Girl in a jacket

ಎರಡು ವರ್ಷದಿಂದ ನೆಗುದಿಗೆ ಬಿದ್ದ ಶಾಲಾ ಕಟ್ಟಡದ ದುರಸ್ತಿಕಾರ್ಯ

ಸುದ್ದಿಲೈವ್/ಶಿವಮೊಗ್ಗ

ಶಿಕ್ಷಣ ಕ್ಷೇತ್ರಗಳು ಖಾಸಗಿಗೆ ಮಾರಾಟವಾದಾಗಿನಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ನೋಂದಣಿಯೇ ಕಡಿಮೆಯಾಗಿದೆ. ಅದರಲ್ಲೂ ಇಲ್ಲೊಂದು ಸರ್ಕಾರಿ ಶಾಲೆಯ ದುರಸ್ಥಿ ಕಾರ್ಯಕೈಗೊಂಡು ಎರಡು ವರ್ಷಗಳೇ ಕಳೆದಿದೆ. ದುರಸ್ತಿ ಅರ್ಧದಲ್ಲಿಯೇ ಸ್ಥಗಿತಗೊಂಡಿದೆ.‌ ಅಧಿಕಾರಿಗಳಿಗೆ ಇದರ ದರ್ದು ಎನಿಸುತ್ತಿಲ್ಲ. ಆದರೆ ಗ್ರಾಮಸ್ಥರಿಗೆ ಇದು ಅವಶ್ಯಕತೆ ಇದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿವಮೊಗ್ಗ 28 ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಜಿಗಿದ ಪರಿಣಾಮ ಇನ್ನು ಈ ಕ್ಷೇತ್ರದ ಸಂಬಂಧಪಟ್ಟ ಅಧಿಕಾರಿಗಳಿಗೆ ನೆಲ ಕಾಣಿಸದಂತೆ ಭಾಸವಾಗುತ್ತಿರಬೇಕು.

ಇನ್ನು ಹೊಸ ಉತ್ಸಾಹದಲ್ಲಿರುವ ಶಿಕ್ಷಣ ಸಚಿವರಿಗೆ ಈ ಸಾಧನೆಯಿಂದಾಗಿ ಹೊಸ ಸಮಸ್ಯೆಗಳನ್ನ ಕೇಳುವ ಸೌಜನ್ಯವಿರುವ ಹಾಗೆ ಕಾಣಿಸುತ್ತಿಲ್ಲ. ಇನ್ನು ಒಂದು ವೇಳೆ ಅವರ ಸಹೋದರಿ ಗೆದ್ದು ಬಂದರೆ ಅವರು ಸಹ ನೆಲದ ಮೇಲೆ ನಡೆಯುವ ಸಾಧ್ಯತೆಗಳು ಕಡಿಮೆ ಇರುವಙತೆ ಭಾಸವಾಗುತ್ತಿದೆ.

ಇಷ್ಟು ತೀಕ್ಷಣವಾಗಿ ಬರೆಯಲು ಒಂದೇ ಕಾರಣ. ಸರ್ಕಾರಿ ಶಾಲೆಯೊಂದು ದುರಸ್ತಿಗೊಂಡು ಸರಿಸುಮಾರು 2 ವರ್ಷಗಳು ಕಳೆದಿವೆ. 2 ವರ್ಷ ಕಳೆದರೂ ಶಾಲೆ ದುರಸ್ಥಿ ನಡೆಸಲು ಸಾಧ್ಯವಾಗಲಿಲ್ಲ. ಎರಡು ವರ್ಷದಿಂದ ಶಿಕ್ಷಣ ಇಲಾಖೆಯಿಂದ ಕೆಲಸಗಳು ಆಗಲಿಲ್ಲ ಎಂದರೆ ಇಲಾಖೆಯ ಅಗತ್ಯತೆ ಸಾರ್ವಜನಿಕರಿಗೆ ಯಾಕೆ ಬೇಕು?

ಖಾಸಗಿಯವರು ತಮ್ಮ ಶಿಕ್ಷಣ ಸಂಸ್ಥೆಗಳನ್ನ ಲಾಭದಾಯಕವಾಗಿ ನಡೆಸಿಕೊಂಡು ಹೋಗಲು ಸಾಧ್ಯವಿದೆ ಎಂಬುದಾದರೆ, ಜನರ ತೆರಿಗೆಯಿಂದ ನಡೆಸುವ ಸರ್ಕಾರಿ ಶಾಲೆಗಳಿಗೆ ಯಾಕೆ ಸಾಧ್ಯವಿಲ್ಲ. ಇವುಗಳನ್ನ ಪ್ರಶ್ನಿಸಿದರೆ ಮಾಧ್ಯಮಗಳ ಮೇಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಂಡೆತ್ತಿ ಬರುವ ಅಪಾಯವೂ ಇದೆ.

ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಗೆ ಸಾಗಿವೆ. ಇಂತಹ ಫೋಟೊಗಳು ಎಲ್ಲರ ಬಳಿ ಲೆಕ್ಕವಿಲ್ಲದಷ್ಟು ಇರಬಹುದು. ಆದರೆ ಭದ್ರಾವತಿ ತಾಲ್ಲೂಕು ಕುರುಬರ ವಿಠಲಪುರದಲ್ಲಿ ಸರ್ಕಾರಿ ಶಾಲೆ ಬಿದ್ದು 2ವರ್ಷವಾದರೂ, ಯಾವುದೇ ಪುನರ್ ನಿರ್ಮಾಣ ಕೈಗೊಂಡಿಲ್ಲ. ಎಷ್ಟೇ ಮನವಿ ಕೊಟ್ಟರು ಡಿಡಿಪಿಐ ಮತ್ತು ಬಿಇಒಗಳು ತಿರುಗಿ ನೋಡುತ್ತಿಲ್ಲ ಎಂದು ಗ್ರಾಮಸ್ಥರು ದೂರುತಿದ್ದಾರೆ. ಸರಿ ಮಾಡುವ ಮನಸ್ಸಿದ್ದರೆ ಅಧಿಕಾರಿಗಳು ಇರಲಿ ಇಲ್ಲವಾದಲ್ಲಿ ಅವರ‌ ಅಗತ್ಯತೆಯೂ ಸಾರ್ವಜನಿಕರಿಗೆ ಬೇಕಿಲ್ಲ!

ಒಂದು ವೇಳೆ ಸರ್ಕಾರದಲ್ಲಿ ಹಣವಿಲ್ಲವೆಂದಾದರೆ ಲಿಖಿತವಾಗಿಯೇ ನೀಡಲಿ ಶಾಲೆಗಳ ದುರಸ್ತಿಗೆ ಹಣವಿಲ್ಲವೆಂದು ಗ್ರಾನಸ್ಥರೇ ಮುಂದು ಬಂದು ಕಟ್ಟುತ್ತಾರೆ.

ಇದನ್ನೂ ಓದಿ-https://suddilive.in/archives/14758

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು