ಕ್ರೈಂ ನ್ಯೂಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕ್ರೈಂ ನ್ಯೂಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 21, 2024

ಸರ್ಕಾರಿ ವಸತಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ದೂರು-ದೂರಿನ ಬೆನ್ನಲ್ಲೆ ಶಿಕ್ಷಕ ಪೊಲೀಸರ ವಶಕ್ಕೆ



ಶಿವಮೊಗ್ಗ/ತೀರ್ಥಹಳ್ಳಿ


ವಸತಿ ಶಾಲೆಯ ಶಿಕ್ಷಕನಿಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ದೂರೊಂದು ದಾಖಲಾಗಿದೆ. ದೂರಿನ ಅನ್ವಯ ಸಂಗೀತ ಶಿಕ್ಷಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


10 ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿನಿಯರ ದೇಹ ಮುಟ್ಟಿ ಅಸಭ್ಯ ವರ್ತನೆ ನಡೆಸಿರುವ ಅರೋಪ ಕೇಳಿ ಬಂದಿದೆ. ಸಂಗೀತ ಶಿಕ್ಷಕ ಇಮ್ತಿಯಾಜ್ (45) ನ ವಿರುದ್ಧ ಪೋಕ್ಸೋ ಆರೋಪ ಮಾಡಲಾಗಿದೆ. 


ಹಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿರುವ ಶಿಕ್ಷಕನ ದುರ್ವರ್ತನೆ ಬಗ್ಗೆ  ವಿದ್ಯಾರ್ಥಿನಿಯರೇ ಪ್ರಾಂಶುಪಾಲರಿಗೆ ದೂರು ನೀಡಿರುವುದಾಗಿ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಾಂಶುಪಾಲರೇ ದೂರು ದಾಖಲಿಸಿದ್ದರು. 


ಶಿಕ್ಷಕನ ವಿರುದ್ದ‌ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಾಗಿದೆ. ಪೊಕ್ಸೋ ಕಾಯಿದೆ ಅಡಿ ತೀರ್ಥಹಳ್ಳಿ ಪೊಲೀಸರು ಶಿಕ್ಷಕರನ್ನ ವಶಕ್ಕೆ ಪಡೆದಿದ್ದು ಬಂಧನದ ಪ್ರಕ್ರಿಯೆ ನಡೆದಿರುವುದಾಗಿ ತಿಳಿದು ಬಂದಿದೆ. 

ಮಂಗಳವಾರ, ಆಗಸ್ಟ್ 20, 2024

ಬಿಸಿಯೂಟದ ದಾಸ್ತಾನು ಕೊಠಡಿಯಲ್ಲಿ 9 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ



ಸುದ್ದಿಲೈವ್/ಶಿವಮೊಗ್ಗ


ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ ಸರ್ಪವನ್ನು,ಸೋಮವಾರ ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದ ಉರಗ ತಜ್ಞ ಅಜಯಗಿರಿ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಕ್ಕೆ ಬಿಟ್ಟರು.


ಸೋಮವಾರ ಬೆಳಿಗ್ಗೆ ಅಡುಗೆ ಸಹಾಯಕಿ ಪ್ರೇಮ, ಅಕ್ಕಿ ಬೇಳೆಗಾಗಿ ಬಿಸಿಯೂಟ ದಾಸ್ತಾನು ಕೊಠಡಿಯ ಬಾಗಿಲು ತೆರೆದಾಗ ಕಾಣಿಸಿಕೊಂಡಿದೆ. ಮಕ್ಕಳು ಕೂಡ ಶಾಲೆಗೆ ಆಗಮಿಸಿದ್ದರು. ತರಗತಿ ಕೊಠಡಿ ನಡುವೆ ಅಂತರವಿರುವ ಕಾರಣ.. ಮಕ್ಕಳು ಬಿಸಿಯೂಟದ ಕೊಠಡಿಯ ಹತ್ತಿರ ಸುಳಿದಿರಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಶಿಕ್ಷಕ ಸುಪ್ರಿತ್ ಡಿಸೋಜ ಕೊಠಡಿಯ ಬಾಗಿಲು ಹಾಕಿ ಹಾವನ್ಜು ಬಂಧಿ ಮಾಡಿದರು. ನಂತರ ಪೋಷಕರಿಗೆ ಸುದ್ದಿ ಮುಟ್ಟಿಸಿದರು ಬಳಿಕ ಅರಣ್ಯ ಇಲಾಖೆಯ ಮೂಲಕ ಅಜಯಗಿರಿಯನ್ನು ಸಂಪರ್ಕಿಸಲಾಯಿತು.


ಶನಿವಾರವೇ ಕಾಳಿಂಗ ಸರ್ಪ ಒಳಗಡೆ ಸೇರಿಕೊಂಡಿರಬೇಕು. ಹೊರಗೆ ಹೋಗಲು ಅವಕಾಶವಿಲ್ಲದೇ ಅಲ್ಲೇ ಉಳಿಯುವಂತಾಗಿತ್ತು ಎನ್ನುತ್ತಾರೆ. ಕಾಳಿಂಗ ಸರ್ಪವನ್ನು ಸೆರೆ ಹಿಡಿದ ನಂತರ ಮಕ್ಕಳು ಮತ್ತು ಪೋಷಕರಿಗೆ ಅಜಯಗಿರಿ, ಕಾಳಿಂಗ ಸರ್ಪ ಕಂಡುಬಂದಾಗ ಮುಂಜಾಗ್ರತಾ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡರ್ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಸೋಮವಾರ, ಆಗಸ್ಟ್ 19, 2024

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ-ಆಕ್ಷೇಪಣೆ ಆಹ್ವಾನ

 ತಾತ್ಕಾಲಿಕ-ಆಯ್ಕೆ-ಪಟ್ಟಿ-ಪ್ರಕಟ-ಆಕ್ಷೇಪಣೆ-ಆಹ್ವಾನ


ಸುದ್ದಿಲೈವ್/ಶಿವಮೊಗ್ಗ


ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವೈದ್ಯಕೀಯ/ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಆಯೋಜಿಸಲಾಗಿದ್ದ ಮೂಲ ದಾಖಲಾತಿ ಪರಿಶೀಲನೆ ನೇರ ಸಂದರ್ಶನದಲ್ಲಿ ಭಾಗವಹಿಸಿದ್ದ ವೈದ್ಯಾಧಿಕಾರಿಗಳು, ಶೂಶ್ರೂಷಕಿಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು (ಪಿಹೆಚ್‌ಸಿಓ), ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕು ಆಶಾ ಮೇಲ್ವಿಚಾರಕರು, ನೇತ್ರ ಸಹಾಯಕರರು ಈ ಎಲ್ಲಾ ಅಭ್ಯರ್ಥಿಗಳ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸೂಚನೆ ಫಲಕದಲ್ಲಿ ಪ್ರಕಟಿಸಲಾಗಿದೆ.


ಅಭ್ಯರ್ಥಿಗಳ ಆಕ್ಷೇಪಣೆ ಇದ್ದಲ್ಲಿ ಲಿಖಿತ ರೂಪದಲ್ಲಿ ಆ.26 ರೊಳಗಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಎನ್.ಹೆಚ್.ಎಂ. ವಿಭಾಗಕ್ಕೆ ಸಲ್ಲಿಸುವಂತೆ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಅವಕಾಶ





ಸುದ್ದಿಲೈವ್/ಶಿವಮೊಗ್ಗ


ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿದೆ, 


ಈ ಹಿನ್ನೆಲೆಯಲ್ಲಿ  ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ ಸಾರ್ವಜನಿಕರು ದಿನಾಂಕಃ 21-08-2024  ರ ವರೆಗೆ ತಮ್ಮ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಗೆ ಸಲ್ಲಸಿ ನೋಂದಾಯಿಸಿಕೊಳ್ಳ ಬಹುದಾಗಿರುತ್ತದೆ. 


ಆದ್ದರಿಂದ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಶಿವಮೊಗ್ಗ-ಎ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ಭದ್ರಾವತಿ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಭದ್ರಾವತಿ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, 


ಸಾಗರ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಸಾಗರ  ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ತೀರ್ಥಹಳ್ಳಿ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ ಮತ್ತು ಸೊರಬ ಹಾಗೂ ಶಿಕಾರಿಪುರ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಶಿಕಾರಿಪುರ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ ತಮ್ಮ ವಿವರಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳ ಬಹುದಾಗಿರುತ್ತದೆ.

ಭಾನುವಾರ, ಆಗಸ್ಟ್ 18, 2024

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಆಟೋ ಚಾಲಕರ ನಡುವಿನ ಕಿರಿಕ್


 

ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಕೇಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣ ಕೆಲವರ ಆಸ್ತಿಯಂತೆ ವರ್ತಿಸಲು ಆರಂಭಿಸಿದ್ದಾರೆ. ಹಬ್ಬದ ದಿನಗಳಲ್ಲಿ ಹೆಚ್ಚಿನ ವಸೂಲಿ ನಡೆಯುವ ಈ ಆಟೋ ನಿಲ್ದಾಣದಲ್ಲಿ ಹೊಸಬರಿಗೆ ಅವಕಾಶವಿಲ್ಲದಂತೆ ವರ್ತಿಸಲು ಅಲ್ಲಿನ ಚಾಲಕರು ಆರಂಭಿಸಿದ್ದಾರೆ.


ಪ್ರೀಪೇಯ್ಡ್ ಆಟೋ ನಿಲ್ದಾಣ ಆರಂಭವಾಗಬೇಕಿದ್ದ ಈ ನಿಲ್ದಾಣದಲ್ಲಿ ಹೊಸಬರ ಆಟೋಗಳನ್ನ ಅಡ್ಡಕಟ್ಟಿ ದಬ್ಬಾಳಿಕೆನಡೆಸಿರುವ ಘಟನೆಯೊಂದು ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.


ಎಲ್ ಬಿಎಸ್ ನಗರದ ಆಟೋ ಚಾಲಕನೋರ್ವ ಶಿವಮೊಗ್ಗದ ಬಸ್ ನಿಲ್ದಾಣದ ಆಟೋ ನಿಲ್ದಾಣದ ಬಳಿ  ತಮ್ಮ ಪರಿಚಯಸ್ಥರನ್ನ ಕೂರಿಸಿಕೊಂಡು ಹೋಗಲು ಬಂದ ವೇಳೆ ಅಲ್ಲಿನ ಕೆಲ ಚಾಲಕರು ಅಡ್ಡಹಾಕಿ ಆಟೋ ಸೈಡ್ ಗೆ ಹಾಕು ಎಂದು ಗದರಿಸಿದ್ದಾರೆ.


ಈ ಸ್ಟ್ಯಾಂಡ್ ನಲ್ಲಿ ನಾವು ದುಡಿಯ ಬೇಕು ಎಂದಿದ್ದಾರೆ. ನಾನು ಬಾಡಿಗೆ ಹೊಡೆಯಲು ಬಂದಿಲ್ಲ. ಪರಿಚಯಸ್ಥರನ್ನ ಕೂರಿಸಿಕೊಂಡು ಹೋಗಲು ಬಂದಿರುವೆ ಎಂದು ಹೇಳಿದರೂ   ಕೆಎ 14 ಸಿ 8058, ಕೆಎ 14 ಸಿ 2381  ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ.


ಆಟೋದಲ್ಲಿದ್ದ ಪರಿಚಯಸ್ಥರು ಗಲಾಟೆ ಬಿಡಿಸಿದ್ದು ಮತ್ತೊಮ್ಮೆ ಸ್ಟ್ಯಾಂಡ್ ಕಡೆ ಕಾಣಿಸಿಕೊಂಡರೆ ಜೀವ ಸಹಿತ ಬಿಡಲ್ಲ ಎಂದು ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದವರನ್ನ ತೌಫಿಕ್, ಮುಬಾರಕ್ ಮತ್ತು ನಯಾಜ್ ಎಂದು ಗುರುತಿಸಲಾಗಿದೆ. ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರ, ಆಗಸ್ಟ್ 17, 2024

ಸತ್ಯನಾರಾಯಣ ರಾಜು ಯಾನೆ ಮೊಟ್ಟೆ ಸತೀಶ್ ಸುದ್ದಿಗೋಷ್ಠಿ



ಸುದ್ದಿಲೈವ್/ಶಿವಮೊಗ್ಗ


ಜಮೀನು ವಿಚಾರದಲ್ಲಿ ಕಾರು ಜಖಂಗೊಳಿಸಿ ಸತ್ಯನಾರಾಯಣ ರಾಜು ಅಲಿಯಾಸ್ ಮೊಟ್ಟೆ ಸತೀಶ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ಹಿನ್ನಲೆಯಲ್ಲಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿ ಹಲ್ಲೆಯಬಗ್ಗೆ ವಿವರಣೆ  ನೀಡಿದರು. 


 ಆ.15 ರಂದು ರಾತ್ರಿ 12-30 ರಿಂದ 1-00 ಘಂಟೆ ಸಮಯದಲ್ಲಿ ಮನೆಗೆ ತಲುಪುವ ಸಂದರ್ಭದಲ್ಲಿ ರಾಮ್‌ ಬಾಬು, ನಾಗರಾಜ್ ನಾಯ್ಕ ಮತ್ತು ಕೆಲವರು ಸೇರಿಕೊಂಡು ದೊಣ್ಣೆಗಳಿಂದ ಕಾರ್ ನ ಮೇಲೆ ಹಾಗೂ ನನ್ನ ಮೇಲೆ  ದಾಳಿ ನಡೆಸಿದ್ದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ. ಜಮೀನು ವಿಷಯಕ್ಕೆ ಬಂದರೆ, ನಮ್ಮ ಮೇಲೆ ಪೋಲಿಸ್ ಠಾಣೆ ಗಳಲ್ಲಿ ದೂರು ನೀಡಿದರೆ, ನಿನ್ನ ಹಾಗೂ ನಿನ್ನ ಕುಟುಂಬವನ್ನು ಜೀವಂತವಾಗಿ ಬಿಡುವುದಿಲ್ಲ ! ಎಂದು ಬೆದರಿಸಿರುವುದಾಗಿ ಆರೋಪಿಸಿದರು. 


ತಕ್ಷಣ ಸತೀಶ್‌ ಅವರು ತಮ್ಮ ಕಾರನ್ನು ಬಳಸಿಕೊಂಡು ಅಲ್ಲಿಂದ ಪರಾರಿಯಾಗಿ, ಮೆಗ್ಗಾನ್ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು. ತುಂಗಾ ನಗರ ಪೋಲಿಸ್ ಠಾಣೆ ಗೆ ಮಾಹಿತಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ, ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಆರ ಎಸ್ ಸತ್ಯನಾರಾಯಣ್ ರಾಜ್ ಮಾಜಿ ರೌಡಿ ಶೀಟರ್, ಒಂದು ಪತ್ರಿಕೆಯ ಸಂಪಾದಕ, ಗ್ರಾಮ ಪಂಚಾಯತಿ ಸೇರಿ, ಪಾಲಿಕೆಯ ಚುನಾವಣೆಗಳಲ್ಲಿ ಸ್ಪರ್ಧಿಸಿ, ಪಾಲಿಕೆಯ ಸದಸ್ಯನಾಗಿರುತ್ತಾರೆ. ಹಲ್ಲೆಗೆ ಮುಖ್ಯ ಕಾರಣ ಇವರ ಅಜ್ಜ 1962ರಲ್ಲಿ ಶುಗರ್ ಫ್ಯಾಕ್ಟರಿ ಜಮೀನು ಖರೀದಿಸಿರುತ್ತಾರೆ. 


ನ್ಯಾಯಾಲಯದ ಆದೇಶ ಮತ್ತು ಪಣಿಯಲ್ಲಿ ಇವರ ಹೆಸರು ಈಗಲೂ ಚಾಲ್ತಿಯಲ್ಲಿದೆ. ವಾಮ ಮಾರ್ಗದಿಂದ ಇವರ ದೂರದ ಸಂಬಂಧಿ ಆ ಜಮೀನನ್ನು ಯಾವುದೇ ದಾಖಲೆ ಇಲ್ಲದೆ ಬೇರೆಯರಿಗೆ ಉಳಿಮೆ ಮಾಡಲು ನೀಡಿರುತ್ತಾರೆ. 


ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕಾನೂನು ರೀತಿಯ ಹೋರಾಟ ಮಾಡಲು ಮುಂದಾದಾಗ ಈ ಸಮಸ್ಯೆಗಳು ಕಿರುಕುಳ ನೀಡುವುದು. ಸುಳ್ಳು ದೂರು ನೀಡಿ ಮಾನಹಾನಿ ಮಾಡುವುದು ಮಾಡುತ್ತಿದ್ದು ಪ್ರಸ್ತುತ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಇಂಜೆಕ್ಷನ್ ಆರ್ಡರ್ ಸಿಕ್ಕಿರುತ್ತದೆ ಎಂದು ವಿವರಿಸಿದರು.


ದಿನಾಂಕ 08-08-2024 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ  ದೂರು ನೀಡಿ ಸೂಕ್ತ ರಕ್ಷಣೆ ಕೋರಿರುತ್ತಾರೆ. ಮಾಜಿ ರೌಡಿ ಎಂಬ ಕಾರಣಕ್ಕೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ನಿರಂತವಾಗಿ ಮಾಡುತ್ತಿದ್ದರೆಂದು ತಮ್ಮ ಮಾನಸಿಕ ಹಿಂಸೆಗಳ ಬಗ್ಗೆ ಹೇಳಿಕೊಂಡಿರುತ್ತಾರೆ. ಸ್ವತಂತ್ರ ದಿನಾಚರಣೆಯ ದಿನ ರಾಮ್ ಬಾಬು ಮತ್ತು 30ಕ್ಕೂ ಹೆಚ್ಚು ಜನ ಜಮೀನಿಗೆ ಬಂದು ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. 


ಇದರ ವಿಷಯವಾಗಿ ತುಂಗನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿರುತ್ತದೆ. ಅದೇ ದಿನ ರಾತ್ರಿ 12:30 ರಿಂದ ಒಂದು ಗಂಟೆ ಸುಮಾರಿಗೆ ಕೊಲೆ ಯತ್ನ ನಡೆದಿರುತ್ತದೆ. ತಕ್ಷಣ ನನ್ನ ಕುಟುಂಬಕ್ಕೆ ಇಲಾಖೆಯವರು ಸೂಕ್ತ ರಕ್ಷಣೆ ನೀಡಬೇಕಾಗಿ ಮನವಿ ನೀಡಿದರು. 

ಶುಕ್ರವಾರ, ಆಗಸ್ಟ್ 16, 2024

ನಡುರಸ್ತೆಯಲ್ಲೇ ಬಸ್ ಬಿಟ್ಟು ಠಾಣೆಗೆ ತೆರಳಿದ ಚಾಲಕ



ಸುದ್ದಿಲೈವ್/ಶಿರಾಳಕೊಪ್ಪ


ಶಿರಾಳಕೊಪ್ಪದಲ್ಲಿ ಕೆಎಸ್ಆರ್ ಟಿ ಸಿ ಬಸ್ ವೊಂದು ನಡುರಸ್ತೆಯಲ್ಲಿ ನಿಂತಿದ್ದು ಕಂಡಕ್ಟರ್ , ಚಾಲಕ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. 


ಶಿರಾಳಕೊಪ್ಪದಲ್ಲಿ ರಾಣೇಬೆನ್ನೂರು, ಹಿರೇಕೆರೂರು ಮೂಲಕ ಶಿರಾಳಕೊಪ್ಪಕ್ಕೆ ತಲುಪಬೇಕಿದ್ದ ಎನ್ ಡಬ್ಲೂ ಕೆಎಸ್ ಆರ್ ಟಿಸಿ ಬಸ್ ಶಿರಾಳಕೊಪ್ಪದ ನಡುರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು  ಕೆಲ ಪ್ರಯಾಣಿಕರು ಮತ್ತು  ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆದಿದೆ. 





ಕೆಲವರ ಪರ ಕೈ ನೀಡಿದ್ದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ವಾಗ್ವಾದ ನಡೆದಿದೆ. ಇದರಿಂದ ಹತ್ತಿರದ ಪೊಲೀಸ್ ಠಾಣೆಗೆ ಬಸ್ ಚಾಲಕ ನಡುರೆಸ್ತೆಯಲ್ಲಿ ಬಿಟ್ಟು ಠಾಣೆಗೆ ತೆರಳಿದ್ದಾರೆ. 


ಕೆಎ 27 ಎಫ್ 669 ಕ್ರಮಸಂಖ್ಯೆಯ  ಹಾವೇರಿ ವಿಭಾಗದ ಎನ್ ಡಬ್ಲುಕೆಆರ್ ಟಿಸಿ ಬಸ್ ಆಗಿದೆ. ಠಾಣೆಯಲ್ಲಿ ಪೊಲೀಸರು ವಿಚಾರಿಸಿದ್ದು ಈ ಮೊದಲು ಶಿರಾಳಕೊಪ್ಪದ ಹಳೇ ಪೆಟ್ರೋಲ್ ಬಂಕ್ ಬಳಿ ಸ್ಟಾಪ್ ನೀಡದ ಕಾರಣ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.


ಸರ್ಕಾರಿ ಸಾರಿಗೆ ಬಸ್ ನಿಲುವಿನ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ಆದರೆ ಈ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ಆದರೆ ಕೆಲ ಬಸ್ ಗಳು ಇಲ್ಲಿ ನಿಲುಡೆ ಕೊಡಲಾಗುತ್ತೆ ಕೆಲ ಬಸ್ ಗಳು ಕೊಟ್ಟಿಲ್ಲ. ಕೆಎ 27 ಎಫ್ 669 ಕ್ರಮಸಂಖ್ಯೆಯ ಬಸ್ ಸ್ಟಾಪ್ ಕೊಡದ ಕಾರಣ ಈ ಪ್ರಯಾಣಿಕರು ಗಲಾಟೆ ನಡೆಸಿದ್ದಾರೆ. 


ಠಾಣೆ ಮೆಟ್ಟಿಲೇರಿದ ಈ ಗಲಾಟೆ ವಿಚಾರದಲ್ಲಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಮೌಕಿಖವಾಗಿ ಎಚ್ಚರಿಸಿ ಕಳುಹಿಸಿದ್ದಾರೆ. 

ಮಾಜಿ ಕಾರ್ಪರೇಟರ್ ಮೇಲೆ ಹಲ್ಲೆ?

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಮಾಜಿ ಕಾರ್ಪರೇಟರ್ ಸತ್ಯನಾರಾಯಣ ರಾಜು ಯಾನೆ ಮೊಟ್ಟೆ ಸತೀಶ್ ರವರ ಕಾರು ಜಖಂಗೊಳಿಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗೆದಾಖಲಾಗಿದ್ದಾರೆ.


ಜಮೀನಿನ ವಿಚಾರದಲ್ಲಿ ಕಾರು ಜಖಂಗೊಳಿಸಿರುವುದಾಗಿ ಹಾಗೂ ಆತನ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕುಸ್ಕೂರಿನ ಬಳಿ ಜಮೀನು ಖರೀದಿಸಿರುವ ಮೊಟ್ಟೆಸತೀಶ್ ಖರೀದಿ ವಿಚಾರದಲ್ಲಿ ಹಾಗೂ ಅಕ್ಕ ಪಕ್ಕದ ಜಮೀನು ವಿಚಾರದಲ್ಲಿ ತಕರಾರು ನಡೆದಿತ್ತು.


ಈ ತಕರಾರು ವಿಚಾರದಲ್ಲಿ ನಿನ್ನೆ ರಾತ್ರಿ 10 ಗಂಟೆಯ ವರೆಗೆ ತುಂಗನಗರದಲ್ಲಿದ್ದು, ನಂತರ ನಡೆದ ಬೆಳವಣಿಗೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ. 


ಶಿವಮೊಗ್ಗ ತಾಲೂಕು ಕುಸ್ಕೂರು ನಲ್ಲಿ ಇವರ ಜಮೀನಿದ್ದರೆ, ಇದಕ್ಕೆ ಹೊಂದಿಕೊಂಡ ಗ್ರಾಮ ಯರಗನಾಳ್ ನಲ್ಲಿ ಮನೆಯಿದೆ.  ಮನೆಯಲ್ಲಿದ್ದಾಗ ಅವರ ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಮೆಗ್ಗಾನ್ ಗೆ ದಾಖಲಾಗಿ ನಂತರ ಖಾಸಗಿ ಆಸ್ಪತ್ರೆಯಲ್ಲಿರುವುದಾಗಿ ಹೇಳಲಾಗುತ್ತಿದೆ.

ಗುರುವಾರ, ಆಗಸ್ಟ್ 15, 2024

ಕಿಡಿಗೇಡಿಗಳಿಂದ ಕಲ್ಲು ತೂರಟ

 


Suddi Live/ಶಿವಮೊಗ್ಗ

ನಗರದಲ್ಲಿ ಮನೆಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬಾಗಿಲು ತೆಗೆದು ನೋಡಲು ಹೋದಾಗ ವೃದ್ಧನ ಮೇಲೆ ಇಟ್ಟಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.


ಶಿವಮೊಗ್ಗದ ಕಾಮಾಕ್ಷಿ ಬೀದಿಯ ರಾಮಣ್ಣ ಎಂಬುವವರ ಮನೆ ಮೇಲೆ ಕಲ್ಲು ತೂರಲಾಗಿದೆ. ಆ.11ರ ರಾತ್ರಿ ರಾಮಣ್ಣ ಅವರು ಊಟ ಮುಗಿಸಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಹೊರಗೆ ಶಬ್ದವಾಗಿದೆ. ರಾಮಣ್ಣ ಮತ್ತು ಅವರ ಪತ್ನಿ ಬಾಗಿಲು ತೆಗೆದಾಗ ಕಿಡಿಗೇಡಿಗಳು ತೂರಿದ ಇಟ್ಟಿಗೆ ರಾಮಣ್ಣ ಅವರ ಭುಜದ ಮೇಲೆ ಬಿದ್ದಿದೆ. ಕೂಡಲೆ ಮೊಮ್ಮಗನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.


ಪೊಲೀಸ್‌ ಠಾಣೆಗೆ ದೂರು ನೀಡಲು ಮೊಮ್ಮಗನೊಂದಿಗೆ ತೆರಳುತ್ತಿದ್ದಾಗ ಕಿಡಿಗೇಡಿಗಳು ಪುನಃ ಕಲ್ಲು ತೂರಿದ್ದಾರೆ. ಅದೃಷ್ಟವಶಾತ್‌ ಪಾರಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ರಾಮಣ್ಣ ಅವರಿಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನಿಂದ ಬಂದು ಮಹಿಳೆಯನ್ನ ನೆಲಕ್ಕೆ ಬೀಳಿಸಿ ಮಾಂಗಲ್ಯ ಸರ ಕಳುವು



Suddi Live/ಶಿವಮೊಗ್ಗ

ಅನೇಕ ದಿನಗಳಿಂದ ಮಾಂಗಲ್ಯ ಸರ ಕಳುವು ಪ್ರಕರಣಗಳಿಗೆ ಬ್ರೇಕ್ ಬಿದ್ದಿತ್ತು. ಮಳೆಗಾಲವಿದ್ದುದ್ದರಿಂದ ನಗರದಲ್ಲಿ ಮಾಂಗಲ್ಯ ಪ್ರಕರಣವು ಸಂಪೂರ್ಣ ನಿಲ್ ಆಗಿತ್ತು. ಆದರೆ ಸಣ್ಣಕ್ಕೊಂದು ಪ್ರಕರಣ ನಗರದ ಹೊರಭಾಗದಲ್ಲಿ ನಡೆದಿದೆ. 


ಆ.13 ರಂದು ಮಂಡ್ಲಿ ಕಲ್ಲೂರಿನ ಫ್ಯಾಕ್ಟರಿಗೆ ಹೋಗುತ್ತಿದ್ದ 53 ವರ್ಷದ ಮಹಿಳೆ ಸಂಜೆ 7-30 ಕ್ಕೆ ಮನೆಗೆ ವಾಪಾಸ್ ಆಗುವಾಗ ಭುವನ್ ಫ್ಯಾಕ್ಟರಿಯ ಬಳಿ ಬರುತ್ತಿದ್ದಂತೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ತಳ್ಳಿದ್ದಾನೆ. ನೆಲಕ್ಕೆ ಬಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 20 ಗ್ರಾಂ ಚಿನ್ನಾಭರಣವನ್ನ ಕಿತ್ತುಕೊಂಡಿದ್ದಾನೆ.  


