ಸುದ್ದಿಲೈವ್/ಶಿವಮೊಗ್ಗ
ಆರಂಭದ ದಿನಗಳಿಂದ ಇದ್ದ ವಾತಾವರಣ ಬದಲಾಗಿದ್ದು ಸಾಮಾನ್ಯ ಜನ ನನಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತ ಶಿವವರಾಜ್ ಕುಮಾರ್, ಜೊತೆ ಬಿಎಸ್ ವೈ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮತ್ತು ರಾಘಣ್ಣನಿಗೆ ಮತ ನೀಡಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನವರು ನನಗೆ ಬೆಂಬಲ ಸೂಚಿಸುತ್ತಿರುವುದಾಗಿ ಹೇಳಿದರು.
ಜಿಲ್ಲಾ ಜಂಗಮ ಸಮಾಜ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದರು. ಈಶ್ವರಪ್ಪನವರ ಆಪ್ತ ಇ.ವಿಶ್ವಾಸ್ ಮಾತನಾಡಿ, ನಿನ್ನೆಬ ಜಿಲ್ಲಾ ಸಮಿತಿಗೆ ನಗರ ಸಮಿತಿ ಉಚ್ಚಾಟನೆಯ ಶಿಫಾರಸು ಮಾಡಿದೆ. ಆದರೆ ಬಿಜೆಪಿ ಹೇಳುವುದೊಂದು ಮಾಡೊದು ಒಂದಾಗಿದೆ. ಗೋವಿಚಾರದಲ್ಲಿ ನಮ್ಮ ಶಾಸಕರು ಸಿದ್ದರಾಮಯ್ಯ ತಲೆ ಕಡಿಯಬೇಕೆಂದಿದ್ದರು.
ಚುನಾವಣೆ ಗೆದ್ದು ಶಾಸಕಕಚೇರಿ ಉದ್ಘಾಟನೆ ವೇಳೆ ಸಿದ್ದರಾಮಯ್ಯನವರ ಫೊಟೊ ಹಾಕಿಕೊಂಡಿದ್ದರು. 10 ಜನರು ಮಾತ್ರ ಬಿಜೆಪಿಯಿಂದ ಬಂದಿಲ್ಲ. ಅನೇಕರು ಬಂದಿದ್ದಾರೆ. ಮೊದಲು ಅವರನ್ನೆಲ್ಲಾ ಉಚ್ಚಾಟಿಸಲಿ ಎಂದು ಸವಾಲು ಎಸೆದರು.
ಇದನ್ನೂ ಓದಿ-https://suddilive.in/archives/13871