಾಹಿರ ಚಟುವಟಿಕೆಗೆ ಬಲಿಯಾದಂತೆ ಆಗುತ್ತದೆ. ವಿಲ್ಸನ್, ಗೋಣಿ ಬೀಡಿನ ಕಂಠಿ, ಪ್ರದೀಪ ಈಗ ಗೋವಿಂದ ರಾಜು ಬಲಿಯಾದಂತೆ ಆಗಿದೆ.