Girl in a jacket

ಪ್ರತ್ಯೇಕವಾಗಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘ ಅಸ್ತಿತ್ವಕ್ಕೆ

ಸುದ್ದಿಲೈವ್/ಶಿವಮೊಗ್ಗ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ಹೋರಾಟಕ್ಕೆ ಅಣಿಯಾಗುವ ಮುಖ್ಯವಾದ ಉದ್ದೇಶದಿಂದ “ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘ” ವನ್ನು ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದಿಂದ ಪ್ರತ್ಯೇಕಗೊಳಿಸಿ ಎರಡು ಸಂಘಗಳ ಮೈತ್ರಿಗೆ ಇತಿಶ್ರೀ ನೀಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಎಂ.ವಿ ಮಹೇಂದ್ರ ಸ್ವಾಮಿ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಡಿವಾಳ ಸಮಾಜದ ಭವಿಷ್ಯದ ಉಳಿವಿಗಾಗಿ ಸಾಂಘಿಕ ಹೋರಾಟ ಮಾಡಲು ಮಡಿವಾಳರಲ್ಲಿ ಜಾಗೃತಿ ಮೂಡಿಸವ ಸಲುವಾಗಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘದ ಮೂಲ ಸದಸ್ಯರ ಸರ್ವಸದಸ್ಯರ ಮಹಾಸಭೆ 21 ಏಪ್ರಿಲ್ 2024 ಭಾನುವಾರ ನಡೆದು ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘವನ್ನು ಪುನ‌ರಚೇತನಗೊಳಿಸಲು ಒಮ್ಮತದ ತೀರ್ಮಾನ ಮಾಡಲಾಯಿತು. ಅದರಂತೆ ಹೊಸ ಸಂಘ ಅಸ್ತಿತ್ವಕ್ಕೆ ತರಲಾಗಿದೆ.

ಸಂಘದ ಗೌರವ ಅಧ್ಯಕ್ಷರಾಗಿ ಎಂ ಮಂಜಪ್ಪ, ಅಧ್ಯಕ್ಷರಾಗಿ ಸಿಎಸ್ ಚಂದ್ರಭೂಪಾಲ್, ಮಹಾಕಾರ್ಯಾಧ್ಯಕ್ಷರಾಗಿ ಬಾಲಾಜಿ ರಾಜ್, ಮಹಾ ಉಪಾಧ್ಯಕ್ಷರಾಗಿ ಜಿ.ಹಿರಣಯ್ಯ, ಎಂಕೆ ಪ್ರಮೋದ್, ಕೋಷಾಧ್ಯಕ್ಷರಾಗಿ ಮಂಜುನಾಥ್, ಕಾರ್ಯಾಧ್ಯಕ್ಷರಾಗಿ ಎಂ ರಾಜಶೇಖರ್, ಹಿರಣಪ್ಪ ಕುಂಬ್ರಿ ಸೊರಬ,

ಉಪಾಧ್ಯಕ್ಷರಾಗಿ ಟಿ‌ಎಸ್ ಗುರುಮೂರ್ತಿ, ಹೆಚ್ ಕೆ ಶಿವಮಾಮ, ಹಾಲೇಶಪ್ಪ ಶಿಕಾರಿಪುರ, ಪ್ರಧಾನಕಾರ್ಯದರ್ಶಿಗಳಾಗಿ ಎಂ ಹೆಚ್ ರವಿಕುಮಾರ್, ಜಿ.ಮೈಲಾರಪ್ಪ, ಎಂ.ರಾಕೇಶ್ ಎಂ.ನಾಗರಾಜ್ ಕುಂಸಿ,ಕಾರ್ಯದರ್ಶಿಗಳಾಗಿ ಎಂ ರುದ್ರೇಶ್, ಎಸ್ ಜಿ ಮೋಹನ್, ಯು ನಾಗಾರ್ಜುನ್, ಉಮೇಶ್ ಜಿ ಬಾಳೆಗುಂಡಿ,

ಸಹ ಕಾರ್ಯದರ್ಶಿಗಳಾಗಿ ಎಂ ದಾನೇಶ್, ಇ.ಷಣ್ಮುಖ, ಸಂಘಟನಾಕಾರ್ಯದರ್ಶಿಗಳಾಗಿ ಸುಮಿತ್ ಆನಂದ್, ಪ್ರಹ್ಲಾದ್, ಕೆ.ರಾಜು, ಹೆಚ್ ಕೆ.ಲೋಕೇಶ್ ಭದ್ರಾವತಿಯವರನ್ನ ಆಯ್ಕೆ ಮಾಡಲಾಗಿದೆ ಎಂದರು.

ಡಿಸೆಂಬರ್ 2022ರಲ್ಲಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘದ ಮೂಲ ಸದಸ್ಯರನ್ನು ಹೊರಗಿಟ್ಟ ಬೈಲಾದ ನಿಯಮವನ್ನು ಉಲ್ಲಂಘಿಸಿ ಅಕ್ರಮ ಚುನಾವಣೆ ನಡೆಸಲಾಯಿತು, ಇದನ್ನು ವಿರೋಧಿಸಿ ಬಹಳಷ್ಟು ಸದಸ್ಯರ ಸಹಿಯೊಂದಿಗೆ ಶಿವಮೊಗ್ಗ ಜಿಲ್ಲಾ ಸಹಕರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿ ಆಕ್ರಮವಾಗಿರುವ ಆಯ್ಕೆಯಾದ ಕಾರ್ಯಕಾರಿ ಸಮಿತಿಯನ್ನು ರದ್ದುಗೊಳಿಸಿ ಸಮಾಜ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯ ಪಡಿಸಲಾಗಿತ್ತು.

ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದ ಸರ್ವಸದ್ಯರ ಸಭೆ 2023ರಲ್ಲಿ ನಡೆದಾಗ ಅಕ್ರಮ ಚುನಾವಣೆ, ಹಣಕಾಸು ಅವ್ಯವಹಾರ ಮತ್ತು ಸಂಘದ ಸದಸ್ಯರ ಸದಸ್ಯತ್ವದ ಹಣ ದುರುಪಯೋಗ ಇನ್ನಿತರ ವಿಷಯಗಳ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯ ಪಡಿಸಿ ಮತ್ತು ಸದಸ್ಯರುಗಳು ಧರಣಿ ಪ್ರತಿಭಟನೆ ನಡೆಸಿ ಒತ್ತಾಯಪಡಿಸಲಾಗಿತ್ತು ಆದರೆ ಯಾವುದೇ ಕ್ರಮ ಕೈಗೊಳದೇ ಇರುವುದನ್ನು ಪರಿಗಣಿಸಿ ಮತ್ತು ಸಂಘದ ಕಾರ್ಯಚಟುವಟಿಕೆ ನಿಷ್ಕ್ರಿಯವಾಗಿರುವುದನ್ನು ಗಮನಿಸಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘವನ್ನು ಪ್ರತ್ಯೇಕಗೊಳಿಸಲು ತಿರ್ಮಾನ ಕೈಗೊಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ-https://suddilive.in/archives/13686

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು