ಸುದ್ದಿಲೈವ್/ಶಿವಮೊಗ್ಗ
ಮನೆಕಟ್ಟಲು ಮಾಡಿದ್ದ ಬ್ಯಾಂಕ್ ಸಾಲ ಮತ್ತು ಕೈಗಡ ಸಾಲ ತೀರಿಸಲು ಸಾಧ್ಯವಾಗದೆ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಗೋಂಧಿ ಚಟ್ನಹಳ್ಳಿಯ ನಿವಾಸಿ ಶೋಭಾ ಎಂಬುವರ ಪತಿ ರಂಗನಾಥರವರು ಈಗ್ಗೆ 02 ವರ್ಷಗಳ ಹಿಂದೆ ಗ್ರಾಮದಲ್ಲಿ ಮನೆಯನ್ನು ಕಟ್ಟಿದ್ದರು. ಮನೆ ಕಟ್ಟಲು ಬ್ಯಾಂಕಿನಲ್ಲಿ ಸುಮಾರು 09 ಲಕ್ಷರೂ ಲೋನ್ ತೆಗೆದುಕೊಂಡಿದ್ದು ಬ್ಯಾಂಕ್ ಲೋನ್ ಸಾಕಾಗದೇ ತಮ್ಮ ಗ್ರಾಮದವರಿಂದ 14,19,700 ರೂಗಳನ್ನು 3 % ಬಡ್ಡಿಗೆ ಸಾಲವನ್ನು ಪಡೆದುಕೊಂಡಿದ್ದರು.
ಹೊನ್ನಾಳಿ ರಸ್ತೆಯಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ದಂಪತಿಗಳಿಗೆ ಮನೆಯನ್ನು ಕಟ್ಟಿದ ನಂತರದಲ್ಲಿ ವ್ಯಾಪಾರ ಕುಂಟಿತವಾಗಿದೆ. ಬ್ಯಾಂಕಿನ ಸಾಲ ಹಾಗೂ ಗ್ರಾಮದವರ ಬಳಿ ಮಾಡಿದ್ದ ಸಾಲದ ಹಣವನ್ನು ಮತ್ತು ಬಡ್ಡಿಯನ್ನು ತೀರಿಸಲಾಗದೇ ಇದ್ದುದರಿಂದ ಪತಿಗೆ ಸಾಲಗಾರರ ಕಾಟ ಹೆಚ್ಚಾಗಿದೆ.
ಮನೆ ಬಳಿ ಬಂದು ಅವಾಚ್ಯವಾಗಿ ಬೈದು ಗಲಾಟೆ ಮಾಡುತ್ತಿದ್ದರು. ಕೆಲವೊಮ್ಮೆ ಪತಿ ಮನೆಯಲಿ.. ಇಲ್ಲದೇ ಇದ್ದಾಗ ಮನೆಯ ಹತ್ತಿರ ಬಂದು ಹೆಂಡತಿ ಶೋಭರವರಿಗೆ ಸಾಲದ ಹಣವನ್ನು ಬಡ್ಡಿಯನ್ನು ನೀಡುವಂತೆ ಕೇಳಿ ಬೈದು ಗಲಾಟೆ ಮಾಡುತ್ತಿದ್ದರು ಎಂದು ರಂಗನಾಥ್ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನು ಮನಸ್ಸಿಗೆ ಹಚ್ಚಿಕೊಂಡು ಪತ್ನಿ ಶೋಭರವರು ಕೊರಗುತ್ತಿದ್ದರು. ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಹೊನ್ನಾಳಿ ರಸ್ತೆಯ ಪಕ್ಕದಲ್ಲಿ. ಪಾನಿಪುರಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಮನೆಯಲ್ಲಿ ಕೆಲಸವಿದೆಯೆಂದು ಹೇಳಿ ಮನೆಗೆ ಹೋದವರು ವಾಪಾಸಾಗಿರಲಿಲ್ಲ. ಪಾನಿಪುರಿ ವ್ಯಾಪಾರ ಮುಗಿಸಿಕೊಂಡು ಅಂಗಡಿ ಬಂದ್ ಮಾಡಿಕೊಂಡು ರಾತ್ರಿ 10:30 ಪಿ.ಎಂ. ಸಮಯಕ್ಕೆ ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಮನೆಯ ಒಳಗೆ ಹೋಗಿ ನೋಡಿದಾಗ ಶೋಭರವರು ಮನೆಯ ಬೆಡ್ ರೂಮಿನ ಪ್ಯಾನಿಗೆ ಸೀರೆಯಿಂದ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೂಡಲೇ ಮೆಗ್ಗಾನ್ ಗೆ ಕರೆದುಕೊಂಡು ಹೋದಾಗ ಶೋಭಾರ ಸಾವನ್ನ ವೈದ್ಯರು ದೃಢಪಡಿಸಿದ್ದಾರೆ. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/14779