ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಹಲವು ಭಾಗಗಳಲ್ಲಿ ಜಿಲ್ಲಾ ಪೊಲೀಸರು ಏರಿಯಾ ಡಾಮಿನೇಷನ್ (ವಿಶೇಷ ಗಸ್ತು) ನಡೆಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 71 ಜನರ ವಿರುದ್ಧ ಪಿಟಿ ಕೇಸ್ ದಾಖಲಿಸಿದ್ದಾರೆ.
ನಿನ್ನೆ ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂ ಕೆ ಕೆ ರಸ್ತೆ, ಬರ್ಮಪ್ಪ ನಗರ ಕ್ಲಾರ್ಕ್ ಪೇಟೆ, ಶೇಷಾದ್ರಿ ಪುರಂ, ಕೋಟೆ ರಸ್ತೆ, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆ, ಪದ್ಮ ಟಾಕೀಸ್ ಹತ್ತಿರ
ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬೊಮ್ಮನಕಟ್ಟೆ, ಶಿವಮೂರ್ತಿ ವೃತ್ತ, ತಿಲಕ್ ನಗರ, ರಾಗಿಗುಡ್ಡ ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ಸಂತೆ ಮಾರ್ಕೆಟ್, ಅಂಬರಗೊಪ್ಪ, ಸೊರಬ ವೃತ್ತದಲ್ಲಿ ಆನವಟ್ಟಿ ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಉಪ್ಪಾರ ಕೇರಿ, ಜನ್ನತ್ ನಗರ, ಚೈನಾ ಗೇಟ್ ಕಾರ್ಗಲ್, ಯಡೆಹಳ್ಳಿ ಆನಂದಪುರ,
ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಕುರುವಳ್ಳಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಆಯಾ ಠಾಣಾ ವ್ಯಾಪ್ತಿಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 71 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/15003