Girl in a jacket

ನಕಲಿ ತನಿಖಾಧಿಕಾರಿಗಳ ಕೈಚಳಕ-ಮತ್ತೆ ಅಕ್ಟಿವ್ ಆದ ಉಂಡೆ ಗ್ಯಾಂಗ್

ಸುದ್ದಿಲೈವ್/ಶಿವಮೊಗ್ಗ

ಕಳೆದ ವರ್ಷ ವೃದ್ಧೆ,ಗೆ ಸಹಾಯ ಮಾಡುವ ನೆಪದಲ್ಲಿ, ಗಾಂಧಿನಗರದಲ್ಲಿ ಮನೆಗೆಲಸಕ್ಕೆ ತೆರಳಿದ್ದ ಮಹಿಳೆಗೆ ಇಲ್ಲಿ ಚಿನ್ನಾಭರಣಕ್ಕಾಗಿ ಕಳುವು ಆಗಿದೆ ಎಂಬ ನೆಪ ಹೇಳಿ ಚಿನ್ನಾಭರಣ ಕಳವು ಮಾಡಿದ ಘಟನೆ ಇನ್ನೂ ಜೀವಂತವಾಗಿರುವಾಗಲೇ ಮತ್ತೊಂದು ಪ್ರಕರಣ ದಾಖಲಾಗಿದೆ.

ಏ.24 ರಂದು ಮಧ್ಯಾಹ್ನ ಹೊಸಮನೆಯ ನಿವಾಸಿಯೊಬ್ಬರು12-30 ರಿಂದ 1-00 ಗಂಟೆಯ ಮದ್ಯಾವಧಿಯಲ್ಲಿ ಮನೆಯಿಂದ ಪೋಸ್ಟ್ ಆಪೀಸ್ ಗೆ ಹೋಗಲು ಜೈಲ್ ಸರ್ಕಲ್ ನಲ್ಲಿನ ದೈವಜ್ಞ ಕಲ್ಯಾಣ ಮಂಟಪದ ಮುಂಬಾಗ ಇರುವ ಗಣಪತಿ ದೇವಸ್ಥಾನದ ಬಳಿ ನಡೆದುಕೊಂಡು ಬರುತ್ತಿದ್ದರು.

ಈ ವೇಳೆ ಅಂದಾಜು 45 ವರ್ಷ ವಯಸ್ಸಿನ ಓರ್ವ ವ್ಯಕ್ತಿ ಮಹಿಳೆಗೆ ‘ಮೇಡಮ್ ನೋಡಿ ಅಲ್ಲಿ ಯಾರೋ ಕರಿತಿದ್ದಾರೆ’ ಎಂದು ಹೇಳಿದ್ದಾರೆ, ಮಹಿಳೆ ಯಾರು ಎಂದು ಕೇಳಿದಾಗ ನೋಡಿ ರವಿ ಸಾರ್ ಕರೆಯುತ್ತಿದ್ದಾರೆ ಎಂದು ಹೇಳಿ ಇಬ್ಬರು ವ್ಯಕ್ತಿಗಳು ನಿಂತಿದ್ದನ್ನು ತೋರಿಸಿದ್ದಾನೆ.

ಮಹಿಳೆ ಅವರ ಹತ್ತಿರ ಹೋದಾಗ ಓರ್ವ ವ್ಯಕ್ತಿ ಸ್ವಲ್ಪ ದಪ್ಪ ಇದ್ದು ಇನ್ ಶರ್ಟ ಮಾಡಿದ್ದು ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ, ಇನ್ನೊರ್ವ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ, ಮಹಿಳೆಗೆ ಈ ದಿವಸ ಬೆಳಿಗ್ಗೆ ಇಲ್ಲಿ ಓರ್ವ ಹುಡುಗಿಗೆ ಚಾಕು ತೋರಿಸಿ ಬಂಗಾರದ ಒಡವೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ,

ಅದಕ್ಕೆ ನಮಗೆ ತನಿಖೆ ಮಾಡಲಿಕ್ಕೆ ನೇಮಿಸಿದ್ದಾರೆ ನೀವು ಹೀಗೆ ಬಂಗಾರದ ಒಡವೆಗಳನ್ನು ಹಾಕಿಕೊಂಡು ಹೋಗಬೇಡಿ ತೆಗೆದು ಬ್ಯಾಗ್ ನಲ್ಲಿ, ಇಟ್ಟುಕೊಳ್ಳಿ ಎಂದು ಹೇಳಿದ್ದು, ಮಹಿಳೆ ಕೈಯಲ್ಲಿದ್ದ ಬಂಗಾರದ ಉಂಗುರಗಳನ್ನು ತೆಗೆಯುತ್ತಿದ್ದಾಗ ಬೇಗ ಬೇಗ ತೆಗೆಯಿರಿ ಎಂದು ಹೇಳಿ ಕೈಯಲ್ಲಿ 50 ಸಾವಿರ ಬೆಲೆ ಬಾಳುವ 10 ಗ್ರಾಂನ ಒಂದು ಹವಳದ ಉಂಗುರ ಹಾಗು ಎಮರೆಲ್ಡ್ ಗ್ರೀನ್ ಉಂಗುರಗಳನ್ನು ಹಾಗು 1,90,000/- ರೂ ಬೆಲೆ ಬಾಳುವ 38 ಗ್ರಾಂ ತೂಕದ ಡಿಸಿ ಪ್ಯಾಟರನ್ ಒಂದು ಎಳೆಯ ಬಂಗಾರದ ಸರವನ್ನು ತೆಗೆದಿದ್ದಾರೆ.