ಭಯದಿಂದ ಕೂಗಿಕೊಳ್ಳದ ಕಾರಣ ಮಹಿಳೆ ಜೀವ ಉಳಿಸಿಕೊಂಡಿರುವುದಾಗಿ ತಿಳಿಸಿದ್ದು, ದೂರದಲ್ಲಿ ಬೈಕ್ ನಲ್ಲಿ ಕುಳಿತಿದ್ದ ವ್ಯಕ್ತಿ ಹತ್ತಿರ ಬರುತ್ತಿದ್ದಂತೆ ಮಹಿಳೆಯ ಮಾಂಗಲ್ಯವನ್ನ ಕಿತ್ತುಕೊಂಡ ವ್ಯಕ್ತಿ ಬೈಕ್ ಏರಿ ಪಾಸ್ ಆಗಿದ್ದಾನೆ. ಕತ್ತಲು ಆವರಿಸಿಕೊಂಡ ಪರಿಣಾಮ ಬೈಕ್ ನಂಬರ್ ಕಾಣಿಸಲಿಲ್ಲ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. 


ನಂತರ ಫ್ಯಾಕ್ಟರಿಯ ಜನ ಬಂದು ಮಹಿಳೆಗೆ ಉಪಚರಿಸಿದ್ದಾರೆ. ಭಯಕ್ಕೆ  1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಲು ಬಿಟ್ಟಿದ್ದು ಅಪರಿಚಿತ ಇಬ್ಬರನ್ನ ಹುಡುಕಿಕಿಡುವಂತೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುಧವಾರ, ಆಗಸ್ಟ್ 14, 2024

ಎಮ್ಮೆಹಟ್ಟಿ ಆಯಿತು, ಈಗ ಕೂಡ್ಲಿಗೆರೆಯಲ್ಲಿ ಕರಡಿ ದಾಳಿ



ಸುದ್ದಿಲೈವ್/ಭದ್ರಾವತಿ


ಇಲ್ಲಿಗೆ ಸಮೀಪದ ಕೂಡ್ಲಿಗೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ಅವರಿಗೆ ಪರಚಿದ ಗಾಯಗಳಾಗಿರುವ ಘಟನೆ ನಡೆದಿದೆ.ಗಾಯಾಳುವನ್ನು ಗ್ರಾಮದ ಮೋಹನ್(36) ಎಂದು ಗುರುತಿಸಲಾಗಿದೆ.


ಗ್ರಾಮದಲ್ಲಿರುವ ಮನೆಯೊಂದರಲ್ಲಿ ಕೃಷಿ ಸಾಮಾನು ಸರಂಜಾಮು ಸಂಗ್ರಹ ಮಾಡಿರುವ ಮನೆಗೆ  ನಿನ್ನೆ ರಾತ್ರಿ 11.30ರ ವೇಳೆಗೆ ಮೋಹನ್  ಬಂದಿದ್ದಾರೆ. ಆದರೆ, ಈ ಮುನ್ನವೇ ಮನೆಯೊಳಗೆ ಸೇರಿಕೊಂಡಿದ್ದ ಕರಡಿ ಏಕಾಏಕಿ ಮೋಹನ್ ಮೇಲೆ ದಾಳಿ ನಡೆಸಿದೆ.


ಕರಡಿ ದಾಳಿಯಿಂದ ಗಾಬರಿಯಾದರೂ ಹೆದರದ ಮೋಹನ್, ಅದರೊಂದಿಗೆ ಸೆಣೆಸಾಡಿದ್ದಾರೆ. ಛಲಬಿಡದೇ ಕರಡಿಯೊಂದಿಗೆ ಹೋರಾಡಿದ್ದು, ಅದನ್ನು ಎತ್ತಿ ಬಿಸಾಡಿದ್ದಾರೆ. ಇದರಿಂದ ಹೆದರಿದ ಕರಡಿ ಅರಣ್ಯ ಪ್ರದೇಶದ ಕಡೆ ಓಡಿಹೋಗಿದೆ.

ಕರಡಿಯೊಂದಿಗೆ ಹೋರಾಡುವ ವೇಳೆ ಮೋಹನ್ ಅವರ ಬೆನ್ನು ಹಾಗೂ ಕೈಗೆ ಪರಚಿದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.


ಬಾರದ ಅರಣ್ಯಾಧಿಕಾರಿಗಳು, ಜನರ ಆಕ್ರೋಶ


ಗ್ರಾಮದ ಒಳಭಾಗದಲ್ಲಿಯೇ ಕರಡಿ ಕಾಣಿಸಿಕೊಂಡು ಓರ್ವರ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯ ಹಾಗೂ ತಾಲೂಕು ಅರಣ್ಯಾಧಿಕಾರಿಗಳಿಗೆ ಇಂದು ಮುಂಜಾನೆಯೇ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರೈತ ಸಂಘದ ಹಸಿರುಸೇನೆ ಕಾರ್ಯದರ್ಶಿ ಮೋಹನ್ ಅವರು, ಘಟನೆ ಕುರಿತಂತೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರು ತೋಟಗಳಿಗೆ ಹಾಗೂ ಹೊರಕ್ಕೆ ತೆರಳಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಭದ್ರಾವತಿ ತಾಲೂಕು ಎಮ್ಮೆಹಟ್ಟಿಯಲ್ಲಿ ಭಾನುವಾರ ಬೆಳಿಗ್ಗೆ ಬಹಿರ್ದೆಸೆಗೆ ತೆರಳಿದ ವೇಳೆ ಕರಡಿ ದಾಳಿ ನಡೆಸಿತ್ತು. ಮೂರು ದಿನಗಳ ನಂತರ ಕೂಡ್ಲಿಗೆರೆ ಭಾಗದಲ್ಲಿ ಕರಡಿ ದಾಳಿನಡೆಸಿದೆ. ಅಲ್ಲೆ ಹೊಳೆಹೊನ್ನೂರು ಭಾಗದಲ್ಲಿ ಕೆಲವೆಡೆ ಕರಡಿ ಕಾಣಿಸಿಕೊಂಡಿದೆ.


ಮಂಗಳವಾರ, ಆಗಸ್ಟ್ 13, 2024

ಮೂವರು ಆತ್ಮಹತ್ಯೆಗೆ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?

ದರ್ಶನ್             ಭುವನೇಶ್ವರಿ                 ಮಾರುತಿ          


ಸುದ್ದಿಲೈವ್/ಶಿವಮೊಗ್ಗ


ಕ್ಲಾರ್ಕ್ ಪೇಟೆಯ ಮನೆಯೊಂದರಲ್ಲಿ ಮೂವರು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೂವರ ಆತ್ಮಹತ್ಯೆಯ ಕುರಿತು ವರದಿ ಬಂದ ಮೇಲೆ ಸಾವಿನ ಕುರಿತು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ. 


ಇಂದು ಮನೆಯಲ್ಲಿ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.   ಮಹಿಳೆ ಒಬ್ಬರೇ ದುಡಿಯುತ್ತಿದ್ದ ಕಾರಣ  ಜೀವನ ಸಾಗಿಸುವುದು ಕಷ್ಟವಾದ ಹಿನ್ನಲೆಯಲ್ಲಿ ಊಟದಲ್ಲಿ ವಿಷ ಬೆರೆಸಿಕೊಂಡು ಸಾವನ್ನಪ್ಪಿರವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ತಿಳಿಸಿದ್ದಾರೆ. 


ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಭುವನೇಶ್ವರಿ(25) ಕುಟುಂಬದ ಜವಬ್ದಾರಿ ಹೊತ್ತಿದ್ದರು. ಆದರೆ ಸಹೋದರ ಮಾರುತಿ ಮತ್ತು ಪುತ್ರ ದರ್ಶನ್(25) ಯಾವುದೇ ಕೆಲಸ ಮಾಡಿಕೊಂಡಿರಲಿಲ್ಲ. ಮಗ ದರ್ಶನ್ ಆಗಾಗ್ಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ.  ಕ್ಲಾರ್ಕ್ ಪೇಟೆಯಲ್ಲಿ ಕೊಠಡಿಯಲ್ಲಿ ಮೂವರು ವಾಸವಾಗಿದ್ದರು. 


ಸಹೋದರ ಮಾರುತಿಗೆ (35) ಟಿಬಿ ಕಾಯಿಲೆಯಿಂದ ನರಳುತ್ತಿದ್ದನು. ಹಾಗಾಗಿ ಏನೂ ಕೆಲಸ ಮಾಡುತ್ತಿರಲಿಲ್ಲ. ಕೆಲಸಕ್ಕೆ ಹೋಗು ಎಂದಾಗಲಿಲ್ಲ ಆಗಾಗ ಅಕ್ಕ ಮತ್ತು ಸಹೋದರನ ನಡುವೆ ಜಗಳವಾಗುತ್ತಿತ್ತು. ಮಗನೂ ಸಹ ಪ್ರಯಕ್ಕೆ ಬಂದರೂ ಕೆಲಸಕ್ಕೆ ಆಗಾಗ ಹೋಗುತ್ತಿದ್ದ ಪರಿಣಾಮ ಇಬ್ಬರಿಗೆ ವಿಷ ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. 


ಬಡತನದ ಹಿನ್ನಲೆಯಲ್ಲಿ ಹಾಗೂ ಸಹೋದರ ಮತ್ತುಮಗನ ಸೋಮಾರಿ ತನಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.  ಜೀವನ ನಡೆಸುವುದು ಕಷ್ಟ ವಾದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ನಡೆದಿದೆ. 


ಬಿದರಗೋಡು ಬಳಿ ಭೀಕರ ಅಪಘಾತ - ಸ್ಥಳದಲ್ಲೇ ಇಬ್ಬರ ದುರ್ಮರಣ!

 



ಸುದ್ದಿಲೈವ್/ತೀರ್ಥಹಳ್ಳಿ 


ಪಿಕಪ್ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಅಗಸರಕೋಣೆ ಬಳಿ ನಡೆದಿದೆ.


ಆಗುಂಬೆ ವ್ಯಾಪ್ತಿಯ ಬಿದರಗೋಡು ಸಮೀಪದ ಅಗಸರ ಕೋಣೆಯ ಬಳಿ ಮಂಗಳವಾರ ಮಧ್ಯಾಹ್ನ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬರುತ್ತಿದ್ದ ಪಿಕಪ್ ನಡುವೆ ಡಿಕ್ಕಿಯಾಗಿದೆ. ಅತೀ ವೇಗದ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಅಪಘಾತದ ರಭಸಕ್ಕೆ ಸ್ಥಳದಲ್ಲೇ ಬೈಕ್ ನಲ್ಲಿದ್ದ ಒಬ್ಬ ಹಾಗೂ ಪಿಕಪ್ ನಲ್ಲಿದ್ದ ಮತ್ತೊರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮೃತಪಟ್ಟವರು ಅಗಸರಕೋಣೆಯ ಶರತ್ ಹಾಗೂ ಮತ್ತೊಬ್ಬರು ಕೇರಳದ ಮೂಲದವರು ಎಂದು ತಿಳಿದು ಬಂದಿದೆ. ಪಿಕಪ್ ವಾಹನದ ಚಾಲಕ ಪರಾರಿಯಾಗಿದ್ದಾನೆ.ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಮೆ



ಸುದ್ದಿಲೈವ್/ಶಿವಮೊಗ್ಗ


ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ. 


ಕ್ಲಾರ್ಕ್ ಪೇಟೆಯ ನಿವಾಸಿಗಳಾದ ಭುವನೇಶ್ವರಿ, ಮೋಹನ್ ಮತ್ತು ದರ್ಶನ್ ವಿಷ ಸೇವಿಸಿ ಆತ್ಹತ್ಯೆ ಮಾಡಿಕೊಂಡಿದ್ದಾರೆ. ಭುವನೇಶ್ವರಿ ಮತ್ತು ಮೋಹನ್ ಸಹೋದರರಾಗಿದ್ದಾರೆ. ಭುವನೇಶ್ವರಿ ಮಗ ದರ್ಶನ್ ಆಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 



ಆತ್ಮಹತ್ಯೆಗೆ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಎರಡು ದಿನದಿಂದ ಮತ್ತೋರ್ವ ಸಹೋದರ ಶಿವು ಎಂಬುವರು ಈ ಮೂವರನ್ನ ಮೋಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದಾರೆ. 



ಯಾರೂ ಕರೆಯನ್ನ ಸ್ವೀಕರಿಸದೆ ಇರುವ ಕಾರಣಕ್ಕೆ ಕ್ಲಾರ್ಕ್ ಪೇಟೆಗೆ ಬಂದು ಮನೆಯ ಬಾಗಿಲು ತೆಗೆದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ತಿಳಿದು ಬಂದಿದೆ. 

ಸೋಮವಾರ, ಆಗಸ್ಟ್ 12, 2024

ದರೋಡೆ ಪ್ರಕರಣದ ಇಬ್ಬರು ಆರೋಪಿಗಳು ಅರೆಸ್ಟ್



ಸುದ್ದಿಲೈವ್/ಭದ್ರಾವತಿ


ದರೋಡೆ ಪ್ರಕರಣವೊಂದನ್ನ ಭದ್ರಾವತಿ ನ್ಯೂಟೌನ್ ಪೊಲೀಸರು ಭೇದಿಸಿದ್ದು,  ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದ್ದು, 1.5 ಲಕ್ಷ ರೂ.ಗಳ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. 


ಆ.09 ರಂದು ಶಾರದಾ ಮಂದಿರದ ಬಳಿ ನಿಂತಿದ್ದ  ಮುರುಳಿಧರ್ (64) ಎಂಬುವರಿಗೆ ಬೈಕ್ ನಲ್ಲಿ ಬಂದಿದ್ದ 4-5 ಜನ ಹುಡುಗರು  ಹೆದರಿಸಿ ಅವರ ಬಳಿ ಇದ್ದ ಉಂಗುರ, ಕೊರಳಿನ ಚಿನ್ನದ ಸರ, ಹಣ ಮತ್ತು ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣ ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.    


ಪ್ರರಕಣದಲ್ಲಿ ಸುಲಿಗೆ ಮಾಡಿಕೊಂಡ ಹೋದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮ ರಡ್ಡಿ  ಮತ್ತು  ಕಾರ್ಯಪ್ಪ ಎ ಜಿ,ರವರ  ಮಾರ್ಗದರ್ಶನದಲ್ಲಿ, ಭದ್ರಾವತಿಯ ಡಿವೈಎಸ್ಪಿ ನಾಗರಾಜ್ ಎಂಬುವರ ಮೇಲ್ವಿಚಾರಣೆಯಲ್ಲಿ ನಗರ ವೃತ್ತದ ಸಿಪಿಐ ಕುಮಾರ್  ನೇತೃತ್ವದಲ್ಲಿ ನ್ಯೂ ಪೊಲೀಸ್ ಠಾಣೆಯ ಪಿಎಸ್ಐ ಟಿ. ರಮೇಶ,  ಭಾರತಿ ಮತ್ತು ಹಳೆನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ ನಾಯ್ಕ ಹಾಗೂ ನ್ಯೂಟೌನ್ ಸಿಬ್ಬಂಧಿಗಳಾದ  ಟಿ ಪಿ ಮಂಜಪ್ಪ ಎ ಎಸ್ ಐ,  ಸಿ.ಹೆಚ್.ಸಿ  ನವೀನ್, ಸಂತೋಷ ನಾಯ್ಕ, ಮತ್ತು ಸಿಪಿಸಿ ಪ್ರಸನ್ನ ಹಾಗೂ ಹಳೆನಗರ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಹಾಲಪ್ಪ, ಸಿಪಿಸಿ ಮೌನೇಶ ಶಿಕಲ್, ಚಿಕ್ಕಪ್ಪ ಎಪ್ ಎಸ್, ಪ್ರವೀಣ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. 


ತನಿಖಾ ತಂಡವು ಪ್ರಕರಣದ  ಆರೋಪಿಗಳಾದ 1) ಜಬೀವುಲ್ಲಾ @ ಮಲ್ಲಿ, 23 ವರ್ಷ, ಮೊಮಿನ್ ಮೊಹಲ್ಲಾ ಅನ್ವರ್ ಕಾಲೋನಿ ಭದ್ರಾವತಿ ಮತ್ತು 2) ಮಹಮದ್ ಗೌಸ್ @ ಗುಂಡಾ, 24 ವರ್ಷ, ಮೊಮಿನ್ ಮೊಹಲ್ಲಾ ಅನ್ವರ್ ಕಾಲೋನಿ, ಭದ್ರಾವತಿ ಇವರನ್ನು ಬಂಧಿಸಲಾಗಿದೆ, ಆರೋಪಿಗಳಿಂದ ಅಂದಾಜು ಮೌಲ್ಯ 1,59,000/- ರೂ ಗಳ 24.5 ಗ್ರಾಂ ತೂಕದ ಬಂಗಾರದ ಕೊರಳ ಸರ ಮತ್ತು ಉಂಗುರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 35,000/- ರೂ ಗಳ ಬೈಕ್ ಸೇರಿ ಒಟ್ಟು 1,94,000/- ಮೌಲ್ಯದ ಮಾಲನ್ನು ಆರೋಪಿತರಿಂದ  ವಶಪ ಪಡಿಸಿಕೊಳ್ಳಲಾಗಿದೆ. 


ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕೊಟ್ಟಹಣ ವಾಪಸ್ ಕೇಳಿದಕ್ಕೆ ಮಹಿಳೆಗೆ ಆಸಿಡ್ ಎರಚುವುದಾಗಿ ಬೆದರಿಕೆ

 


ಸುದ್ದಿಲೈವ್/ಶಿವಮೊಗ್ಗ


ಕೊಟ್ಟ ಹಣ ವಾಪಾಸ್ ಕೇಳಿದಕ್ಕೆ ಆಸಿಡ್ ಎರಚುವುದಾಗಿ ಹೇಳಿ ಮಹಿಳೆಯನ್ನ ಇನ್ನಿಲ್ಲದಂತೆ ಕಾಡಿದ ಘಟನೆ ಈಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. 


ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡಿದ್ದ ಸಂತೆಕಡೂರಿನ ಲಿಂಗರಾಜು ಕಷ್ಟವಿದೆ ಕೈಗಡ ಸಾಲಬೇಕು ಎಂದು ನಂಬಿಸಿ 2021 ರಲ್ಲಿ  ಭಾರತೀಪುರದ ನಿವಾಸಿಯ ಮಹಿಳೆಯಿಂದ 3 ಲಕ್ಷ ರೂ. ಸಾಲ ಪಡೆದಿದ್ದ. ಮತ್ತೆ ಮಹಿಳೆಯನ್ನ ನಂಬಿಸಿ ಇನ್ನೂ ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದ. 


ಹಣವಿಲ್ಲ ಕೊಟ್ಟ ಹಣ ವಾಪಾಸ್ ಕೊಡು ಎಂದು ಮಹಿಳೆ  ಬೇಡಿಕೊಂಡರೂ 3 ತೊಲ ಬಂಗಾರದ ಹಣವನ್ನ ಅಡವಿಟ್ಟಿಸಿ ಸಾಲ ಪಡೆದಿದ್ದ. ಕೊಟ್ಟ ಸಾಲ ವಾಪಾಸ್ ಕೊಡಪ್ಪ ಎಂದು ಕೇಳಿದ್ದಕ್ಕೆ ಮಹಿಳೆಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. 


ಇತ್ತೀಚೆಗೆ ಅಂದರೆ ಆ.5 ರಂದು ರಾತ್ರಿ ಚಿನ್ನಾಭರಣವನ್ನ ಕೊಡಲು ಮನೆಗೆ ಬರುತ್ತಿರುವುದಾಗಿ ಹೇಳಿದ ಲಿಂಗರಾಜು ಮನೆಯೊಳಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹಣ ಬೇಕು ಎಂದು ಕರೆ ಮಾಡುದ್ರೆ ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. 


ಮಹಿಳೆ ಹೋದಕಡೆಯಲ್ಲೆಲ್ಲಾ ಫಾಲೋ ಮಾಡಿಕೊಂಡು ಹೋಗುವುದು ಮಾಡಿದ್ದಾನೆ.  ಆತನಿಂದ ಜೀವ ಬೆದರಿಕೆಯಿದೆ ನನಗೆ ಲಿಂಗರಾಜು ವಿನಿಂದ ರಕ್ಷಣೆ ಬೇಕೆಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ

ಸಾಂಧರ್ಭಿಕ ಚಿತ್ರ



ಸುದ್ದಿಲೈವ್/ಶಿವಮೊಗ್ಗ


2024ನೇ ಸಾಲಿನಲ್ಲಿ ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಿಗಾಗಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.  


ಆಗಸ್ಟ್ 22 ರಿಂದ  ಆಗಸ್ಟ್ 31 ರವರೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ನಿರ್ದೇಶಕರು, ಮಂಗಳೂರು ಇವರು ಆಯೋಜಿಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳ ಇಮೇಲ್ ಮೂಲಕ ರವಾನಿಸಲಾಗಿದೆ.  


