Girl in a jacket

ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಮನೆಗೆ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಚಂದ್ರಶೇಖರ ಮನೆಗೆ ಭೇಟಿಯಾದ ಹಾಲಿ ಪರಿಷತ್ ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮೃತ ಚಂದ್ರಶೇಖರ್ ಅವರ ಪತ್ನಿಗೆ ಸಾಂತ್ವಾನ‌ ಹೇಳಿದ್ದಾರೆ.

ಈ ವೇಳೆ ಮೃತರ ಪತ್ನಿ ಕವಿತ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಚಂದ್ರಶೇಖರ್ ಅವರ ಮೇಲೆ ನಮ್ಮ ಕುಟುಂಬ ಅವಲಂಭಿತವಾಗಿತ್ತು. ನಾನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರೂ ಶುಲ್ಕ ಬೇಕಿದೆ ಆದರೆ ಮನೆಯವರನ್ನ ಕಳೆದುಕೊಂಡು ಹಣ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿ ಕೊಂಡಿದ್ದಾರೆ.

ನಂತರ ಮಾಧ್ಯಮಗಳಿಗೆ ಮಾತನಾಡಿದ ಹಾಲಿ ಪರಿಷತ್ ನಾಯಕ ಶ್ರೀನಿವಾಸ ಪೂಜಾರಿ ಪರಿಶಿಷ್ಟ ಜಾತಿ ಅವರ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತದೆ. ಬರಗಾಲದಲ್ಲಿ ಹಣ ಬಿಡುಗಡೆ ಆಗೋದೆ ಕಷ್ಟ ಆದರೆ 187 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 85 ಕೋಟಿ ರೂ. ಹಣ ಅವ್ಯವಹಾರ ನಡೆದಿದೆ.

ಸರ್ಕಾರ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಅಮಾನತ್ತು ಮಾಡಿ ಸಚಿವರ ರಾಜೀನಾಮೆ ಪಡೆಯಬೇಕಿತ್ತು. ಆದರೆ ಪ್ರಕರಣವನ್ನ ಸಿಐಡಿ ತನಿಖೆಗೆ ಹಸ್ತಾಂತರಿಸಿದೆ. ಸಿಐಡಿಗೆ ಹಸ್ತಾಂತರಿಸುವ ಮುನ್ನ ಸಚಿವ ನಾಗೇಂದ್ರರ ರಾಜೀನಾಮೆ ಪಡೆದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಮೊದಲು ನಾನು ಸಿಬಿಐಗೆ ವಹಿಸಿ ಎಂದಿದ್ದೆ. ಆದರೆ ನಿವೃತ್ತ ನ್ಯಾಯಾಧೀಶರ ತನಿಖೆಗೆ ವಹಿಸಬೇಕು. ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗೆ ತನಿಖೆ ವಹಿಸಿದರೆ ನ್ಯಾಯ ಸಿಗೊದಿಲ್ಲ. ಹಾಗಾಗಿ ತನಿಖೆಯನ್ನ‌ಬೇರೆಯವರಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪೆನ್ ಡ್ರೈವ್ ಸಿಕ್ಕಿದೆ ಅದರಲ್ಲಿ ಏನಿದೆ ಎಂದು ಸ್ಪಷ್ಟಪಡಿಸಿ ನಂತರ ವಶಕ್ತೆ ಪಡೆಯಬೇಕಿತ್ತು. ಅದು ಆಗಿಲ್ಲ. ಸಿದ್ದರಾಮಯ್ಯನವರು ನಾಗೇಂದ್ರ ಅವರ ರಾಜೀನಾಮೆ ಪಡೆಯದಿದ್ದರೆ, ಈಶ್ವರಪ್ಪನವರ ಪ್ರಕರಣದಲ್ಲಿ ಇಂದು ನ್ಯಾಯ ಮತ್ತು ಚಂದ್ರಶೇಖರ್ ಆತ್ಮಹತ್ಯೆಯಲ್ಲಿ ನಾಗೇಂದ್ರ ಅವರಿಗೆ ಒಂದು ನ್ಯಾಯವಾಗಲಿದೆ ಎಂದು ಈಶ್ವರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.

ಈ ಪ್ರಕರವನ್ನ ಕಟ್ಟಿಹಾಕಲು ಸದನದ ಒಳಗೆ ಹಾಗೂ ಸದನದ ಹೊರಗೆ ಬಿಜೆಪಿ ಹೋರಾಡಲು ನಿರ್ಧರಿಸಿದೆ. ಈವೇಳೆ ವಿಪಕ್ಷನಾಯಕರಿಗೆ ಶಾಸಕ ಚೆನ್ನಬಸಪ್ಪ ಸಾಥ್ ನೀಡಿದ್ದರು.

ಇದನ್ನೂ ಓದಿ-https://suddilive.in/archives/15699

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು