ಸುದ್ದಿಲೈವ್/ಶಿವಮೊಗ್ಗ
ನಾಳೆ ಮೈಸೂರಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡು ಜವಬ್ದಾರಿ ಇದೆ. ಒತ್ತಡದ ಚುನಾವಣೆಯೂ ಆಗಿದೆ. ಪರಿಶೀಲನೆ ಮತ್ತು ಹಿಂಪಡೆಯಲು ಮೇ.20 ಕ್ಕೆ ನಡೆಯಲಿದೆ. 5½ ಜಿಲ್ಲೆಗಳು, 84, ಸಾವಿರ ಪದವೀಧರ 24 ಸಾವಿರ ಶಿಕ್ಷಕರ ಕ್ಷೇತ್ರವಾಗಿದೆ.
ನಮಗೆ ಒಳ್ಳೆಯ ವಾತಾವರಣವಿದೆ. ಸರ್ಕಾರಿ ನೌಕರರು ಉತ್ತಮ ಸಂಪರ್ಕಹೊಂದಿರುವೆ. ನಾನು ಕಳೆದ ಬಾರಿ ನೌಕರರ ಪರವಾಗಿ ನಿಂತಿದ್ದನ್ನ ನೆನಪಿಸಿಕೊಳ್ತಾರೆ. ನಿವೃತ್ತಿ ವೇತನದ ಅಭದ್ರತೆ ಹೆಚ್ಚಾಗಿತ್ತು. ಅದನ್ನ ಸದನದಲ್ಲಿ ಹೋರಾಡಿರುವುದನ್ನನೆನಪಿಸಿಕೊಳ್ತಾರೆ. ಔರಾದ್ಕರ್ ವರದಿ ಬಗ್ಗೆ ಮಾತನಾಡಿರುವುದರಿಂದ ಇದು ಶ್ರೀರಕ್ಷೆಯಾಗಲಿದೆ.
ನಮ್ಮ ಸರ್ಕಾರವಿದ್ದಾಗ ಅತಿಥಿ ಉಪನ್ಯಾಸಕರ ಪರ ಹೋರಾಟ ಮಾಡಿದ್ದೇನೆ. ನೌಕರರ ಭದ್ರತೆ ನೀಡಬೇಕಾಗುತ್ತದೆ. ನಾಳೆ ಯಾರು ಯಾರು ಸ್ಪರ್ಧೆ ಮಾಡ್ತಾರೆ ಗೊತ್ತಿಲ್ಲ. ಆದರೆ ಯಾರು ಸ್ಪರ್ಧೆ ಮಾಡ್ತಾರೆ ಅವರು ನನಗೆ ಸಮಾನರಾಗಲ್ಲ. ಒಪಿಎಸ್ ಜಾರಿಯಾಗುವಂತೆ ಮಾಡೇ ಮಾಡುವೆ. ಎಂದರು.
7 ನೇ ಹಣಕಾಸಿ ಯೋಜನೆ ವರದಿ ಬಂದಿದೆ. ಜಾರಿಯಾಗಬೇಕಿದೆ. ಪೊಲೀಸ್ ಇಲಾಖೆಯ ಅಂತರಿಕಶೋಷಣೆ ಕುರಿತು ರಕ್ಷಣೆ, ತೋಗಾರಿಜೆ, ಕಂದಾಯ ಸೇರಿದಂತೆ ಹಲವಾರು ಇಲಾಖೆಗೆ ಅನುಕೂಲವಾಗುವಂತೆ ಮಾಡುವುದಾಗಿ ಹೇಳಿದರು.
ಕಳೆದ ಬಾರಿ 24 ಸಾವಿರ ಮತಗಳಿಂದ ಗೆದ್ದಿರುವೆ. ಪದವೀಧರ ಆಗಿದ್ದು ಶೈಕ್ಷಣಿಕ ಸಾಲ ಮರು ಪಾವತಿಗೆ ನೋಟೀಸ್ ಮತ್ತು ಹರಾಜು ಮಾಡುತ್ತಿದ್ದಾರೆ. ಸರ್ಕಾರ ಯಾವುದೋ ಯಾವುದೋ ಸಾಲ ಮನ್ನ ಮಾಡುವ ಸರ್ಕಾರ ಬಡ್ಡಿ ರಹಿತ ಸಾಲ ಮನ್ನ ಮಾಡುವ ಪ್ರಯತ್ನ ಮಾಡುವೆ. ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಠಾಚಾರ ಗೊಙದಲಗಳ ನಡುವೆ ನೌಕರರ ರಕ್ಷಣೆ ನನ್ನಮುಖ್ಯ ಆಧ್ಯತೆ ಎಂದರು.
ಸಮಯ ಕಡಿನೆ ಇದೆ. ಮತದಾರರನ್ನ ಭೇಟಿ ಮಾಡುವ ಪ್ರಯತ್ನ ಮಾಡುವೆ. ಒಂದು ವೇಳೆ ಸಾಧ್ಯವಾಗದಿದ್ದರೆ ಕ್ಷಮಿಸಿ ನನಗೆ ಮತಹಾಕುವಂತೆ ಮನವಿ ಮಾಡಿಕೊಂಡ ಆಯನೂರು, ನೌಕರರು ಅಲ್ಲದ ಪದವೀಧರ ಸಮುಹದಲ್ಲಿ ಗೊಂದಲ ಇವರಬಹುದು. ಆದರೆ ನೌಕರರು ತಮ್ಮ ಸಮಸ್ಯೆಗೆ ಬಗೆಹರಿಸಲು ಈ ಕ್ಷೇತ್ರದಲ್ಲಿ ಮತಹಾಕಬೇಕಿದೆ ಎಂದರು.
ಎರಡನೇ ಹಂತದ ಲೋಕಸಭಾ ಚುನಾವಣೆ ಘೋಷಣೆ ಆದ ವೇಳೆ ನನ್ನಹೆಸರು ನೈರುತ್ಯ ಪದವೀಧರ ಕ್ಷೇತ್ರಕ್ಕೆ ಘೋಷಣೆಯಾಗಿತ್ತು. ಅವರು ಟಿಕೇಟ್ ಗೆ ಪ್ರಯತ್ನಸುತ್ತಿದ್ದ ವೇಳೆ ನಾನು ಹೋಗಿ ಸಹಕಾರ ಕೊಡಿ ಎಂಬುದನ್ನ ಹೇಳುವುದು ಕಷ್ಟವಾಗುತ್ತದೆ. ನಂತರ ನಾನು ದಿನೇಶ್ ಜೊತೆ ಮಾತನಾಡಿರುವೆ. ಈಗಲೂ ವಿಶ್ವಾಸವಿದೆ. ಅವರು ಪಕ್ಷ ನಿಷ್ಠರಾಗಿದ್ದಾರೆ. ಹಾಗಾಗಿ ಅವರು ಪಕ್ಷಕ್ಕೆ ವಾಪಾಸಾಗುತ್ತಾರೆ ಎಂದರು.
ಅವರು ಸ್ಪರ್ಧೆ ಮಾಡೊಲ್ಲ. ಸ್ಪರ್ಧೆ ಮಾಡಿದರೆ ನಾವೆಲ್ಲಾ ಅಸಾಹಯಕರು ಸ್ಪರ್ಧೆ ಎದುರಿಸಬೇಕಿದೆ. ರಘುಪತಿ ಭಟ್ಟರು ಈಗ ಅರಿವಾಗಿದೆ. ಸ್ಪರ್ಧಿಸುತ್ತಿದ್ದಾರೆ. ಇದನ್ನ ನಾನು ಪಕ್ಷದಲ್ಲಿದ್ದಾಗ ಅನುಭವಿಸಿರುವೆ ಎಂದರು.
ಭ್ರಷ್ಠಾಚಾರ ಬಿಜೆಪಿಯಲ್ಲಿ ತಾಂಡವ ಆಡ್ತಾಇದೆ. ನಾನು ಪಕ್ಷ ಬಿಟ್ಟು ಬರುವಾಗ ರಘುಪತಿ ಭಟ್ ಬೇಡ ಮಂಜಣ್ಣಎಂದು ಹೇಳ್ತ ಇದ್ದರು. ಆದರೆ ಈಗ ಅವರು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ.ಅವರ ಸ್ಪರ್ಧೆಗೆ ಈಶ್ವರಪ್ಪನವರು ರಘುಪತಿ ಭಟ್ ರಿಗೆ ಸಹಾಯಮಾಡಬಹುದು. ಅವರು ಸಹ ಬಿಕಾಂ ಪದವೀಧರರಾಗಿರುವುದರಿಂದ ಮತ ಕೇಳುವೆ.
ದಿನೇಶ್ ಮತ್ತು ಡಾ.ಸರ್ಜಿ ಅವರ ಮತವನ್ನು ಕೇಳುವುದಾಗಿ ಹೇಳಿದರು.
ಇದನ್ನೂ ಓದಿ-https://suddilive.in/archives/14783