Girl in a jacket

ಹಸಿರುಮಕ್ಕಿ ಲಾಂಚ್ ಸ್ಥಗಿತ

ಸುದ್ದಿಲೈವ್/ಸಾಗರ

ಸಾಗರ ಮತ್ತು ಹೊಸನಗರ ತಾಲೂಕು ಸಂಪರ್ಕದ ಕೊಂಡಿಯಾಗಿದ್ದ ಹಸಿರುಮಕ್ಕಿ ಲಾಂಚ್ ನ್ನ ಸ್ಥಗಿತಗೊಳಿಸಲಾಗಿದೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಲಾಂಚ್ ಸೇವೆಯನ್ನು ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ.

ದಡದಲ್ಲಿ ಕೆಸರು ಹೆಚ್ಚಿರುವ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಲಾಂಚ್ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಆದರೂ, ಪ್ರಯಾಣಿಕರು ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ತುಸು ಕಷ್ಟದಿಂದಲೇ ಲಾಂಚ್ ನಡೆಸುತ್ತಿದ್ದರು. ಆದರೆ, ಈಗ ಲಾಂಚ್ ದಡ ಸೇರಲು ಸಾಧ್ಯವಾಗದಷ್ಟು ನೀರಿಲ್ಲದ ಕಾರಣ ಶನಿವಾರದಿಂದ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಹಸಿರುಮಕ್ಕಿ ಲಾಂಚ್‌ ಮೂಲಕ ಪ್ರತಿದಿನ ವಾಹನಗಳು ಸಂಚರಿಸುತ್ತಿದ್ದವು. ಆದರೆ, ಈಗ ಲಾಂಚ್‌ ಸೇವೆ ನಿಲುಗಡೆಗೊಂಡ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಕಡೆಗೆ ಬರುತ್ತಿದ್ದ ಬಸ್‌ಗಳ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.

ಸಾಗರದಿಂದ ನಿಟ್ಟೂರು ಮಾರ್ಗವಾಗಿ ಕುಂದಾಪುರ ತಲುಪಲು ಹಸಿರುಮಕ್ಕಿ ಲಾಂಚ್ ಮೂಲಕ ಸಾಗುವುದು ಅತಿ ಸಮೀಪದ ಮಾರ್ಗವಾಗಿತ್ತು. ಆದರೆ, ಲಾಂಚ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಸುಮಾರು 40 ಕಿ.ಮೀ. ಬಳಸಿ ಹೊಸನಗರ ಮಾರ್ಗವಾಗಿ ತೆರಳುವ ಅನಿವಾರ್ಯತೆ ಎದುರಾಗಿದೆ. ಕಳೆದ ವರ್ಷ ಆರಂಭಗೊಂಡ ಸೇತುವೆ ನಿರ್ಮಾಣ ಕಾಮಗಾರಿ ಸಹ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ.

ದಕ್ಷಿಣ ಭಾರತ ಡ್ಯಾಂಗಳಲ್ಲಿ ಈಗ ಶೇ.15 ಮಾತ್ರ ನೀರು: 10 ವರ್ಷದ ಕನಿಷ್ಠ ಇನ್ನು ನೀರಿನ ಆಳದ ಕೆಸರಿನಲ್ಲಿದ್ದ ದೊಡ್ಡ ದೊಡ್ಡ ಮರದ ಬೃಹತ್‌ ದಿಮ್ಮಿಗಳು ಕೆಸರಿನಿಂದ ಮೇಲೆ ಕಾಣಿಸುತ್ತಿವೆ. ಇವು ಲಾಂಚ್ ಸಂಚಾರಕ್ಕೆ ತೊಂದರೆಯಾಗಿದ್ದು, ಲಾಂಚ್‌ಗೆ ಹಾನಿ ಉಂಟುಮಾಡಲಿವೆ.

ಜೊತೆಗೆ, ಲಾಂಚ್ ಸಾಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಹಿನ್ನೆಲೆ ಲಾಂಚ್‌ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್‌ ಸೇವೆ ಇರುವುದಿಲ್ಲ ಎಂದು ಲಾಂಚ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕಳೆದ ವರ್ಷವೂ ಹಸಿರು ಮಕ್ಕಿ ಲಾಂಚ್ ನ್ನ ನೀರಿಲ್ಲದ ಕಾರಣ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ-https://suddilive.in/archives/14645

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು