ಸುದ್ದಿಲೈವ್/ಶಿವಮೊಗ್ಗ
28 ಕ್ಕೆ 28 ಸ್ಥಾನ ಗೆಲ್ಲುವ ಭರವಸೆಯನ್ನ ನಡ್ಡಾರವರಿಗೆ ಕೊಟ್ಟಿದ್ದೆ ಎರಡು ಮೂರು ಸ್ಥಾನ ಹೆಚ್ಚು ಕಮ್ಮಿಯಾಗಬಹುದು. ಕನಿಷ್ಟ 25 ಜನಸಂಸದರನ್ನ ದೆಹಲಿಗೆ ಕರೆತರುವೆ ಎಂದು ಮಾಜಿ ಸಿಎಂ ಬಿಎಸ್ ವೈ ಜೆಪಿ ನಡ್ಡಾರಿಗೆ ಭರವಸೆ ನೀಡಿದರು.
ಅವರು ನಗರದ ಪೆಸಿಟ್ ಕಾಲೇಜಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಜೆಪಿ ನಡ್ಡಾರವರ ನೇತೃತ್ವದಲ್ಲಿ ನಡೆದ ಬಿಜೆಪಿ ಕರ್ನಾಟಕ ವೃತ್ತಿ ಪರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಎಂಪಿ ರಾಘವೇಂದ್ರ 3 ಲಕ್ಷ ಅಂತರದಿಂದ ಗೆಲ್ಳಿದ್ದಾರೆ. ಮತ್ತೆ ನಾಳೆ ಪ್ರವಾಸ ಮಾಡುತ್ತಿರುವೆ. ಬಿಜೆಪಿಗೆ ಉತ್ತಮ ವಾತಾವರಣವಿದೆ ಎಂದರು.
ನಂತರ ಮಾಧ್ಯಮಗಳಿಗೆ ಮಾತನಾಡಿದ ಬಿಎಸ್ ವೈ ಬರ ಪರಿಹಾರದಲ್ಲಿ ಮೊದಲು ರಾಜ್ಯ ಸರ್ಕಾರ ತಮ್ಮಜವಬ್ದಾರಿ ನಿಭಾಯಿಸಬೇಕು. ತಮ್ಮ ಹಣದಲ್ಲಿ ಕಾಮಗಾರಿ ಕೈಗೊಳ್ಳಬೇಕು. ನನ್ನ ಅವಧಿಯಲ್ಲೂ ಬರ ಕಾಣಿಸಿಕೊಂಡಿತ್ತು. ಸಮರ್ಪಕವಾಗಿ ನಿಭಾಯಿಸಲಾಗಿತ್ತು. ಈಗಿನ ಸರ್ಕಾರ ಖಚಾನೆ ದಿವಾಳಿ ಮಾಡಿಕೊಂಡು ಕೇಂದ್ರ ಸರ್ಕಾರಕ್ಕೆ ಬೆರಳು ಮಾಡಿಕೊಳ್ಳ ಬಾರದು ಎಂದರು.
ಇದನ್ನೂ ಓದಿ-https://suddilive.in/archives/13879