ಸುದ್ದಿಲೈವ್/ಶಿವಮೊಗ್ಗ
ಶಿಕಾರಿಪುರ ತಾಲೂಕಿನ ಹಿತ್ತಲ ಗಾಮದಲ್ಲಿ ದೊಡ್ಡ ಬಹಿರಂಗ ಸಭೆ ನಡೆದಿದೆ. ಇನ್ನೂ ಹೆಚ್ಚು ಸಭೆ ಶಿಕಾರಿಪುರದಲ್ಲಿ ನಡೆಯಲಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏ. 28 ರಂದು ಸೊರಬದಲ್ಲಿ ಬಹಿರಂಗ ಸಭೆ ನಡೆಯಲಿದೆ. ಲೋಕಸಭೆ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದೆ. ಸಿಎಂ ಸಿದ್ದರಾಮಯ್ಯ ಹೇಳಿಕೆ ನೋವು ತಂದಿದೆ.
ಮುಸ್ಲಿಮರಿಗೆ ಎಲ್ಲ ಸೌಲಭ್ಯ ನೀಡುವುದಾಗಿ ಸಿಎಂ ಹೇಳಿಕೆ ಬೇಸರ ತರಿಸಿದೆ ಎಂದ ಈಶ್ವರಪ್ಪ, ನೇಹಾ ಹಿರೇಮಠ ಪ್ರಕರಣ ಸಿಎಂ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಸಿಎಂ ಮತ್ತು ಗೃಹ ಸಚಿವರು ಲವ್ ಜಿಹಾದ್ ಅಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಸಿಎಂ ಕೈಯಲ್ಲಿ ಇರುವ ಸಿಐಡಿ ಏನು ವರದಿ ನೀಡುತ್ತದೆ. ಈ ಹಿನ್ನಲೆಯಲ್ಲಿ ಪ್ರಕರಣ ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು ಎಂದರು.
ನಿನ್ನೆ ಯಾಕೆ ಸಿಎಂ ಅಲ್ಲಿ ಭೇಟಿ ನೀಡಿದರು. ಸಿಎಂ ಏನು ಪಿಕ್ ನಿಕ್ ಗೆ ಹೋಗಿದ್ದಾರಾ? ಸಚಿವ ಸಂತೋಷ ಲಾಡ್ ಬಿಜೆಪಿ ನೇಹಾ ಮನೆ ಪ್ರವಾಸಿ ತಾಣ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದರು ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿದೆ
ಮಧು ಬಂಗಾರಪ್ಪ ಒಳ್ಳೆಯ ಕನ್ನಡ ಕಲಿತುಕೊಳ್ಳಲಿ. ನನ್ನ ನಾಮಪತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. 8 ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ನಾನು ಕಾಂಗ್ರೆಸ್ ಬೆಂಬಲಿಗರಪಟ್ಟಿ ಕೊಟ್ಟರೆ ಮಧು ಬಂಗಾರಪ್ಪ ರಾಜೀನಾಮೆ ಕೊಡುತ್ತಾರಾ ಎಂದು ಸಚಿವ ಮಧು ಬಂಗಾರಪ್ಪಗೆ ಮಾಜಿ ಡಿಸಿಎಂ ಸವಾಲು ಎಸೆದರು.
ರಾಘವೇಂದ್ರಗೆ ಸೋಲುವ ಭಯ ಶುರುವಾಗಿದೆ ಎಂದಿರುವ ಈಶ್ವರಪ್ಪ ನನ್ನ ಜೊತೆ ಇರುವ ವ್ಯಕ್ತಿಗಳಿಗೆ ಆಪರೇಶನ್ ಗೆ ಬಿಜೆಪಿ ಮುಂದಾಗುತ್ತಿದೆ. ಇದೆಲ್ಲ ಶುದ್ಧ ಸುಳ್ಳು ಎಂದು ಬಿ ವೈ ರಾಘವೇಂದ್ರ ಹೇಳುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಟೀಕೆ ಮಾಡುತ್ತಿಲ್ಲ. ಜನರು ಸಿನಿಮಾ ನಟರನ್ನು ನೋಡಿ ಮತ ಕೊಡುವುದಿಲ್ಲ ಎಂದು ನಟ ಶಿವರಾಜ್ ಕುಮಾರ್ ವಿರುದ್ಧ ಹೆಸರು ಹೇಳದೆ ಆರೋಪಿಸಿದರು.
ಮಧು ಬಂಗಾರಪ್ಪ ಭ್ರಮೆಯಲ್ಲಿ ಇದ್ದಾರೆ. ಗ್ಯಾರಂಟಿ ಸೋಲುತ್ತದೆ ಎನ್ನುವುದು ಮಧುಗೆ ಮನವರಿಕೆ ಆಗಿದೆ. ಬಿಎಸ್ ವೈ ಅವರೇ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ಹಾಕಿಕೊಂಡು ಬಂದಿದ್ದಾರೆ. ಮಧು ಬಂಗಾರಪ್ಪ ಅವರು ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.
ಇದನ್ನೂ ಓದಿ-https://suddilive.in/archives/13679