ಸುದ್ದಿಲೈವ್/ಶಿವಮೊಗ್ಗ
ಎಲ್ಲರೂ 20 ವರ್ಷದ ಯುವಕರು, ಕೈಹಚ್ಚಿದ್ದು ಮಾತ್ರ ಅಡಿಕೆ ಕಳ್ಳತನಕ್ಕೆ, ವಾಸವಿರುವುದು ಶಿಕಾರಿಪುರದಲ್ಲಿ ಆದರೆ ಕಳ್ಳತನಕ್ಕೆ ಆರಿಸಿಕೊಂಡ ಜಾಗ ಮತ್ರ ಚಿನ್ನದಂತಹ ಊರುಗಳನ್ನ
ಅಡಿಕೆ ಮತ್ತು ಶುಂಠಿ ಸೇರಿ 8 ಕಳವು ಪ್ರಕರಣಗಳು ಸಾಗರ ಮತ್ತು ಸೊರಬದಲ್ಲಿ ದಾಖಲಾಗಿದ್ದವು. ಸಾಗರದಲ್ಲಿ 6 ಅಡಿಕೆ ಕಳವು ಪ್ರಕರಣಗಳು ದಾಖಲಾಗಿದ್ದರೆ, ಶುಂಠಿ ಕಳವು ಪ್ರಕರಣ ಸೇರಿ ಸೊರಬದಲ್ಲಿ 2 ಕಳುವು ಪ್ರಕರಣಗಳು ದಾಖಲಾಗಿದ್ದವು.
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿಕೆ ಅಡಿಕೆ ಎಂದರೆ ನೇರವಾಗಿ ಹಣವಾಗುವಂತದ್ದು, ಕಳವು ಮಾಡುವುದನ್ನೇ ಕುಲಕಸಬು ಮಾಡಿಕೊಳ್ಳಲು ಮುಂದಾಗಿದ್ದ ಐವರು ಯುವಕರನ್ನ ಪತ್ತೆಹಚ್ಚಲು ಸಾಗರದಲ್ಲಿ ಉಪಾಧೀಕ್ಷಕ ಗೋಪಾಲ ನಾಯ್ಕ್ ಟಿರವರ ಮೇಲ್ವಿಚಾರಣೆಯಲ್ಲಿ ತಂಡವೊಂದನ್ನ ರಚಿಸಿದ್ದೆವು.
ಸಾಗರ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಮಹಬಲೇಶ್ವರ ಎಸ್ ಎನ್, ಪಿಎಸ್ ಐ ಮುಂದಿನಮನಿ, ಸಿಬ್ಬಂದಿಗಳಾದ ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್, ರವಿಕುಮಾರ್, ಪ್ರವೀಣ್ ಕುಮಾರ್, ಗುರುಬಸವರಾಜ್, ಗಿರೀಶ್ ಬಾಬು, ಇಂದ್ರೇಶ್, ಗುರುರಾಜ್, ವಿಜಯ ಕುಮಾರ್ ಅವರನ್ನೊಳಗೊಂಡ ತಂಡ ರಚಿಸಿ ಪ್ರಕರಣ ಬೇಧಿಸಿರುವುದಾಗಿ ತಿಳಿಸಿದರು.
ಸಾಗರದಲ್ಲಿ 8 ಪ್ರಕರಣಗಳಲ್ಲಿ 8.19 ಲಕ್ಷ ರೂ. ಮೌಲ್ಯದ ಅಡಿಕೆಗಳನ್ನ ಕಳವು ಮಾಡಲಾಗಿತ್ತು, ಕೃತ್ಯಕ್ಕೆ ಬಳಸಿದ ವಾಹನ ಸೇರಿ
15.19 ಲಕ್ಷ ರೂ. ಮೌಲ್ಯದ ಕಳವಾದ ಅಡಿಕೆ ಮತ್ತು ವಾಹನಗಳನ್ನ ರಿಕವರಿ ಆಗಿದೆ. ಈ ಪ್ರಕರಣದಲ್ಲಿ ಶಿಕಾರಿಪುರದ ತುಕ್ ರಾಜ್, ಹನುಮನತಪ್ಪ, ರಾಕೇಶ್, ಅಭಿಷೇಕ್, ಶಿವಕುಮಾರ್ ಇವರುಗಳು ಗುಂಪು ಮಾಡಿಕೊಂಡು ಅಡಿಕೆ ಗೋಡನ್ ಗಳನ್ನ ಟಾರ್ಗೆಟ್ ಮಾಡಿಕೊಂಡಿದ್ದರು. ಕ್ಯಾಮೆರಾ, ರಸ್ತೆಗಳ ಬಗ್ಗೆ, ಎಸ್ಕೇಪ್ ಆಗುವ ಬಗ್ಗೆ ಪ್ಲಾನ್ ಮಾಡಿ ಅಡಿಕೆ ಕಳವು ಮಾಡಿದ್ದರು.
ಅಧಿಕಾರಿಗಳಿಗೂ ಈ ಪ್ರಕರಣದಲ್ಲಿ ಸಾಕ್ಷಿಗಳನ್ನ ಬಿಡುತ್ತಾ ಹೋದ ಪರಿಣಾಮ ಇವರನ್ನ ಬೇಧಿಸಲು ಅನುಕೂಲವಾಗಿದೆ. ಈ ಯುವಕರು ಎಸ್ ಎಸ್ ಎಲ್ ಸಿಯವರೆಗೆ ಪಾಸ್ ಮತ್ತು ಫೇಲಾದವರೆ ಇದ್ದಾರೆ. ಸೊರಬದಲ್ಲಿ ಶುಂಠಿ ಮಾರಾಟ ಮಾಡಿದ್ದರು. ಅದನ್ನೂ ವಶಕ್ಕೆ ಪಡೆದಿದ್ದೇವೆ. ಈ 8 ಪ್ರಕರಣದಲ್ಲಿ ಈ ಐವರೇ ಆರೋಪಿಯಾಗಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ-https://suddilive.in/archives/15588