Girl in a jacket

ಮಾದಕ ವಸ್ತು ಗಾಂಜಾ ಸಾಗಾಣಿಕೆ-2 ಕೆಜಿ ಗಾಂಜಾ ಸೀಜ್

ಸುದ್ದಿಲೈವ್/ಶಿವಮೊಗ್ಗ

ಗಾಂಜಾವನ್ನ ಸಾಗಿಸುತ್ತಿದ್ದ ಆರೋಪದ ಮೇರೆ ಇಬ್ಬರು ಆರೋಪಿಗಳನ್ನ ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಅಪಾರ ಪ್ರಮಾಣದ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

ಇಂದು ಎರಡು ಜನ ಓಮಿನಿ ಕಾರ್ ನಲ್ಲಿ  ಗಾಂಜಾ ಸೊಪ್ಪನ್ನು ಮಾರಾಟ ಮಾಡುವ ಸಲುವಾಗಿ ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದಾರೆಂಬ  ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ ಭೂಮರೆಡ್ಡಿ, ಎ. ಜಿ ಕಾರಿಯಪ್ಪರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರರ ನೇತೃತ್ವದಲ್ಲಿ ತೀರ್ಥಹಳ್ಳಿ ಠಾಣೆಯ ಪಿಐ ಅಶ್ವತ್ ಗೌಡ ಜೆ, ಪಿಎಸ್ ಐ ಶಿವನಗೌಡ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.‌

ಆರೋಪಿಗಳಾದ 1) ಮಹಮ್ಮದ್ ಬೇಗ್ (38) ವರ್ಷ, ಆಚಾಪುರ, ಆನಂದಪುರ, ಸಾಗರ ತಾ, ಮತ್ತು ಹೊಸನಗರದ ಕೆಂಚನಾಳ ಗ್ರಾಮದ 2) ಗಜೇಂದ್ರ @ ಗಜ(37) ರನ್ನ ದಸ್ತಗಿರಿ ಮಾಡಲಾಗಿದೆ.  ಇವರಿಂದ 1,60,000/- ರೂ ಮೌಲ್ಯದ 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ ಮತ್ತು ಅಂದಾಜು ಮೌಲ್ಯ 2,50,000 ರೂ ಗಳ ಓಮಿನಿ ಕಾರನ್ನು ಸೀಜ್ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close