Girl in a jacket

ಮೋದಿ ರಾಜ್ಯದ ಜನತೆ ಕ್ಷಮೆ ಕೇಳಬೇಕು-ದ್ವಾರಕಾನಾಥ್

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ಹಿಂದುಳಿದ ಆಯೋಗಕ್ಕೆ ನೋಟೀಸ್ ನೀಡಿರುವುದು ಖಂಡನೀಯ ಹಿಂದುಳಿದ ಆಯೋಗದ ಕ್ಷಮೆ ಕೋರ ಬೇಕು ಎಂದು ಹಿಂದುಈದ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿದ್ದ ಮಿಲ್ಲರ್ ಕಮಿಷನ್ ಕ್ರಿಶ್ಚಿಯನ್ನರು ಮತ್ತ ಮುಸ್ಲೀಂ‌ ಹಿಂದುಳಿದ ವರ್ಗದವರು ಎಂದಿದೆ. ಸ್ವಾತಂತ್ರ್ಯ ನಂತರ ಹಾವನೂರು ಆಯೋಗ, ನನ್ನ ನೇತೃತ್ವದ ಆಯೋಗ ಸಹ ಇದನ್ನೇ ಪ್ರತಿಪಾದಿಸಿದೆ. ದೇವರಾಜ್ ಅರಸ್ ಸಹ ಹಿಂದುಳಿದ ವರ್ಗ ಸಹ ಎರಡು ಧರ್ಮವೂ ಸಹ ಹಿಂದುಳಿದ ವರ್ಗಕ್ಕೆ ಸೇರುತ್ತದೆ ಎಂದು ಹೇಳಿದೆ.

ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಹಿಂದುಳಿದ ವರ್ಗ ಅಲ್ಲ ಎಂಬುದನ್ನ ಅಲ್ಲಗ ಈ ಎಯಲಾಗದು ಎಂದು ನ್ಯಾಯಾಲಯವೂ ಅಭಿಪ್ರಾಯ ಪಟ್ಟಿದೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರು ಹಿಂದುಳಿದ ವರ್ಗ ಎಂದು ಸಾಚರ್ ಮತ್ತು ಕಾಕರ್ ಆಯೋಗ ಹೇಳಿದೆ ಎಂದರೂ ಪ್ರಧಾನಿ ಹೇಳಿರುವುದು ಖಂಡನೀಯ ಎಂದರು.

ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಮುಸ್ಲೀಂ ಸಮುದಾಯದ 4% ಮೀಸಲಾತಿಯನ್ನ‌ ಒಕ್ಕಲಿಗ ಮತ್ತು ಎಸ್ ಸಿ ಗೆ ತಲಾ ಎರಡು ಪರ್ಸೆಂಟ್ ಹಂಚಲಾಗಿತ್ತು. ಈಗಲು ಮುಸ್ಲೀಂಗೆ 4% ಮೀಸಲಾತಿ 2 ಬಿ ವರ್ಗದಲ್ಲಿದೆ.

ಹಿಂದುಳಿದ ವರ್ಗಗಳ ಮೀಸಲಾತಿಯನ್ನ ಕಿತ್ತುಕೊಂಡು‌ ಮುಸ್ಲೀಂರಿಗೆ ನೀಡಲಾಗಿದೆ ಎಂಬ ಪ್ರಧಾನಿ ಮಂತ್ರಿಗಳು ಹೇಳಿದ್ದಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿದ ಕೆ.ಸಿ ದ್ವಾರಕಾನಾಥ್ ಖಂಡಿಸಿದ್ದಾರೆ. ಮೋದಿ ಈ ಬಗ್ಗೆ ರಾಜ್ಯದ ಮತ್ತು ಹಿಂದುಳಿದ ವರ್ಗದ ಆಯೋಗದ ಬಗ್ಗೆ ಕ್ಷಮೆ ಕೇಳಬೇಕು ಎಂದರು.

ಒಬಿಸಿಗೆ ಅರ್ಥವಾಗುತ್ತಿದೆ. ಪಂಚ ಗ್ಯಾರೆಂಟಿಯಿಂದ ಒಂದು ದಿನ ಊಟಕ್ಕೆ ತೊಂದರೆಯಾಗುತ್ತಿಲ್ಲ. ಹಾಗಾಗಿ ಸೇವೆ ಸಲ್ಲಿಸುವ ನಾಯಕರು ಯಾರು ಮತ್ತು ಯಾರು ಅಲ್ಲ ಎಂಬುದು ಗೊತ್ತಾಗುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/13707

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು