ಚತುಷ್ಪಥ ರಸ್ತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚತುಷ್ಪಥ ರಸ್ತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 5, 2024

ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಮರಗಳ ಮೇಲೆ ಗುರುತು ಹಾಕುತ್ತಿರುವುದೇಕೆ?




ಸುದ್ದಿಲೈವ್/ಶಿವಮೊಗ್ಗ


ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗುವ ಮುಂಚೆನೆ, ಹಾಗೂ ಅರಣ್ಯದಲ್ಲಿ ಒತ್ತುವರಿಯಾಗುವ ರೆಸಾರ್ಟ್ ಮತ್ತು ಹೋಮ್ ಸ್ಟೇಗಳನ್ನ ತೆರವುಗೊಳಿಸುವ ಆದೇಶದ ಬೆನ್ನ ಹಿಂದೆ ಶಿವಮೊಗ್ಗ ಮತ್ತು ಸಾಗರ ರಸ್ತೆಯ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಮರಗಳು ಕಡಿತಲೆಯಾಗಲು ಸಿದ್ದವಾಗಿದೆ. 


ಜನವಸತಿಗೆ ಸಿಗದ ಅರಣ್ಯದ ಅನುಮತಿ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ಸಿಗುವುದು ದುರಂತವೇ ಸರಿ. ಚೋರಡಿ, ತುಪ್ಪೂರು ಭಾಗದಲ್ಲಿ ಈಗಾಗಲೇ ರಸ್ತೆಯ ಬದಿಗಳಲ್ಲಿರುವ ಮರಗಳಿಗೆ ಗುರುತು ಮಾಡಲಾಗುತ್ತಿದೆ. ಮರಗಳಿಗೆ  ಚಿಪ್ಪಿಂಗ್ ಮಾಡಿ 2024 ಎಂದು ಗುರುತಿಸಲಾಗುತ್ತಿದೆ. 


ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕಡಿತಲೆಗೆ 2023 ರಲ್ಲೇ ಅನುಮತಿ ಪಡೆಯಲಾಗಿದೆ. ಸಾಗರ ಮತ್ತು ಶಿವಮೊಗ್ಗ ನಡುವೆ  ರಸ್ತೆ ಅಗಲೀಕರಣಕ್ಕೆ ಕಾರ್ಯಚಾರಣೆ ಆರಂಭವಾಗಿದೆ ಎಂದು ಒಪ್ಪಿಕೊಂಡರು ಎಷ್ಟು ಮರಗಳ ಕಡಿತಲೆ ಆಗಲಿದೆ ಎಂಬ ಮಾಹಿತಿ ಮಾತ್ರ ಹೇಳುತ್ತಿಲ್ಲ. 



ರಸ್ತೆ ಅಗಲೀಕರಣವೇ ಆಗಲಿದೆ ಎಂಬುದಾದರೆ ಸಾವಿರಾರು ಮರಗಳ ಕಡಿತಲೆಗೆ ಸಿದ್ದವಾಗಲಿದೆ. ಶಿವಮೊಗ್ಗ-ಸಾಗರ ನಡವಿನ ರಸ್ತೆಯಲ್ಲಿ ರಸ್ತೆಯ ಬದಿಯಲ್ಲಿ ಮಾತ್ರ ಉಳಿದಿರುವ ಮರಗಳು ಕಡಿತಲೆಯಾದರೆ ಮತ್ತೊಂದು ಬಟಾಬಯಲಾಗಲಿದೆ. ಮರ ಕಡಿದು ಟಾರ್ ಹಾಕುವುದೇ ಅಭಿವೃದ್ಧಿಯಾಗಿರುವುದರಿಂದ ಪಶ್ಚಿಮ ಘಟ್ಟದಲ್ಲಿ ಸಂಭವಿಸುವ ಅನಾಹುತಗಳಿಗೆ  ಹೊಣೆಯಾಗುತ್ತಿರುವುದಾದರೂ ಯಾರು?


ರಸ್ತೆ ಅಭಿವೃದ್ಧಿಗೆ ಟೈಗರ್ ಫಾರೆಸ್ಟ್, ಡೀಮ್ಡ್ ಫಾರೆಸ್ಟ್, ವೈಲ್ಡ್ ಫಾರೆಸ್ಟ್ ಮುಂತಾದ ಕಾನೂನುಗಳು ಪುಸ್ತಕದಲ್ಲಿ ಮಾತ್ರ ಭದ್ರವಾಗಿ ಕೂರುವುದಾದರೆ ಜನವಸತಿಗೆ ಯಾಕೆ ಅಡ್ಡಿ ಬರುತ್ತದೆ ಎಂಬುದಕ್ಕೆ ಯಾರೂ ಉತ್ತರ ನೀಡುತ್ತಿಲ್ಲ.  ಪಶ್ಚಿಮ ಘಟ್ಟದಲ್ಲಿ ಅನಾಹುತವಾಗುವುದರಿಂದ 2015 ರಿಂದ ಇತ್ತೀಚಿನ ವರ್ಷಗಳಲ್ಲಿ  ಅರಣ್ಯ ಒತ್ತುವರಿಯಲ್ಲಿ ನಿರ್ಮಿಸಿರುವ  ರೆಸಾರ್ಟ್ ಮತ್ತು ಹೋಮ್ ಸ್ಟೇಗಳು ಅರಣ್ಯ ಸಚಿವರಿಗೆ ಕಣ್ಣಿಗೆ ಕಾಣುತ್ತಿದೆ. 


ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಮರಗಳ ಮತ್ತು ಪ್ರಕೃತಿಯ ಮೇಲಿನ ಅತಿಕ್ರಮಣ ಕಾಣದೆ ಹೋಗಿರುವುದು ದುರಂತ.