Girl in a jacket

ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರುವುದರಿಂದ ಬಿಜೆಪಿಗೆ ಲೀಡ್ ಹೆಚ್ಚಾಗಲಿದೆ-ವಿಜೇಂದ್ರ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ನಡೆದ 14 ಕ್ಷೇತ್ರಗಳ ಚುನಾವಣೆಯಲ್ಲಿ ನಿರೀಕ್ಷೆಗೆ ಮೀರಿ ಮತದಾನ ಚನ್ನಾಗಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.

ಮಾಧ್ಯಮಗಳಲ್ಲಿ ಮಾತನಾಡಿ,  ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಓಲೈಕೆ , ಅವರ ಚಿಂತನೆ ಒಬಿಸಿ ವರ್ಗಕ್ಕೆ ಅನ್ಯಾಯ ಮಾಡ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚಾಗ್ತಿದೆ. ನಾಳೆ ದಾವಣಗೆರೆ ಹೊಸಪೇಟೆಯಲ್ಲಿ ಮೋದಿ ಪ್ರಚಾರ ನಡೆಸ್ತಾರೆ ಎಂದರು.

ಕಾಂಗ್ರೆಸ್ ಪಕ್ಷದವರಿಗೆ ವಿಜಯೇಂದ್ರ‌ ಅವರಿಗೆ ತಲೆಕೆಟ್ಟಿದೆ ಅನಿಸಬಹುದು. ನಿನ್ನೆ ನಡೆದ ಮತದಾನದಲ್ಲಿ 14 ಸ್ಥಾನ ಗೆಲ್ಲುತ್ತೇವೆ. ಮತದಾನಕ್ಕೆ ಉತ್ಸಾಹ ಇನ್ನು ಹೆಚ್ಚಾಗಬೇಕಿತ್ತು‌.ಬಿಸಿಲಿನಲ್ಲು ಮತದಾನ ಚನ್ನಾಗಿ ಆಗಿದೆ ಎಂದರು.

ರಾಹುಲ್ ಗಾಂಧಿ ಅಮೇಥಿ ಜನರ ವಿಶ್ವಾಸ ಕಳೆದುಕೊಂಡು ವೈಯನಾಡಿನಲ್ಲಿ ಅಡಗಿ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಗೆ ಏಕೆ ಇಂತಹ ಪರಿಸ್ಥಿತಿ ಬಂದಿದೆ. ಅಮೇಥಿ ಮತದಾರರು ಏಕೆ ರಾಹುಲ್ ಗಾಂಧಿ ಧಿಕ್ಕರಿಸಿದ್ದಾರೆ ಎಂದರು.

ರಾಹುಲ್ ಗಾಂಧಿ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.ರಾಹುಲ್ ಗಾಂಧಿ ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು. ಶಿವಮೊಗ್ಗದಲ್ಲಿ ಎರಡೂವರೆ ಮೂರು‌ ಲಕ್ಷ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ರಾಹುಲ್ ಗಾಂಧಿ ಭೇಟಿ ಬಳಿಕ ಮತ್ತೆ 50 ಸಾವಿರ ಲೀಡ್ ಹೆಚ್ಚಲಿದೆ ಎಂಬ ಆತ್ಮ ವಿಸ್ವಾಸ ಹೊರಹಾಕಿದರು.

ಗ್ಯಾರಂಟಿ ಯೋಜನೆ ಮತದಾರರ ಮೇಲೆ ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ. ಕಾಂಗ್ರೆಸ್ ಗೆ ಜನ ಬುದ್ದಿ ಕಲಿಸುತ್ತಾರೆ

ಮೊದಲ ಹಂತದ ಚುನಾವಣೆಯ ಉತ್ಸುಕದ ವಾತಾವರಣ ಎರಡನೇ ಹಂತದಲ್ಲು ಕಾಣ್ತಿದೆ. ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡ್ತೇವೆ ಎಂದರು.

ಇದನ್ನೂ ಓದಿ-https://suddilive.in/archives/13718

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು