ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರಕ್ಕೆ ರಾಹುಲ್ ಗಾಂಧಿ ಬಂದಿದ್ದು ಬಹಳ ಸಂತೋಷ, ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಕಾಂಗ್ರೆಸ್ ಸೋತಿದೆ ಎಂದು ಮಾಜಿ ಡಿಸಿಎ ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಬರಬೇಕು ಎಂಬ ಆಸೆ ನನಗೆ ಇತ್ತು. ರಾಹುಲ್ ಗಾಂಧಿ ಬಂದಿದ್ದು ಗೀತಾ ಸೋಲಲು ಕಾರಣವಾಯ್ತು. ನಾನು ಅತಿ ಹೆಚ್ಚು ಅಂತರದಲ್ಲಿ ಗೆಲ್ಲಲ್ಲು ಕಾರಣವಾಯ್ತು. ಬಿಜೆಪಿ ಅಂಬೇಡ್ಕರ್ ಅವರ ಸಂವಿಧಾನ ಬದಲಾಯಿಸುವ ಕೆಲಸ ಎಂದೂ ಮಾಡಲ್ಲ ಎಂದರು.
ಬ್ಯಾಕ್ ಲಾಕ್ ಹುದ್ದೆ ಭರ್ತಿ ಮಾಡಲು ಅಟಲ್ ಜೀ ನಿರ್ಧರಿಸಿದ್ದರು. ಕೆಲವರು ಬ್ಯಾಕ್ ಲಾಕ್ ಹುದ್ದೆ ಭರ್ತಿ ಮಾಡಬಾರದು ಅಂತಾ ಸುಪ್ರೀಂ ಕೋರ್ಟ್ ಗೆ ಹೋದರು. ಸಂವಿಧಾನ ತಿದ್ದುಪಡಿ ಮಾಡಿ ಬ್ಯಾಕ್ ಲಾಕ್ ಹುದ್ದೆ ಭರ್ತಿ ಮಾಡಿದರು. ಎಲ್ಲಾ ಸಮಾಜ ನನಗೆ ನಿರೀಕ್ಷೆ ಮೀರಿ ಬೆಂಬಲ ಕೊಡ್ತಿದ್ದಾರೆ ಎಂದರು.
ಈಡಿಗ ಸಮಾಜದ ಕಾರ್ಯಕರ್ತರು, ಲಿಂಗಾಯ್ತರು ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಜೊತೆ ಇದ್ದಾರೆ. ಎರಡು ಲಕ್ಷ ಅಂತರದಲ್ಲಿ ನಾನು ಗೆಲ್ಲುತ್ತೇನೆ. ಈಶ್ವರಪ್ಪ ಅವರು ಶಿವಮೊಗ್ಗದ ಅಭಿವೃದ್ಧಿಗೆ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಈಶ್ವರಪ್ಪ ಅವರ ಪುತ್ರನಿಗೆ ಟಿಕೇಟ್ ಸಿಕ್ಕಿಲ್ಲ ಅಂತಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆನಾವು ಬೇರೆಯವರ ಒಡಕಿನ ಲಾಭ ಪಡೆಯಲು ಹೋಗುವುದಿಲ್ಲ ಎಂದರು.
ಜನರು ಗ್ಯಾರಂಟಿ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ. ಈ ಬಾರಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ.
ಇದನ್ನೂ ಓದಿ-https://suddilive.in/archives/14103