ಸುದ್ದಿಲೈವ್/ಶಿವಮೊಗ್ಗ
ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಕಾರು ಬಾಡಿಗೆ ಪಡೆದ 29 ವರ್ಷದ ಯುವಕ ಬೀಡಾ ಅಂಗಡಿ ಎದುರು ಕಾರು ನಿಲ್ಲಿಸಿ ನಾಪತ್ತೆಯಾದರೆ, ಮತ್ತೋರ್ವ ಅಂಗಡಿಯಲ್ಲಿ ಮಾರಾಟ ಮನನ ಅಡಲು ತರಕಾರಿ ತರುವುದಾಗಿ ನಾಪತ್ತೆಯಾಗಿದ್ದಾರೆ.
ಮೈಸೂರಿಗೆ ಕಾರು ಬಾಡಿಗೆ ತೆಗೆದುಕೊಂಡು ಹೋದ ಯುವಕ ಎಲ್ ಎಲ್ ಆರ್ ನಗರದ ಬೀಡಾ ಅಂಗಡಿಯ ಮುಂಭಾಗದ ಜಾಗದಲ್ಲಿ ಬಿಟ್ಟು ನಾಪತ್ತೆಯಾಗಿದ್ದಾನೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದ ಬೋವಿ ಕಾಲೋನಿ, 6ನೇ ಕ್ರಾಸ್, ಎಸ್.ಬಿ.ಐ.ಬ್ಯಾಂಕ್ ಹಿಂಭಾಗದ ವಾಸಿ ಶಿವಾಜಿ ಎಂಬುವವರ ಮಗ ಮಂಜುನಾಥ ಎಂಬ 29 ವರ್ಷದ ಯುವಕ ನಾತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ -13 ರಂದು ಮೈಸೂರಿಗೆಂದು ಕಾರ್ ಬಾಡಿಗೆ ತೆಗೆದುಕೊಂಡು ಹೋದವರು ಕಾರನ್ನ ಎಲ್‍ಎಲ್‍ಆರ್ ನಗರದ ಬೀಡಾ ಅಂಗಡಿಯೆದುರು ನಿಲ್ಲಿಸಿ ತಮ್ಮ ಗೆಳಯನಿಗೆ ಫೋನ್ ಮೂಲಕ ತಿಳಿಸಿ, ಅಂದಿನಿಂದ ಕಾಣೆಯಾಗದ್ದಾನೆ.
ಈತನ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಗುಂಗುರು ಕೂದಲು ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ಮೈಮೇಲೆ ಗ್ರೇ ಕಲರ್ ಟೀಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಮಾಹಿತಿ ಸಿಕ್ಕಿದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣಾ ದೂರವಾಣಿ ನಂ 08182 -261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.
ಅದರಂತೆ ಟೆಂಪೋ ಸ್ಟ್ಯಾಂಡ್ ಬಳಿ ತರಕಾರಿ ಮಾರಾಟ ಮಾಡುತ್ತಿದ್ದ ಚಿನ್ನ ರಾಜು ಎಂಬ 26 ವರ್ಷದ ಯುವಕ ಎಪಿಎಂಸಿಗೆ ತೆರಳಿ ತರಕಾರಿ ತರುವುದಾಗಿ ಹೇಳಿ ನಾಪತ್ತೆಯಾಗಿದ್ದಾನೆ. ಈ ಕುರಿತು ಅವರ ಸಹೋದರಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/14810