ತೆಗೆದ ಆಭರಣಗಳನ್ನ ಪರ್ಸನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿದಾಗ ಅದರಲ್ಲಿದ್ದ ಇನ್ನೊರ್ವ ಒಂದು ಪೇಪರ್ ಕವರನ್ನು ತಂದು  ಕೊಡಿ ಇದರಲ್ಲಿ ಹಾಕಿಕೊಡುವುದಾಗಿ ಹೇಳಿ ಮಹಿಳೆಯ ಶಭರಣವನ್ನ ಕೈಯಲ್ಲಿ ಹಿಡಿಯಲು ಮುಂದಾಗಿದ್ದಾನೆ.

ತಕ್ಷಣವೇ ಮಹಿಳೆ ಹಿಂಜರಿದಾಗ ನಮ್ಮ ಮೇಲೆ ನಂಬಿಕೆ ಇಲ್ವೇನಮ್ಮಾ ಎಂದಿದೆ.  ಇನ್ನೊರ್ವ ಹುಡುಗ ಕೈಯಲ್ಲಿ ಒಡವೆಗಳನ್ನು ಹಿಡಿದುಕೊಂಡಿದ್ದು, ಆತನಿಂದಲೂ ಸಹ ಒಡವೆಗಳನ್ನು ಸುತ್ತಿ ಕೊಟ್ಟಂತೆ ಮಾಡಿದ್ದಾರೆ. ಈ ವೇಳೆ ಮಹಿಳೆಗೆ ನಂಬಿಕೆ ಬಂದಿದೆ.  ಒಡವೆಗಳನ್ನು ಅಪರಿಚಿತರ ಬಳಿ ಕೊಟ್ಟಾಗ ಅವರು ಪೇಪರ್ ನಲ್ಲಿ ಸುತ್ತಿ ನನ್ನ ಪರ್ಸನಲ್ಲಿ ಇಟ್ಟಂತೆ ನಟಿಸಿ ಸರಿ  ಹೋಗಿ ಎಂದು ಹೇಳಿದ್ದಾರೆ.

ಮಹಿಳೆ ಮತ್ತೆ ಪರ್ಸನ್ನು ನೋಡಿಕೊಳ್ಳಲು ಪ್ರಯತ್ನಿಸಿದಾಗ ಅಪರಿಚಿತನಲ್ಲಿನೊಬ್ಬ ಯಾಕಮ್ಮ ನಮ್ಮ ಮೇಲೆ ನಂಬಿಕೆ ವಿಶ್ವಾಸ ಇಲ್ಲವಾ ಇಟ್ಟಿದ್ದೀವಿ ಹೋಗಿ ಎಂದು ಹೇಳಿದ್ದಾನೆ, ಪರ್ಸನಲ್ಲಿ ಇಟ್ಟರೆಂದು ತಿಳಿದುಕೊಂಡು ಮಹಿಳೆ ಸ್ವಲ್ಪ ದೂರದಲ್ಲಿ ಹೋಗಿ ಪುನಃ ಪರ್ಸನ್ನ ಪರಿಶೀಲಿಸಿದಾಗ ಯಾವುದೇ ಒಡವೆಗಳು ಇಲ್ಲದಿರುವುದು ಮಹಿಖೆಯನ್ನ ಗಾಬರಿ ಹುಟ್ಟಿಸಿದೆ. ತಕ್ಷಣ ಗಣಪತಿ ದೇವಸ್ಥಾನದ ಬಳಿ ಬಂದು ನೋಡಿದಾಗ ಅಲ್ಲಿ ಯಾರು ಇಲ್ಲದಿರುವುದು ಮಹಿಳೆಗೆ ಶಾಕ್ ಆಗಿದೆ.

ನಾಲ್ಕು ಜನ ಅಪರಿಚಿತರು ಎಂಕ್ವೈರಿ ಆಫೀಸರ್ ಎಂದು ಸುಳ್ಳು ಹೇಳಿ ಮಹಿಳೆಯ ಬಂಗಾರ ಒಡವೆಗಳನ್ನು ಪೇಪರ್ ನಲ್ಲಿ. ಸುತ್ತಿ ಪರ್ಸನಲ್ಲಿ ಇಡುವಂತೆ ನಟಿಸಿ ದೋಚಿಕೊಂಡು ಹೋಗಿರುವುದು ದೊಡ್ಡಪೇಟೆ ಠಾಣೆಯಲ್ಲಿ ಶಂಕ್ರಮ್ಮ ದೂರು ದಾಖಲಿಸಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಕೈನರದಲ್ಲಿ ಬಸ್ ಗಾಗಿ ಕಾದು ಕುಳಿತಿದ್ದ ಮಹಿಳೆಗೆ ಇದೇ ರೀತಿ ಮೋಸ ನ ಅಡಿ ಚಿನ್ನಾಭರಣವನ್ನ ಕಳವು ಮಾಡಲಾಗಿತ್ತು.  ಇದು ಜಿಲ್ಲೆಯಲ್ಲಿ ಎರಡನೇ ಪ್ರಕರಣವಾಗಿದೆ.

ಇದನ್ನೂ ಓದಿ-https://suddilive.in/archives/13724

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು