ಸುದ್ದಿಲೈವ್/ಶಿವಮೊಗ್ಗ
ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಕೇಸ್ ಪ್ರಕರಣದಲ್ಲಿ ಇಂದು ಸಹ ಶಿವಮೊಗ್ಗದಲ್ಲಿರುವ ಚಂದ್ರಶೇಖರ ನಿವಾಸಕ್ಕೆ ಸಿಐಡಿ ತಂಡ ಭೇಟಿ ನೀಡಿದೆ. ಮೃತ ಚಂದ್ರಶೇಖರ ಪತ್ನಿ ಕವಿತಾ ಮತ್ತು ಕುಟುಂಬ ಸದಸ್ಯರ ವಿಚಾರಣೆ ನಡೆಸಿದೆ.
ನಿನ್ನೆ ಕೂಡಾ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದ ಸಿಐಡಿ ತಂಡ, ಎರಡನೆ ದಿನ ಕೂಡಾ ತನಿಖೆ ಚುರುಕುಗೊಳಿಸಿದೆ. ನಿನ್ನೆ. ಮನೆಯಲ್ಲಿ ಪೆನ್ ಡ್ರೈವ್ ಮತ್ತು ಡೆತ್ ನೋಟ್ ಹಾಗೂ ಡೆತ್ ನೋಟ್ ಬರೆದ ಪೆನ್ ಸಿಜ್ ಮಾಡಿಕೊಂಡಿತ್ತು.
ಚಂದ್ರಶೇಖರ ಆತ್ಮಹತ್ಯೆ ಗೆ ಸಿಐಡಿ ನಿಖರ ಕಾರಣ ಹುಡುಕುತ್ತಿದೆ. ಸುಮಾರು ಮೂರು ಗಂಟೆಗೂ ಅಧಿಕ ಹೊತ್ತು ತನಿಖೆ ಕೈಗೊಂಡಿದೆ. ಸಿಐಡಿ ಡಿವೈಎಸ್ಪಿ ಮೊಹಮದ್ ರಫಿ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿ ಇಂದೇ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.
ಇದನ್ನೂ ಓದಿ-https://suddilive.in/archives/15704
Tags:
ಕ್ರೈಂ ನ್ಯೂಸ್