ಈ ರ‍್ಯಾಲಿಯು ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿರುತ್ತದೆ ಎಂಬುದನ್ನು ನೇಮಕಾತಿ ನಿರ್ದೇಶಕರು, ಮಂಗಳೂರು ಇವರ ಕೋರಿಕೆಯ ಮೇರೆಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಳೆ ವ್ಯಾಪಾರಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ



ಸುದ್ದಿಲೈವ್/ಶಿವಮೊಗ್ಗ


ಶಿವಾನಂದ್, 48 ವರ್ಷಗಳು, ಬಳೆ ವ್ಯಾಪಾರಿ, ಶೇಷಾದ್ರಿಪುರ, ಶಿವಮೊಗ್ಗ ಇವರು ಜುಲೈ 27 ರಂದು ಬಳೆ ವ್ಯಾಪಾರಕ್ಕೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ.


ಶಿವಾನಂದ್‌ಗೆ ಮಾನಸಿಕ ತೊಂದರೆ ಇದ್ದು ಆಗಾಗ ಹೀಗೆ ಮನೆ ಬಿಟ್ಟು ಹೋಗಿದ್ದು ವಾಪಸ್ ಬರುತ್ತಿದ್ದರು. ಆದರೆ ಈ ಬಾರಿ ಮನೆಗೆ ವಾಪಸ್ ಬಂದಿರುವುದಿಲ್ಲ. ಶಿವಾನಂದ್ ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು ಕನ್ನಡ ಮತ್ತು ಹಿಂದಿ ಭಾಷೆ ಬರುತ್ತದೆ. ಮನೆ ಬಿಟ್ಟು ಹೋದಾಗ ಅರ್ಧ ತೋಳಿನ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.


ಕಾಣೆಯಾದ ಶಿವಾನಂದರ ಮಾಹಿತಿ ದೊರೆತಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ದೂರವಾಣಿ ಸಂಖ್ಯೆ 08182-261400, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ ದೂರವಾಣಿ ಸಂಖ್ಯೆ 08182-261404, ಅಥವಾ ಕೋಟೆ ಪೊಲೀಸ್ ಠಾಣೆ ಶಿವಮೊಗ್ಗ ದೂರವಾಣಿ ಸಂಖ್ಯೆ 08182-261415 ರವರಿಗೆ ತಿಳಿಸುವಂತೆ ಕೋಟೆ ಪೊಲೀಸ್ ಠಾಣೆ ಪ್ರಕರಣೆ ತಿಳಿಸಿದೆ.

ರೌಡಿಶೀಟರ್ ಕಾಲಿಗೆ ಗುಂಡೇಟು

ಆರೋಪಿ ಭವಿತ್



ಸುದ್ದಿಲೈವ್/ಶಿವಮೊಗ್ಗ


ಜಯನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಕೇಸ್ ಗಳಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಪತ್ತೆ ಮಾಡಿ ವಶಕ್ಕೆ ಪಡೆಯುವ ವೇಳೆಗೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಲು ಹೋಗಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದವನ  ಕಾಲಿಗೆ ಗುಂಡು ಹಾರಿಸಲಾಗಿದೆ. 


ಭವಿತ್ ಎಂಬ 26 ವರ್ಷದ ವ್ಯಕ್ತಿಯನ್ನ ಬಂಧಿಸಲು ಹೋದಾಗ ಪೊಲೀಸ್ ಸಿಬ್ಬಂದಿ ಮತ್ತು ಜಯನಗರ ಪಿಎಸ್ಐ ಸುನೀಲ್ ನ  ಮೇಲೆ ದಾಳಿ ನಡೆಸಿದ್ದಾನೆ. ಬಸವನ ಗಂಗೂರು ಚಾನಲ್ ಬಳಿ ಕಾಲಿಗೆ ಗುಂಡು ಹೊಡೆದಿರುವುದಾಗಿ ತಿಳಿದು ಬಂದಿದೆ. 

ಗಾಯಾಳು ಭವಿತ್


ರೈಲ್ವೇ ಕ್ವಾಟರ್ಸ್ ಏರಿಯಾದ ಭವಿತ್ ಮೇಲೆ ಸುಮಾರು 7 ವಿವಿಧ ಆರೋಪಗಳಿವೆ ಕೊಲೆ, ಕೊಲೆಗೆ ಯತ್ನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಆತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ  ರೌಡಿ ಶೀಟರ್ ತೆಗೆಯಲಾಗಿತ್ತು, ನ್ಯಾಯಾಲಯದ ಕಲಾಪಗಳಿಗೂ ತಪ್ಪಿಸಿಕೊಂಡು ಓಡಾಡುತ್ತಿದ್ದ. 

ಗಾಯಾಳು ಪೊಲೀಸ್ ಸಹ ಮೆಗ್ಗಾನ್ ಗೆ ದಾಖಲು


ಇಂದು ಆತನನ್ನ‌ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಕಾರಣ ಆತನ ಕಾಲಿಗೆ ಗುಂಡೇಟು ಹೊಡೆದು ವಶಕ್ಕೆ ಪಡೆಯಲಾಗಿದೆ.  

ಭಾನುವಾರ, ಆಗಸ್ಟ್ 11, 2024

ಗಾಯಾಳುವನ್ನ ಆಸ್ಪತ್ರೆಗೆ ಕಳುಹಿಸಿ ಅಪಘಾತ ಪಡಿಸಿದ ವ್ಯಕ್ತಿ ಪರಾರಿ



ಸುದ್ದಿಲೈವ್/ಶಿವಮೊಗ್ಗ


ಅನುಪಿನ ಕಡಿಯಿಂದ ಪುರುದಾಳಿವಿಗೆ ತೆರಳುವಾಗ ಸ್ಕೂಟಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಗೆ ಎರಡು ಕಾಲು ಮುರಿದಿರುವ ಘಟನೆ ಸಂಜೆ 4 ಗಂಟೆಯ ವೇಳೆಗೆ ನಡೆದಿದೆ. 


ಸ್ಕೂಟಿ ಪಾಸ್ ಆಗುವಾಗ ಕಾರೊಂದು ಅಡ್ಡಬಂದು  ಡಿಕ್ಕಿ ಹೊಡೆಸಿದೆ. ಭಾಗೀರಥಿ ಎಂಬ ಮಹಿಳೆಗೆ ಕಾಲು ಮುರಿದಿದೆ. ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ರಸ್ತೆ ಅಪಘಾತ ಪಡಿಸಿದ ಕಾರಿನ ಚಾಲಕ ಅಪಘಾತ ಪಡಿಸಿದ ಮಹಿಳೆಗೆ ಮೆಗ್ಗಾನ್ ಗೆ ದಾಖಲಿಸಿ ಪರಾರಿಯಾಗಿರುವುದಾಗಿ ಕುಟುಂಬ ಆರೋಪಿಸಿದೆ. 


ಶಿವಮೊಗ್ಗದಲ್ಲಿ ಕೆಲಸ ಮುಗಿಸಿಕೊಂಡು ಪುರುದಾಳುವಿಗೆ ಹೋಗುತ್ತಿದ್ದ ಮಹಿಳೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅನುಪಿನಕಟ್ಟೆಯಲ್ಲಿ ಕಾರೊಂದು ಅಡ್ಡ ಬಂದಿದೆ. ಕಾರು ಚಾಲಕ ಗೋಪಾಲದ ವರೆಗೆ ಮಹಿಳೆಯನ್ನ ಕರೆದುಕೊಂಡು ಬಂದು ನಂತರ ಆಟೋ ಹತ್ತಿಸಿ ಕಳುಹಿಸಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ.