ಸುದ್ದಿಲೈವ್/ಶಿವಮೊಗ್ಗ
ಕಳೆದ ನಾಲ್ಕು ದಿನಗಳಿಂದ ಸುರಿದ ಅರೆಕಾಲಿಕ ಮಳೆಯಿಂದಾಗಿ ಹಾನಿಗಳನ್ನ ಲೆಕ್ಕಹಾಕಲಾಗಿದೆ. ಶಿವಮೊಗ್ಗದ ಗೋಂಧಿಚಟ್ನಳ್ಳಿಯಲ್ಲಿ 9 ಮನೆ, ಆರ್ ಎಂ ಎಲ್ ನಗರ ಮತ್ತು ಬಾಪೂಜಿನಗರದ 200 ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ.
ಮೇ.20 ರವರೆಗೆ ಸುರಿದ ಮಳೆಯಿಂದಾಗಿ ಸಿದ್ದೇಶ್ವರ ನಗರದ 1, 2, 3 ನೇ ತಿರುವಿನಲ್ಲಿ 15 ಮನೆಗಳು, ಮೂರನೇ ಅಡ್ಡ ರಸ್ತೆ ಮೂರನೇ ಮುಖ್ಯ ರಸ್ತೆಗಳಲ್ಲಿ 35 ಮನೆಗಳಿಗೆ ನೀರು ನುಗ್ಗಿದೆ.
19 ಸಾಕು ಪ್ರಾಣಿಗಳು ಸಾವಾದರೆ ಎರಡು ಎತ್ತುಗಳು ಸಿಡಿಲಿನಿಂದ ಸಾವನ್ನಪ್ಪಿದೆ. ಭದ್ರಾವತಿಯಲ್ಲಿ 3 ಮನೆ, ತೀರ್ಥಹಳ್ಳಿಯಲ್ಲಿ 6 ಮನೆ, ಸಾಗರದಲ್ಲಿ 2, ಶಿಕಾರಿಪುರದಲ್ಲಿ 3, ಸೊರಬ 3, ಹೊಸನಗರದಲ್ಲಿ 1 ಮನೆ ಸೇರಿ 21 ಮನೆಗಳು ಹಾನಿಗೊಳಗಾಗಿವೆ. ಮೇ. 20 ವರೆಗೆ ಸುರಿದ ಮಳೆಯಲ್ಲಿ ಮೂರು ಜೀವಹಾನಿಯಾಗಿದೆ.
ಶಿವಮೊಗ್ಗ, ತೀರ್ಥಹಳ್ಳಿ ನತ್ತು ಶಿಕಾರಿಪುರದಲ್ಲಿ ತಲಾ ಒಂದೊಂದು ಜೀವಹಾನಿಯಾಗಿದೆ. ಅದರಂತೆ ಸಣ್ಣಪುಟ್ಟ ಮಳೆಗೆ ಹಳ್ಳ, ಜಲಾಶಯಗಳು ಭರ್ತಿಯಾಗಿವೆ. 588.24 ಅಡಿ ತುಂಗ ಡ್ಯಾಂನಲ್ಲಿ 585.62 ಅಡಿ ನೀರು ಸಂಗ್ರಹವಾಗಿದೆ.
ಅಂಜನಾಪುರ, ಅಂಬ್ಳಿಗೊಳ್ಳ, ಚಕ್ರಜಲಾಶಯಗಳಲ್ಲಿ 2-3 ಅಡಿನೀರು ಸಂಗ್ರಹವಾಗಿದೆ. ಆದರೆ ಭದ್ರ ಮತ್ತು ಲಿಂಗನಮಕ್ಕಿಗೆ ಅಗಾಧ ಪ್ರಮಾಣದ ನೀರು ಹರಿದು ಬರಬೇಕಿದೆ. ಭದ್ರಾದಲ್ಲಿ 113 ಅಡಿ ಡೆಡ್ ಸ್ಟೋರೇಜ್ ಇದ್ದು ಅದಕ್ಕಿಂತ ಎರಡು ಅಡಿ ನೀರು ಹೆಚ್ಚಿಗೆ ಇದೆ ಅಷ್ಟೆ.
ಕಳೆದ ವರ್ಷ ಭದ್ರಾಜಲಾಶಯ 139 ಅಡಿ ನೀರು ಸಂಗ್ರಹವಾಗಿತ್ತು. ಇಂದು ಅದು 115.7 ಅಡಿಗೆ ಕುಸಿದಿದೆ. ಇದರ ಗರಿಷ್ಠ ನೀರು ಸಂಗ್ರಹದ ಸಾಮರ್ಥ್ಯ 186 ಅಡಿ. ಅದರಂತೆ ಲಿಂಗನಮಕ್ಕಿಯಲ್ಲಿ 1752.9 ಅಡಿ ನೀರು ಇತ್ತು ಈ ಬಾರಿ 1747.3 ಅಡಿ ನೀರು ಸಂಗ್ರಹವಾಗಿದೆ. ಇದರ ಗರಿಷ್ಠ ನೀರು ಸಂಗ್ರಹ 1819 ಅಡಿ ಎತ್ತರದಷ್ಟು ನೀರು ಸಂಗ್ರಹವಾಗಬೇಕು.
ಇದನ್ನೂ ಓದಿ-https://suddilive.in/archives/15278