Girl in a jacket

ಬಿಜೆಪಿಯ ಹಿರಿಯ ತಲೆಗಳು ಮೂಲೆಗುಂಪು? ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾನ-ಬಂಡಾಯ ಏಳುವರೆ?

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಡಾ.ಧನಂಜಯ್ ಸರ್ಜಿಗೆ ಟಿಕೆಟ್ ಘೋಷಿಸಿದೆ. ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಧುರೀಣ ಹಾಗೂ ಮತ್ತೀರ್ವ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಮತಗಳನ್ನ ಬಿಜೆಪಿ ನಿರ್ಲಕ್ಷಿಸುತ್ತಿದೆ ಎಂದು ರಘುಪತಿ ಭಟ್ಟರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 1994 ರಿಂದ ಬಿಜೆಪಿಯಲ್ಲಿ ಸಕ್ರಿಯವಾಗಿರುವ ನಾನು ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಮೊನ್ನೆ ನಡೆದ ಸಂಸತ್ ಚುನಾವಣೆಗೆ ವೀಕ್ಷಕನಾಗಿ 40 ದಿನ ಜವಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನನಗೆ ಮಾಹಿತಿ ನೀಡದೆ ಪಕ್ಷ ಬೇರೆಯ ಅಭ್ಯರ್ಥಿಯನ್ನ ಘೋಷಿಸಿದ ಪರಿಣಾಮ ವಿಚಲಿತನಾಗಿದ್ದೆ.

ನಂತರ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಟಿಕೇಟ್ ಕೊಡಿಸುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದರು. ಇದರಿಂದ ಪದವೀಧರ ಕ್ಷೇತ್ರಕ್ಕೆ ಅತಿ ಹೆಚ್ಚು ಓಡಾಡಿ ನೋಂದಣಿ ಮಾಡಿಸಿದ್ದೇನೆ. ಈಗ ಟಿಕೇಟ್ ಘೋಷಣೆ ಆಗಿದೆ. ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಶಿಕ್ಷಕರ ಕ್ಷೇತ್ರಕ್ಕೆ ನಿಡದೆ ಮಾಡಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವವರು ಯಾರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರಿಂದ ಪಕ್ಷದ ಹಿರಿಯರನ್ನ ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪ, ಒಂದೇ ಕಮ್ಯೂನಿಟಿಗೆ ತೃಪ್ತಿಪಡಿಸಲು ಬಿಜೆಪಿ ಮುಂದಾಗಿದೆ ಹಾಗೂ ಒಬಿಸಿ ಮತ್ತು ಇತರೆ ವರ್ಗಗಳನ್ನ ಬಿಜೆಪಿ ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಪಕ್ಷದ ಮೇಲೆ ಸಿಡಿಲು ಬಡಿದಂತೆ ಎರಗಿದೆ. ಲೋಕಸಭಾ ಚುನಾವಣೆಯಲ್ಲಿ ಮುತ್ಸದ್ಧಿ ಈಶ್ವರಪ್ಪ, ಹಾಗೂ ಎಂಎಲ್ ಸಿ ಚುನಾವಣೆಯಲ್ಲಿ ರಘುಪತಿ ಭಟ್ಟರ ಈ ಅಸಮಾಧಾನ ಕಾರ್ಯಕರ್ತರಿಗೆ ಎಚ್ಚರಿಕೆ ಗಂಟೆಯಾಗಲಿದೆಯಾ ಎಂದು ಕಾದು ನೋಡಬೇಕಿದೆ.

ಪಕ್ಷ ತೆಗೆದುಕೊಂಡಿರುವ ನಿಲುವಿನಿಂದ ವಿಚಲಿತನಾಗಿದ್ದೇನೆ. ಇದು ಪಕ್ಷದ ಸಾಮಾನ್ಯ ಕಾರ್ಯಕರ್ತ, ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ, ಚರ್ಚಿಸೋಣ ಮತ್ತು ನಿಮ್ಮ ಸಲಹೆಯ ನಿರೀಕ್ಷೆಯಲ್ಲಿ ಎಂದು ಬರೆದು ಮಾಜಿ ಶಾಸಕ ರಘುಪತಿ ಭಟ್ ಫೇಸ್ ಬುಕ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರಕ್ಕೆ 6 ಜಿಲ್ಲೆಗಳು ಸೇರಲಿದೆ. ಶಿವಮೊಗ್ಗ, ಚಿಕ್ಕಮಗಳೂರು ದಾವಣಗೆರೆಯ ಹೊನ್ನಾಳಿ ಮತ್ತು ಚನ್ನಗಿರಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆ ಈ ನೈರುತ್ಯ ಪದವೀಧರ ಕ್ಷೇತ್ರವನ್ನ ಒಳಗೊಂಡಿದೆ. ಇದರಿಂದ ಮತ್ತೊಂದು ಬಿಜೆಪಿಯಲ್ಲಿ ಮತ್ತೊಂದು ಬಂಡಾಯ ಏಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಡಾ.ಧನಂಜಯ ಸರ್ಜಿಗೆ ಟಿಕೇಟ್ ಘೋಷಿಸಿದ್ದಕ್ಕೆ ವಿಕಾಸ ಪುತ್ತೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/14648

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು