ಸುದ್ದಿಲೈವ್/ಭದ್ರಾವತಿ
ಹಣಕ್ಕಾಗಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಅಂತರಗಂಗೆಯಲ್ಲಿ ನಡೆದಿದೆ.
ಅಂತರಗಂಗೆಯ ಭೋವಿಕೇರಿಯಲ್ಲಿ ರಾಮಕ್ಕ ಎಂಬ 72 ವರ್ಷದ ಅಜ್ಜಿಯನ್ನ ಮೊಮ್ಮಗನೇ ಹೊಂಚು ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಜ್ಕಿಯ ಸೊಂಟದಲ್ಲಿದ್ದ 20 ಸಾವಿರ ರೂ ಮತ್ತು ಕಿವಿ ಓಲೆ ಕಿತ್ತುಕೊಂಡು ಹೋಗಿದ್ದಾನೆ.
ಈ ಸಂಬಂಧ ಮೊಮ್ಮಗ ಚೇತನ್, ಭರತ್, ರೋಹಿತ್, ಆದರ್ಶ ವಿರುದ್ಧ ದೂರು ದಾಖಲಾಗಿದೆ. ರಾಮಕ್ಕನವರ ಮಗ ಗೋವಿಂದ ಜೆಸಿಬಿ ಖರೀದಿಸಿದ್ದಾರೆ. ಜೆಸಿಬಿ ಕಂತು ಕಟ್ಟಲು ರಾಮಕ್ಕರಿಗೆ 20 ಸಾವಿರ ಕಂತು ಹಣ ನೀಡಿ ಗೋವಿಂದರವರು ದಾವಣಗೆರೆಗೆ ಹೋಗಿದ್ದಾರೆ.
ಗೋವಿಂದ ದಾವಣಗೆರೆಯಿಂದ ವಾಪಾಸ್ ಬರುವ ವೇಳೆಯಲ್ಲಿ ರಾಮಕ್ಕರ ಕೊಲೆಯಾಗಿದೆ. ಈ ಕೊಲೆಗೆ ಚೇತನ್, ಭರತ್, ರೋಹಿತ್, ಆದರ್ಶ ಕಾರಣವೆಂದು ಗೋವಿಂದರವರು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೇತನ್ ರಾಮಕ್ಕನವರ ಮಗ ಹನುಮಂತಪ್ಪನವರ ಮಗ ಆಗಿದ್ದಾನೆ. ಮೈತುಂಬ ಸಾಲ ಮಾಡಿಕೊಂಡಿದ್ದ ಚೇತನ್ ಅಜ್ಜಿಯ ಬಳಿ ಹಣವಿತ್ತೆಂದು ಗಮನಿಸಿದ್ದನು. ತಂದೆ ಹನುಮಂತಪ್ಪನವರನ್ನ ಸ್ನೇಹಿತರೊಙದಿಗೆ ಎಣ್ಣೆ ಹೊಡೆಯಲು ಕಳುಹಿಸಿ ಅಜ್ಜಿ ಮಲಗಿದ್ದಾನೆ ದಿಂಬಿನಿಂದ ಕೊಲೆ ಮಾಡಿರುವುದಾಗಿ ದೂರಿನಿಂದ ತಿಳಿದು ಬಂದಿದೆ.
ಇದನ್ನೂ ಓದಿ-https://suddilive.in/archives/14907